Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
191 : 2

وَاقْتُلُوْهُمْ حَیْثُ ثَقِفْتُمُوْهُمْ وَاَخْرِجُوْهُمْ مِّنْ حَیْثُ اَخْرَجُوْكُمْ وَالْفِتْنَةُ اَشَدُّ مِنَ الْقَتْلِ ۚ— وَلَا تُقٰتِلُوْهُمْ عِنْدَ الْمَسْجِدِ الْحَرَامِ حَتّٰی یُقٰتِلُوْكُمْ فِیْهِ ۚ— فَاِنْ قٰتَلُوْكُمْ فَاقْتُلُوْهُمْ ؕ— كَذٰلِكَ جَزَآءُ الْكٰفِرِیْنَ ۟

ನೀವು ಅವರನ್ನು ಕಂಡಲ್ಲಿ ಕೊಲ್ಲಿರಿ ಮತ್ತು ಅವರು ನಿಮ್ಮನ್ನು ಹೊರಹಾಕಿದ ಸ್ಥಳದಿಂದ ಅವರನ್ನೂ ಹೊರಹಾಕಿರಿ. ಕ್ಷೋಭೆಯು ಕೊಲೆಗಿಂತಲೂ ಘೋರವಾಗಿದೆ. ಮಸ್ಜಿದುಲ್ ಹರಾಮ್‍ನ ಬಳಿ ಅವರು ನಿಮ್ಮೊಂದಿಗೆ ಯುದ್ಧ ಮಾಡುವ ತನಕ ನೀವು ಅವರೊಂದಿಗೆ ಅಲ್ಲಿ ಯುದ್ಧ ಮಾಡಬೇಡಿ. ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಅವರನ್ನು ಕೊಲ್ಲಿರಿ. ಈ ರೀತಿ ಸತ್ಯನಿಷೇಧಿಗಳಿಗೆ ಪ್ರತಿಫಲ ನೀಡಲಾಗುತ್ತದೆ. info
التفاسير:

external-link copy
192 : 2

فَاِنِ انْتَهَوْا فَاِنَّ اللّٰهَ غَفُوْرٌ رَّحِیْمٌ ۟

ಆದರೆ ಅವರೇನಾದರೂ ನಿಲ್ಲಿಸಿದರೆ ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ. info
التفاسير:

external-link copy
193 : 2

وَقٰتِلُوْهُمْ حَتّٰی لَا تَكُوْنَ فِتْنَةٌ وَّیَكُوْنَ الدِّیْنُ لِلّٰهِ ؕ— فَاِنِ انْتَهَوْا فَلَا عُدْوَانَ اِلَّا عَلَی الظّٰلِمِیْنَ ۟

ಕ್ಷೋಭೆ ನಿವಾರಣೆಯಾಗುವ ತನಕ ಮತ್ತು ಧರ್ಮವು ಅಲ್ಲಾಹನಿಗಾಗುವ ತನಕ ಅವರೊಂದಿಗೆ ಯುದ್ಧ ಮಾಡಿರಿ. ಆದರೆ ಅವರೇನಾದರೂ ನಿಲ್ಲಿಸಿದರೆ, ಮತ್ತೆ ಅಕ್ರಮವೆಸಗಿದವರ ಮೇಲೆಯೇ ಹೊರತು ಇನ್ನಾರ ಮೇಲೂ ಅತಿರೇಕವೆಸಗಬೇಡಿ. info
التفاسير:

external-link copy
194 : 2

اَلشَّهْرُ الْحَرَامُ بِالشَّهْرِ الْحَرَامِ وَالْحُرُمٰتُ قِصَاصٌ ؕ— فَمَنِ اعْتَدٰی عَلَیْكُمْ فَاعْتَدُوْا عَلَیْهِ بِمِثْلِ مَا اعْتَدٰی عَلَیْكُمْ ۪— وَاتَّقُوا اللّٰهَ وَاعْلَمُوْۤا اَنَّ اللّٰهَ مَعَ الْمُتَّقِیْنَ ۟

ಪವಿತ್ರ ತಿಂಗಳ ಬದಲಿಗೆ ಪವಿತ್ರ ತಿಂಗಳು. ಪವಿತ್ರವಾದ ಎಲ್ಲವೂ ಅದಲಿ ಬದಲಿಯಾಗಿ ಇರುವುದಾಗಿವೆ. ನಿಮ್ಮ ಮೇಲೆ ಯಾರಾದರೂ ಅತಿರೇಕವೆಸಗಿದರೆ, ಅವನು ನಿಮ್ಮ ಮೇಲೆ ಅತಿರೇಕವೆಸಗಿದಂತೆಯೇ ನೀವು ಅವನ ಮೇಲೆ ಅತಿರೇಕವೆಸಗಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅವನನ್ನು ಭಯಪಡುವವರ ಜೊತೆಗಿದ್ದಾನೆ. info
التفاسير:

external-link copy
195 : 2

وَاَنْفِقُوْا فِیْ سَبِیْلِ اللّٰهِ وَلَا تُلْقُوْا بِاَیْدِیْكُمْ اِلَی التَّهْلُكَةِ ۛۚ— وَاَحْسِنُوْا ۛۚ— اِنَّ اللّٰهَ یُحِبُّ الْمُحْسِنِیْنَ ۟

ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ. ನಿಮ್ಮ ಕೈಗಳನ್ನು ನೀವೇ ವಿನಾಶಕ್ಕೆ ತಳ್ಳಬೇಡಿ. ಒಳಿತು ಮಾಡಿರಿ. ನಿಶ್ಚಯವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಪ್ರೀತಿಸುತ್ತಾನೆ. info
التفاسير:

external-link copy
196 : 2

وَاَتِمُّوا الْحَجَّ وَالْعُمْرَةَ لِلّٰهِ ؕ— فَاِنْ اُحْصِرْتُمْ فَمَا اسْتَیْسَرَ مِنَ الْهَدْیِ ۚ— وَلَا تَحْلِقُوْا رُءُوْسَكُمْ حَتّٰی یَبْلُغَ الْهَدْیُ مَحِلَّهٗ ؕ— فَمَنْ كَانَ مِنْكُمْ مَّرِیْضًا اَوْ بِهٖۤ اَذًی مِّنْ رَّاْسِهٖ فَفِدْیَةٌ مِّنْ صِیَامٍ اَوْ صَدَقَةٍ اَوْ نُسُكٍ ۚ— فَاِذَاۤ اَمِنْتُمْ ۥ— فَمَنْ تَمَتَّعَ بِالْعُمْرَةِ اِلَی الْحَجِّ فَمَا اسْتَیْسَرَ مِنَ الْهَدْیِ ۚ— فَمَنْ لَّمْ یَجِدْ فَصِیَامُ ثَلٰثَةِ اَیَّامٍ فِی الْحَجِّ وَسَبْعَةٍ اِذَا رَجَعْتُمْ ؕ— تِلْكَ عَشَرَةٌ كَامِلَةٌ ؕ— ذٰلِكَ لِمَنْ لَّمْ یَكُنْ اَهْلُهٗ حَاضِرِی الْمَسْجِدِ الْحَرَامِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ شَدِیْدُ الْعِقَابِ ۟۠

ಅಲ್ಲಾಹನಿಗಾಗಿ ಹಜ್ಜ್ ಮತ್ತು ಉಮ್ರಗಳನ್ನು ಪೂರ್ತಿಗೊಳಿಸಿರಿ. ನಿಮ್ಮನ್ನು (ದಾರಿ ಮಧ್ಯೆ) ತಡೆಯಲಾದರೆ ನಿಮಗೆ ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಿರಿ.[1] ಬಲಿಮೃಗವು ಅದರ ಸ್ಥಳವನ್ನು ತಲುಪುವ ತನಕ ಕೇಶಮುಂಡನ ಮಾಡಬೇಡಿ. ನಿಮ್ಮಲ್ಲಿ ಯಾರಾದರೂ ಅನಾರೋಗ್ಯದಲ್ಲಿದ್ದು ಅಥವಾ ತಲೆಯಲ್ಲಿ ಏನಾದರೂ ತೊಂದರೆಯಿದ್ದು, (ಕೇಶ ಮುಂಡನ ಮಾಡಿದ್ದರೆ) ಅದಕ್ಕೆ ಪರಿಹಾರವಾಗಿ ಉಪವಾಸ ಅಥವಾ ದಾನಧರ್ಮ ಅಥವಾ ಬಲಿಕರ್ಮ ನಿರ್ವಹಿಸಲಿ. ಆದರೆ ನೀವು ನಿರ್ಭಯ ಸ್ಥಿತಿಯಲ್ಲಿದ್ದು, ನಿಮ್ಮಲ್ಲಿ ಯಾರಾದರೂ ಉಮ್ರಾ ನಿರ್ವಹಿಸಿ ಹಜ್ಜ್ ತನಕ ವಿಶ್ರಾಂತಿ ಪಡೆದರೆ, ಅವನು ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಲಿ. ಯಾರಿಗೆ ಬಲಿಮೃಗ ಸಿಗುವುದಿಲ್ಲವೋ ಅವನು ಹಜ್ಜ್‌ನ ಸಮಯದಲ್ಲಿ ಮೂರು ದಿನ ಮತ್ತು (ಊರಿಗೆ) ಮರಳಿದ ಬಳಿಕ ಏಳು ದಿನ; ಒಟ್ಟು ಹತ್ತು ದಿನ ಉಪವಾಸ ಆಚರಿಸಲಿ. ಈ ನಿಯಮವಿರುವುದು ಮಸ್ಜಿದುಲ್ ಹರಾಮ್‍ನ ನಿವಾಸಿಗಳಲ್ಲದವರಿಗೆ ಮಾತ್ರ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅತಿ ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ. info

[1] ದಾರಿ ಮಧ್ಯೆ ಶತ್ರುಗಳು ನಿಮ್ಮನ್ನು ತಡೆದರೆ, ಅಥವಾ ತೀವ್ರ ಅನಾರೋಗ್ಯದಿಂದಾಗಿ ಪ್ರಯಾಣ ಮುಂದುವರಿಸಲು ನಿಮಗೆ ಸಾಧ್ಯವಾಗದೆ ಹೋದರೆ, ಬಲಿಮೃಗವನ್ನು ಬಲಿ ನೀಡಿ, ಕೇಶ ಮುಂಡನ ಮಾಡಿ ಇಹ್ರಾಮ್‌ನಿಂದ ಮುಕ್ತರಾಗಬಹುದು.

التفاسير: