Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
11 : 39

قُلْ اِنِّیْۤ اُمِرْتُ اَنْ اَعْبُدَ اللّٰهَ مُخْلِصًا لَّهُ الدِّیْنَ ۟ۙ

ಹೇಳಿರಿ: “ಆರಾಧನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಆರಾಧಿಸಬೇಕೆಂದು ನನಗೆ ಆಜ್ಞಾಪಿಸಲಾಗಿದೆ. info
التفاسير:

external-link copy
12 : 39

وَاُمِرْتُ لِاَنْ اَكُوْنَ اَوَّلَ الْمُسْلِمِیْنَ ۟

ನಾನು ಶರಣಾದವರಲ್ಲಿ ಮೊದಲಿಗನಾಗಬೇಕೆಂದೂ ನನಗೆ ಆಜ್ಞಾಪಿಸಲಾಗಿದೆ.” info
التفاسير:

external-link copy
13 : 39

قُلْ اِنِّیْۤ اَخَافُ اِنْ عَصَیْتُ رَبِّیْ عَذَابَ یَوْمٍ عَظِیْمٍ ۟

ಹೇಳಿರಿ: “ನಾನು ನನ್ನ ಪರಿಪಾಲಕನ (ಅಲ್ಲಾಹನ) ಆಜ್ಞೋಲ್ಲಂಘನೆ ಮಾಡಿದರೆ ಒಂದು ಭಯಾನಕ ದಿನದ ಶಿಕ್ಷೆಯನ್ನು ನಿಶ್ಚಯವಾಗಿಯೂ ನಾನು ಭಯಪಡುತ್ತೇನೆ.” info
التفاسير:

external-link copy
14 : 39

قُلِ اللّٰهَ اَعْبُدُ مُخْلِصًا لَّهٗ دِیْنِیْ ۟ۙۚ

ಹೇಳಿರಿ: “ನಾನು ನನ್ನ ಆರಾಧನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಆರಾಧಿಸುತ್ತೇನೆ.” info
التفاسير:

external-link copy
15 : 39

فَاعْبُدُوْا مَا شِئْتُمْ مِّنْ دُوْنِهٖ ؕ— قُلْ اِنَّ الْخٰسِرِیْنَ الَّذِیْنَ خَسِرُوْۤا اَنْفُسَهُمْ وَاَهْلِیْهِمْ یَوْمَ الْقِیٰمَةِ ؕ— اَلَا ذٰلِكَ هُوَ الْخُسْرَانُ الْمُبِیْنُ ۟

ನೀವು ಅವನನ್ನು ಬಿಟ್ಟು ನಿಮಗೆ ಇಷ್ಟವಿರುವವರನ್ನು ಆರಾಧಿಸಿರಿ. ಹೇಳಿರಿ: “ಪುನರುತ್ಥಾನ ದಿನದಂದು ಯಾರು ಸ್ವಯಂ ತನ್ನನ್ನು ಮತ್ತು ತನ್ನ ಜನರನ್ನು ನಷ್ಟಹೊಂದುವಂತೆ ಮಾಡುತ್ತಾನೋ ಅವರೇ ನಷ್ಟಹೊಂದಿದವರು. ಅದೇ ಅತ್ಯಂತ ಸ್ಪಷ್ಟ ನಷ್ಟ.” info
التفاسير:

external-link copy
16 : 39

لَهُمْ مِّنْ فَوْقِهِمْ ظُلَلٌ مِّنَ النَّارِ وَمِنْ تَحْتِهِمْ ظُلَلٌ ؕ— ذٰلِكَ یُخَوِّفُ اللّٰهُ بِهٖ عِبَادَهٗ ؕ— یٰعِبَادِ فَاتَّقُوْنِ ۟

ಅವರಿಗೆ ಅವರ ಮೇಲ್ಭಾಗದಲ್ಲಿ ಅಗ್ನಿಯ ಮೇಲ್ಕಟ್ಟುಗಳಿವೆ. ಅವರ ತಳಭಾಗದಲ್ಲೂ ಮೇಲ್ಕಟ್ಟುಗಳಿವೆ. ಅಲ್ಲಾಹು ತನ್ನ ದಾಸರನ್ನು ಇದೇ ಶಿಕ್ಷೆಯ ಬಗ್ಗೆ ಭಯಪಡಿಸುತ್ತಿದ್ದಾನೆ. ಓ ನನ್ನ ದಾಸರೇ! ನನ್ನನ್ನು ಭಯಪಡಿರಿ. info
التفاسير:

external-link copy
17 : 39

وَالَّذِیْنَ اجْتَنَبُوا الطَّاغُوْتَ اَنْ یَّعْبُدُوْهَا وَاَنَابُوْۤا اِلَی اللّٰهِ لَهُمُ الْبُشْرٰی ۚ— فَبَشِّرْ عِبَادِ ۟ۙ

ಯಾರು ಮಿಥ್ಯಾರಾಧ್ಯರ ಆರಾಧನೆಯನ್ನು ಬಿಟ್ಟು ಅಲ್ಲಾಹನ ಕಡೆಗೆ ವಿನಮ್ರವಾಗಿ ಮರಳುತ್ತಾರೋ ಅವರಿಗೆ ಸುವಾರ್ತೆಯಿದೆ. ನನ್ನ ದಾಸರಿಗೆ ಸುವಾರ್ತೆ ನೀಡಿರಿ. info
التفاسير:

external-link copy
18 : 39

الَّذِیْنَ یَسْتَمِعُوْنَ الْقَوْلَ فَیَتَّبِعُوْنَ اَحْسَنَهٗ ؕ— اُولٰٓىِٕكَ الَّذِیْنَ هَدٰىهُمُ اللّٰهُ وَاُولٰٓىِٕكَ هُمْ اُولُوا الْاَلْبَابِ ۟

ಅವರು ಯಾರೆಂದರೆ, ಮಾತುಗಳಿಗೆ ಕಿವಿಗೊಡುವವರು ಮತ್ತು ಅದರ ಅತ್ಯುತ್ತಮ ಭಾಗವನ್ನು ಅನುಸರಿಸುವವರು. ಇವರೇ ಅಲ್ಲಾಹನಿಂದ ಮಾರ್ಗದರ್ಶನ ಪಡೆದವರು ಮತ್ತು ಇವರೇ ಬುದ್ಧಿವಂತರು. info
التفاسير:

external-link copy
19 : 39

اَفَمَنْ حَقَّ عَلَیْهِ كَلِمَةُ الْعَذَابِ ؕ— اَفَاَنْتَ تُنْقِذُ مَنْ فِی النَّارِ ۟ۚ

ಯಾರ ಮೇಲೆ ಶಿಕ್ಷೆಯ ವಚನ ಖಾತ್ರಿಯಾಗಿದೆಯೋ (ಅವನಿಗೆ ಸಹಾಯ ಮಾಡಲು ನಿಮಗೆ ಸಾಧ್ಯವೇ)? ನರಕದಲ್ಲಿರುವವನನ್ನು ರಕ್ಷಿಸಲು ನಿಮಗೆ ಸಾಧ್ಯವೇ? info
التفاسير:

external-link copy
20 : 39

لٰكِنِ الَّذِیْنَ اتَّقَوْا رَبَّهُمْ لَهُمْ غُرَفٌ مِّنْ فَوْقِهَا غُرَفٌ مَّبْنِیَّةٌ ۙ— تَجْرِیْ مِنْ تَحْتِهَا الْاَنْهٰرُ ؕ۬— وَعْدَ اللّٰهِ ؕ— لَا یُخْلِفُ اللّٰهُ الْمِیْعَادَ ۟

ಯಾರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುತ್ತಾರೋ ಅವರಿಗೆ ಮಹಡಿಗಳಿವೆ. ಅವುಗಳ ಮೇಲೆಯೂ ಮಹಡಿಗಳನ್ನು ನಿರ್ಮಿಸಲಾಗಿವೆ. ಅವುಗಳ ತಳಭಾಗದಿಂದ ನದಿಗಳು ಹರಿಯುತ್ತವೆ. ಅದು ಅಲ್ಲಾಹನ ವಾಗ್ದಾನವಾಗಿದೆ. ಅಲ್ಲಾಹು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. info
التفاسير:

external-link copy
21 : 39

اَلَمْ تَرَ اَنَّ اللّٰهَ اَنْزَلَ مِنَ السَّمَآءِ مَآءً فَسَلَكَهٗ یَنَابِیْعَ فِی الْاَرْضِ ثُمَّ یُخْرِجُ بِهٖ زَرْعًا مُّخْتَلِفًا اَلْوَانُهٗ ثُمَّ یَهِیْجُ فَتَرٰىهُ مُصْفَرًّا ثُمَّ یَجْعَلُهٗ حُطَامًا ؕ— اِنَّ فِیْ ذٰلِكَ لَذِكْرٰی لِاُولِی الْاَلْبَابِ ۟۠

ಅಲ್ಲಾಹು ಆಕಾಶದಿಂದ ಮಳೆ ಸುರಿಸುವುದನ್ನು ನೀವು ನೋಡಿಲ್ಲವೇ? ನಂತರ ಅದನ್ನು ಭೂಮಿಯಲ್ಲಿರುವ ತೊರೆಗಳಿಗೆ ತಲುಪಿಸುತ್ತಾನೆ. ನಂತರ ಅದರಿಂದ ತರತರಹದ ಬಣ್ಣಗಳಿರುವ ಬೆಳೆಗಳನ್ನು ಉತ್ಪಾದಿಸುತ್ತಾನೆ. ನಂತರ ಅದು ಒಣಗಿ ಹಳದಿಯಾಗಿ ಮಾರ್ಪಡುವುದನ್ನು ನೀವು ಕಾಣುತ್ತೀರಿ. ನಂತರ ಅವನು ಅದನ್ನು ಕಸಕಡ್ಡಿಗಳಾಗಿ ಮಾಡುತ್ತಾನೆ. ನಿಶ್ಚಯವಾಗಿಯೂ ಬುದ್ಧಿವಂತರಿಗೆ ಅದರಲ್ಲಿ ಉಪದೇಶವಿದೆ. info
التفاسير: