Vertaling van de betekenissen Edele Qur'an - De Kannada vertaling - Hamza Batoer

Pagina nummer: 409:404 close

external-link copy
51 : 30

وَلَىِٕنْ اَرْسَلْنَا رِیْحًا فَرَاَوْهُ مُصْفَرًّا لَّظَلُّوْا مِنْ بَعْدِهٖ یَكْفُرُوْنَ ۟

ನಾವು ಬಿರುಗಾಳಿಯನ್ನು ಕಳುಹಿಸಿ ಅದು ಅವರ ಹೊಲಗಳನ್ನು ಹಳದಿ ಬಣ್ಣಕ್ಕೆ ತಿರುಗಿಸುವುದನ್ನು (ಬಾಡಿಸುವುದನ್ನು) ಕಂಡರೂ ಅವರು ಅದರ ಬಳಿಕವೂ ಕೃತಘ್ನರಾಗಿಯೇ ಇರುವರು. info
التفاسير:

external-link copy
52 : 30

فَاِنَّكَ لَا تُسْمِعُ الْمَوْتٰى وَلَا تُسْمِعُ الصُّمَّ الدُّعَآءَ اِذَا وَلَّوْا مُدْبِرِیْنَ ۟

ಸತ್ತವರಿಗೆ ಕೇಳುವಂತೆ ಮಾಡಲು ನಿಮಗೆ ಖಂಡಿತ ಸಾಧ್ಯವಿಲ್ಲ. ಕಿವುಡರು ಬೆನ್ನು ತಿರುಗಿಸಿ ನಡೆದರೆ ಅವರಿಗೆ ಕರೆ ಕೇಳುವಂತೆ ಮಾಡಲು ಕೂಡ ನಿಮಗೆ ಸಾಧ್ಯವಿಲ್ಲ. info
التفاسير:

external-link copy
53 : 30

وَمَاۤ اَنْتَ بِهٰدِ الْعُمْیِ عَنْ ضَلٰلَتِهِمْ ؕ— اِنْ تُسْمِعُ اِلَّا مَنْ یُّؤْمِنُ بِاٰیٰتِنَا فَهُمْ مُّسْلِمُوْنَ ۟۠

ಕುರುಡರನ್ನು ಅವರ ದುರ್ಮಾರ್ಗದಿಂದ ಮುಕ್ತಗೊಳಿಸಿ ಸನ್ಮಾರ್ಗಕ್ಕೆ ದಾರಿ ತೋರಿಸಲು ನಿಮಗೆ ಸಾಧ್ಯವಿಲ್ಲ. ನಮ್ಮ ವಚನಗಳಲ್ಲಿ ವಿಶ್ವಾಸವಿಟ್ಟು ನಂತರ ಶರಣಾಗುವವರು ಯಾರೋ ಅವರಿಗೆ ಮಾತ್ರ ನೀವು ಕೇಳುವಂತೆ ಮಾಡಬಲ್ಲಿರಿ. info
التفاسير:

external-link copy
54 : 30

اَللّٰهُ الَّذِیْ خَلَقَكُمْ مِّنْ ضُؔعْفٍ ثُمَّ جَعَلَ مِنْ بَعْدِ ضُؔعْفٍ قُوَّةً ثُمَّ جَعَلَ مِنْ بَعْدِ قُوَّةٍ ضُؔعْفًا وَّشَیْبَةً ؕ— یَخْلُقُ مَا یَشَآءُ ۚ— وَهُوَ الْعَلِیْمُ الْقَدِیْرُ ۟

ಅಲ್ಲಾಹು ನಿಮ್ಮನ್ನು ದುರ್ಬಲ ಸ್ಥಿತಿಯಲ್ಲಿ ಸೃಷ್ಟಿಸಿದನು. ನಂತರ ದೌರ್ಬಲ್ಯದ ಬಳಿಕ ಅವನು ನಿಮಗೆ ಶಕ್ತಿಯನ್ನು ನೀಡಿದನು. ನಂತರ ಶಕ್ತಿಯನ್ನು ನೀಡಿದ ಬಳಿಕ ಅವನು ನಿಮ್ಮನ್ನು ಪುನಃ ದುರ್ಬಲರಾಗಿ ಮತ್ತು ಕೂದಲು ನೆರೆತವರಾಗಿ ಮಾಡಿದನು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ. info
التفاسير:

external-link copy
55 : 30

وَیَوْمَ تَقُوْمُ السَّاعَةُ یُقْسِمُ الْمُجْرِمُوْنَ ۙ۬— مَا لَبِثُوْا غَیْرَ سَاعَةٍ ؕ— كَذٰلِكَ كَانُوْا یُؤْفَكُوْنَ ۟

ಅಂತ್ಯಸಮಯವು ಸಂಭವಿಸುವ ದಿನದಂದು ಅಪರಾಧಿಗಳು ಆಣೆ ಮಾಡುತ್ತಾ, “ನಾವು (ಇಹಲೋಕದಲ್ಲಿ) ಒಂದು ತಾಸಿಗಿಂತ ಹೆಚ್ಚು ವಾಸವಾಗಿರಲಿಲ್ಲ” ಎಂದು ಹೇಳುವರು. ಈ ರೀತಿ ಅವರನ್ನು (ಸತ್ಯದಿಂದ) ತಪ್ಪಿಸಿಬಿಡಲಾಗಿದೆ. info
التفاسير:

external-link copy
56 : 30

وَقَالَ الَّذِیْنَ اُوْتُوا الْعِلْمَ وَالْاِیْمَانَ لَقَدْ لَبِثْتُمْ فِیْ كِتٰبِ اللّٰهِ اِلٰى یَوْمِ الْبَعْثِ ؗ— فَهٰذَا یَوْمُ الْبَعْثِ وَلٰكِنَّكُمْ كُنْتُمْ لَا تَعْلَمُوْنَ ۟

ಜ್ಞಾನ ಮತ್ತು ವಿಶ್ವಾಸವನ್ನು ನೀಡಲಾದವರು ಹೇಳುವರು: “ನೀವು ಅಲ್ಲಾಹನ ದಾಖಲೆಯಲ್ಲಿರುವಂತೆ ಪುನರುತ್ಥಾನ ದಿನದವರೆಗೆ ವಾಸವಾಗಿದ್ದಿರಿ. ಇಗೋ ಇದೇ ಪುನರುತ್ಥಾನದ ದಿನ! ಆದರೆ ನಿಮಗೆ ಅದು ತಿಳಿದಿಲ್ಲ.” info
التفاسير:

external-link copy
57 : 30

فَیَوْمَىِٕذٍ لَّا یَنْفَعُ الَّذِیْنَ ظَلَمُوْا مَعْذِرَتُهُمْ وَلَا هُمْ یُسْتَعْتَبُوْنَ ۟

ಅಕ್ರಮಿಗಳಿಗೆ ಆ ದಿನ ಅವರ ನೆಪಗಳು ಯಾವುದೇ ಉಪಕಾರ ಮಾಡುವುದಿಲ್ಲ. ಅವರೊಡನೆ ಪಶ್ಚಾತ್ತಾಪಪಡುವಂತೆಯೂ ಕೇಳಿಕೊಳ್ಳಲಾಗುವುದಿಲ್ಲ. info
التفاسير:

external-link copy
58 : 30

وَلَقَدْ ضَرَبْنَا لِلنَّاسِ فِیْ هٰذَا الْقُرْاٰنِ مِنْ كُلِّ مَثَلٍ ؕ— وَلَىِٕنْ جِئْتَهُمْ بِاٰیَةٍ لَّیَقُوْلَنَّ الَّذِیْنَ كَفَرُوْۤا اِنْ اَنْتُمْ اِلَّا مُبْطِلُوْنَ ۟

ನಾವು ಈ ಕುರ್‌ಆನ್‍ನಲ್ಲಿ ಜನರಿಗೋಸ್ಕರ ಎಲ್ಲ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ನೀವು ಒಂದು ದೃಷ್ಟಾಂತದೊಂದಿಗೆ ಅವರ ಬಳಿ ತೆರಳಿದರೂ ಸತ್ಯನಿಷೇಧಿಗಳು ಹೇಳುವರು: “ನೀವು ಖಂಡಿತವಾಗಿಯೂ ಮಿಥ್ಯವಾದಿಗಳಾಗಿದ್ದೀರಿ.” info
التفاسير:

external-link copy
59 : 30

كَذٰلِكَ یَطْبَعُ اللّٰهُ عَلٰى قُلُوْبِ الَّذِیْنَ لَا یَعْلَمُوْنَ ۟

ಈ ರೀತಿ ಅಲ್ಲಾಹು (ಸತ್ಯವನ್ನು) ಅರ್ಥಮಾಡಿಕೊಳ್ಳಲು ಮುಂದಾಗದವರ ಹೃದಯಗಳಿಗೆ ಮೊಹರು ಹಾಕುವನು. info
التفاسير:

external-link copy
60 : 30

فَاصْبِرْ اِنَّ وَعْدَ اللّٰهِ حَقٌّ وَّلَا یَسْتَخِفَّنَّكَ الَّذِیْنَ لَا یُوْقِنُوْنَ ۟۠

ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ದೃಢವಿಶ್ವಾಸವಿಲ್ಲದ ಆ ಜನರು ನಿಮ್ಮನ್ನು ತಾಳ್ಮೆಗೆಡುವಂತೆ ಮಾಡದಿರಲಿ. info
التفاسير: