Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
16 : 3

اَلَّذِیْنَ یَقُوْلُوْنَ رَبَّنَاۤ اِنَّنَاۤ اٰمَنَّا فَاغْفِرْ لَنَا ذُنُوْبَنَا وَقِنَا عَذَابَ النَّارِ ۟ۚ

ಅವರು (ದೇವಭಯವುಳ್ಳವರು) ಯಾರೆಂದರೆ: “ಓ ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು” ಎಂದು ಹೇಳುವವರು. info
التفاسير:

external-link copy
17 : 3

اَلصّٰبِرِیْنَ وَالصّٰدِقِیْنَ وَالْقٰنِتِیْنَ وَالْمُنْفِقِیْنَ وَالْمُسْتَغْفِرِیْنَ بِالْاَسْحَارِ ۟

ಅವರು ತಾಳ್ಮೆಯುಳ್ಳವರು, ಸತ್ಯವಂತರು, ವಿಧೇಯರು, ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಮತ್ತು ರಾತ್ರಿಯ ಅಂತ್ಯ ಯಾಮಗಳಲ್ಲಿ ಕ್ಷಮೆಯಾಚಿಸುವವರು. info
التفاسير:

external-link copy
18 : 3

شَهِدَ اللّٰهُ اَنَّهٗ لَاۤ اِلٰهَ اِلَّا هُوَ ۙ— وَالْمَلٰٓىِٕكَةُ وَاُولُوا الْعِلْمِ قَآىِٕمًا بِالْقِسْطِ ؕ— لَاۤ اِلٰهَ اِلَّا هُوَ الْعَزِیْزُ الْحَكِیْمُ ۟ؕ

ತನ್ನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಎಂದು ಅಲ್ಲಾಹು ಸಾಕ್ಷಿವಹಿಸಿದ್ದಾನೆ, ಅವನ ದೇವದೂತರುಗಳು ಮತ್ತು ವಿದ್ವಾಂಸರು (ಕೂಡ ಸಾಕ್ಷಿವಹಿಸಿದ್ದಾರೆ). ಅವನು ಸ್ಥಿರವಾಗಿ ನ್ಯಾಯವನ್ನು ಪಾಲಿಸುವವನು. ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. info
التفاسير:

external-link copy
19 : 3

اِنَّ الدِّیْنَ عِنْدَ اللّٰهِ الْاِسْلَامُ ۫— وَمَا اخْتَلَفَ الَّذِیْنَ اُوْتُوا الْكِتٰبَ اِلَّا مِنْ بَعْدِ مَا جَآءَهُمُ الْعِلْمُ بَغْیًا بَیْنَهُمْ ؕ— وَمَنْ یَّكْفُرْ بِاٰیٰتِ اللّٰهِ فَاِنَّ اللّٰهَ سَرِیْعُ الْحِسَابِ ۟

ನಿಶ್ಚಯವಾಗಿಯೂ ಅಲ್ಲಾಹನ ಬಳಿ (ಸ್ವೀಕಾರವಾಗುವ) ಧರ್ಮವು ಇಸ್ಲಾಮ್ ಮಾತ್ರ. ಗ್ರಂಥ ನೀಡಲಾದವರು ಅವರಿಗೆ ಜ್ಞಾನವು ಬಂದ ಬಳಿಕವೇ ಹೊರತು ಭಿನ್ನರಾಗಲಿಲ್ಲ. ಅದು ಅವರು ಪರಸ್ಪರ ಹೊಂದಿದ್ದ ವಿದ್ವೇಷ ಮತ್ತು ಅಸೂಯೆಯ ಕಾರಣದಿಂದಾಗಿತ್ತು. ಯಾರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ಅತಿ ಶೀಘ್ರವಾಗಿ ವಿಚಾರಣೆ ಮಾಡುವನು. info
التفاسير:

external-link copy
20 : 3

فَاِنْ حَآجُّوْكَ فَقُلْ اَسْلَمْتُ وَجْهِیَ لِلّٰهِ وَمَنِ اتَّبَعَنِ ؕ— وَقُلْ لِّلَّذِیْنَ اُوْتُوا الْكِتٰبَ وَالْاُمِّیّٖنَ ءَاَسْلَمْتُمْ ؕ— فَاِنْ اَسْلَمُوْا فَقَدِ اهْتَدَوْا ۚ— وَاِنْ تَوَلَّوْا فَاِنَّمَا عَلَیْكَ الْبَلٰغُ ؕ— وَاللّٰهُ بَصِیْرٌ بِالْعِبَادِ ۟۠

ಅದರ ನಂತರವೂ ಅವರು ನಿಮ್ಮೊಡನೆ ತರ್ಕ ಮಾಡಿದರೆ ನೀವು ಹೇಳಿರಿ: “ನಾನು ಮತ್ತು ನನ್ನ ಅನುಯಾಯಿಗಳು ನಮ್ಮ ಮುಖಗಳನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗಿಸಿದ್ದೇವೆ.” ಗ್ರಂಥ ನೀಡಲಾದವರೊಂದಿಗೆ ಮತ್ತು ಅನಕ್ಷರಸ್ಥರೊಂದಿಗೆ (ಅರಬ್ ಬಹುದೇವಾರಾಧಕರೊಂದಿಗೆ) ಕೇಳಿರಿ: “ನೀವು ಶರಣಾಗಿದ್ದೀರಾ?” ಅವರು ಶರಣಾದರೆ ಅವರು ಸನ್ಮಾರ್ಗವನ್ನು ಪಡೆಯುತ್ತಾರೆ. ಆದರೆ ಅವರು ಮುಖ ತಿರುಗಿಸಿ ನಡೆದರೆ ನಿಮ್ಮ ಕರ್ತವ್ಯವು ಅವರಿಗೆ ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ. info
التفاسير:

external-link copy
21 : 3

اِنَّ الَّذِیْنَ یَكْفُرُوْنَ بِاٰیٰتِ اللّٰهِ وَیَقْتُلُوْنَ النَّبِیّٖنَ بِغَیْرِ حَقٍّ ۙ— وَّیَقْتُلُوْنَ الَّذِیْنَ یَاْمُرُوْنَ بِالْقِسْطِ مِنَ النَّاسِ ۙ— فَبَشِّرْهُمْ بِعَذَابٍ اَلِیْمٍ ۟

ಅಲ್ಲಾಹನ ವಚನಗಳನ್ನು ನಿಷೇಧಿಸುವವರು, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವವರು ಮತ್ತು ನ್ಯಾಯ ಪಾಲಿಸಲು ಆದೇಶಿಸುವ ಜನರನ್ನು ಹತ್ಯೆ ಮಾಡುವವರು ಯಾರೋ—ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ. info
التفاسير:

external-link copy
22 : 3

اُولٰٓىِٕكَ الَّذِیْنَ حَبِطَتْ اَعْمَالُهُمْ فِی الدُّنْیَا وَالْاٰخِرَةِ ؗ— وَمَا لَهُمْ مِّنْ نّٰصِرِیْنَ ۟

ಇಹಲೋಕದಲ್ಲೂ, ಪರಲೋಕದಲ್ಲೂ ಅವರ ಕರ್ಮಗಳು ನಿಷ್ಫಲವಾಗಿವೆ. ಅವರಿಗೆ ಯಾವುದೇ ಸಹಾಯಕರಿಲ್ಲ. info
التفاسير: