Vertaling van de betekenissen Edele Qur'an - De Kannada vertaling - Bashir Maisoeri

ಅನ್ನಜ್ಮ್

external-link copy
1 : 53

وَالنَّجْمِ اِذَا هَوٰی ۟ۙ

ನಕ್ಷತ್ರದಾಣೆ, ಅದು ಅಸ್ತಮಿಸಿದಾಗ. info
التفاسير:

external-link copy
2 : 53

مَا ضَلَّ صَاحِبُكُمْ وَمَا غَوٰی ۟ۚ

ನಿಮ್ಮ ಸಂಗಡಿಗ (ಮುಹಮ್ಮದ್) ದಾರಿತಪ್ಪಿಲ್ಲ, ಮತ್ತು ಮಾರ್ಗ ಭ್ರಷ್ಟನೂ ಅಲ್ಲ. info
التفاسير:

external-link copy
3 : 53

وَمَا یَنْطِقُ عَنِ الْهَوٰی ۟ؕۚ

ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ. info
التفاسير:

external-link copy
4 : 53

اِنْ هُوَ اِلَّا وَحْیٌ یُّوْحٰی ۟ۙ

ಅದು ಅವರಿಗೆ ಸಂದೇಶ ನೀಡಲಾದ ದಿವ್ಯವಾಣಿ ಆಗಿರುತ್ತದೆ. info
التفاسير:

external-link copy
5 : 53

عَلَّمَهٗ شَدِیْدُ الْقُوٰی ۟ۙ

ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ. info
التفاسير:

external-link copy
6 : 53

ذُوْ مِرَّةٍ ؕ— فَاسْتَوٰی ۟ۙ

ಅವನು ಬಲಿಷ್ಠನಾಗಿರುವನು, ಅನಂತರ ಅವನು ಪ್ರತ್ಯಕ್ಷನಾದನು. info
التفاسير:

external-link copy
7 : 53

وَهُوَ بِالْاُفُقِ الْاَعْلٰی ۟ؕ

ಅವನು ಉನ್ನತ ದಿಗಂತದ ತುದಿಯಲ್ಲಿದ್ದನು. info
التفاسير:

external-link copy
8 : 53

ثُمَّ دَنَا فَتَدَلّٰی ۟ۙ

ತರುವಾಯ ಅವನು ಹತ್ತಿರವಾದನು, ಬಳಿಕ ಇನ್ನೂ ನಿಕಟನಾದನು. info
التفاسير:

external-link copy
9 : 53

فَكَانَ قَابَ قَوْسَیْنِ اَوْ اَدْنٰی ۟ۚ

ಎರಡು ಬಿಲ್ಲುಗಳಷ್ಟು ಅಥವ ಅದಕ್ಕಿಂತಲೂ ಸಮೀಪ. info
التفاسير:

external-link copy
10 : 53

فَاَوْحٰۤی اِلٰی عَبْدِهٖ مَاۤ اَوْحٰی ۟ؕ

ಆಗ ಅವನು ಅಲ್ಲಾಹನ ದಾಸನೆಡೆಗೆ ತಲುಪಿಸಬೇಕಾದುದನ್ನು ದಿವ್ಯವಾಣಿಯನ್ನು ತಲುಪಿಸಿದನು. info
التفاسير:

external-link copy
11 : 53

مَا كَذَبَ الْفُؤَادُ مَا رَاٰی ۟

ಪೈಗಂಬರರು ನೋಡಿದ್ದನ್ನು ಅವರ ಮನಸ್ಸು ಸುಳ್ಳಾಗಿಸಲಿಲ್ಲ. info
التفاسير:

external-link copy
12 : 53

اَفَتُمٰرُوْنَهٗ عَلٰی مَا یَرٰی ۟

ಇನ್ನು ಅವರು ಕಣ್ಣಾರೆ ಕಂಡಿರುವುದರ ಬಗ್ಗೆ ನೀವು ತರ್ಕ ಮಾಡುತ್ತಿರುವಿರಾ ? info
التفاسير:

external-link copy
13 : 53

وَلَقَدْ رَاٰهُ نَزْلَةً اُخْرٰی ۟ۙ

ಪೈಗಂಬರರು ಅವರನ್ನು (ಜಿಬ್ರೀಲರನ್ನು) ಮತ್ತೊಂದು ಸಲ ಕಂಡಿದ್ದರು. info
التفاسير:

external-link copy
14 : 53

عِنْدَ سِدْرَةِ الْمُنْتَهٰی ۟

'ಸಿದ್‌ರತುಲ್ ಮುಂತಹಾ'ದ ಬಳಿ. info
التفاسير:

external-link copy
15 : 53

عِنْدَهَا جَنَّةُ الْمَاْوٰی ۟ؕ

ಅದರ ಸಮೀಪದಲ್ಲಿ 'ಜನ್ನತುಲ್ ಮಾವಾ' ಇದೆ. info
التفاسير:

external-link copy
16 : 53

اِذْ یَغْشَی السِّدْرَةَ مَا یَغْشٰی ۟ۙ

ಆಗ 'ಸಿದ್ರ್ ವೃಕ್ಷ'(ಬಾರೆ ವೃಕ್ಷ)ವನ್ನು ಆಚ್ಛಾದಿಸ ಬೇಕಾದದ್ದು ಆಚ್ಛಾದಿಸುತ್ತಿತ್ತು. info
التفاسير:

external-link copy
17 : 53

مَا زَاغَ الْبَصَرُ وَمَا طَغٰی ۟

ಪೈಗಂಬರರ ದೃಷ್ಟಿಯು ತಪ್ಪಲಿಲ್ಲ ಮತ್ತು ಮೇರೆಮೀರಲೂ ಇಲ್ಲ. info
التفاسير:

external-link copy
18 : 53

لَقَدْ رَاٰی مِنْ اٰیٰتِ رَبِّهِ الْكُبْرٰی ۟

ನಿಜವಾಗಿಯೂ ಅವರು ತಮ್ಮ ಪ್ರಭುವಿನ ಮಹಾ ನಿದರ್ಶನಗಳಲ್ಲಿ ಕೆಲವನ್ನು ಕಂಡರು. info
التفاسير:

external-link copy
19 : 53

اَفَرَءَیْتُمُ اللّٰتَ وَالْعُزّٰی ۟ۙ

ನೀವು ಲಾತ್ ಉಝ್ಝಾಗಳ ಬಗ್ಗೆ ಯೋಚಿಸಿದ್ದೀರಾ ? info
التفاسير:

external-link copy
20 : 53

وَمَنٰوةَ الثَّالِثَةَ الْاُخْرٰی ۟

ಮೂರನೆಯದಾದ 'ಮನಾತ'ನ ಬಗ್ಗೆ ? info
التفاسير:

external-link copy
21 : 53

اَلَكُمُ الذَّكَرُ وَلَهُ الْاُ ۟

ಏನು ನಿಮಗೆ ಪುತ್ರರು ಮತ್ತು ಅಲ್ಲಾಹನಿಗೆ ಪುತ್ರಿಯರೇ ? info
التفاسير:

external-link copy
22 : 53

تِلْكَ اِذًا قِسْمَةٌ ضِیْزٰی ۟

ಹಾಗಿದ್ದರೆ ಇದಂತು ಘೋರ ಅನ್ಯಾಯದ ಹಂಚುವಿಕೆಯಾಗಿದೆ. info
التفاسير:

external-link copy
23 : 53

اِنْ هِیَ اِلَّاۤ اَسْمَآءٌ سَمَّیْتُمُوْهَاۤ اَنْتُمْ وَاٰبَآؤُكُمْ مَّاۤ اَنْزَلَ اللّٰهُ بِهَا مِنْ سُلْطٰنٍ ؕ— اِنْ یَّتَّبِعُوْنَ اِلَّا الظَّنَّ وَمَا تَهْوَی الْاَنْفُسُ ۚ— وَلَقَدْ جَآءَهُمْ مِّنْ رَّبِّهِمُ الْهُدٰی ۟ؕ

ವಾಸ್ತವದಲ್ಲಿ ಇವು (ವಿಗ್ರಹಗಳು) ನೀವೂ, ನಿಮ್ಮ ಪೂರ್ವಿಕರು ಇಟ್ಟಿರುವ ಕೆಲವು ನಾಮಗಳ ಹೊರತು ಬೇರೇನೂ ಅಲ್ಲ. ಇವುಗಳ ಬಗ್ಗೆ ಅಲ್ಲಾಹನು ಯಾವ ಆಧಾರವನ್ನು ಇಳಿಸಿಲ್ಲ. ಅವರು ಕೇವಲ ಊಹೆಯನ್ನು ಹಾಗು ತಮ್ಮ ಸ್ವೇಚ್ಛೆಯನ್ನು ಅನುಸರಿಸುತ್ತಿದ್ದಾರೆ ಮತ್ತು ನಿಜವಾಗಿಯೂ ಅವರ ಬಳಿ ಅವರ ಪ್ರಭುವಿನ ಕಡೆಯಿಂದ ಸನ್ಮಾರ್ಗವೂ ಬಂದಿರುತ್ತದೆ. info
التفاسير:

external-link copy
24 : 53

اَمْ لِلْاِنْسَانِ مَا تَمَنّٰی ۟ؗۖ

ಏನು ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಲಭಿಸುವುದೇ ? info
التفاسير:

external-link copy
25 : 53

فَلِلّٰهِ الْاٰخِرَةُ وَالْاُوْلٰی ۟۠

ಆದರೆ ಇಹಲೋಕ ಮತ್ತು ಪರಲೋಕ ಅಲ್ಲಾಹನದ್ದಾಗಿದೆ. info
التفاسير:

external-link copy
26 : 53

وَكَمْ مِّنْ مَّلَكٍ فِی السَّمٰوٰتِ لَا تُغْنِیْ شَفَاعَتُهُمْ شَیْـًٔا اِلَّا مِنْ بَعْدِ اَنْ یَّاْذَنَ اللّٰهُ لِمَنْ یَّشَآءُ وَیَرْضٰی ۟

ಆಕಾಶಗಳಲ್ಲಿ ಅದೆಷ್ಟೋ ದೇವಚರರಿದ್ದಾರೆ. ಅವರ ಶಿಫಾರಸ್ಸು (ಯಾರಿಗೂ) ಯಾವ ಪ್ರಯೋಜನಕ್ಕೂ ಬಾರದು. ಆದರೆ ಅಲ್ಲಾಹನು ತನ್ನ ಸಂತೃಪ್ತಿಯಿAದ ತಾನು ಇಚ್ಛಿಸುವವರಿಗೆ ಅನುಮತಿ ನೀಡಿದರೆ ಬೇರೆ ವಿಚಾರ. info
التفاسير:

external-link copy
27 : 53

اِنَّ الَّذِیْنَ لَا یُؤْمِنُوْنَ بِالْاٰخِرَةِ لَیُسَمُّوْنَ الْمَلٰٓىِٕكَةَ تَسْمِیَةَ الْاُ ۟

ನಿಸ್ಸಂಶವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ದೇವದೂತರಿಗೆ ಸ್ತಿçÃಯರ ನಾಮವನ್ನಿಡುತ್ತಾರೆ. info
التفاسير:

external-link copy
28 : 53

وَمَا لَهُمْ بِهٖ مِنْ عِلْمٍ ؕ— اِنْ یَّتَّبِعُوْنَ اِلَّا الظَّنَّ ۚ— وَاِنَّ الظَّنَّ لَا یُغْنِیْ مِنَ الْحَقِّ شَیْـًٔا ۟ۚ

ವಸ್ತುತಃ ಅವರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ, ಅವರು ಕೇವಲ ಊಹೆಯನ್ನು ಮಾತ್ರ ಅನುಸರಿಸುತ್ತಾರೆ. ಮತ್ತು ನಿಸ್ಸಂಶಯವಾಗಿಯೂ ಊಹೆಯು ಸತ್ಯದ ಎದುರಿಗೆ ಯಾವ ಪ್ರಯೋಜನಕ್ಕೂ ಬಾರದು. info
التفاسير:

external-link copy
29 : 53

فَاَعْرِضْ عَنْ مَّنْ تَوَلّٰی ۙ۬— عَنْ ذِكْرِنَا وَلَمْ یُرِدْ اِلَّا الْحَیٰوةَ الدُّنْیَا ۟ؕ

ಆದ್ದರಿಂದ ನಮ್ಮ ಸ್ಮರಣೆಯಿಂದ ವಿಮುಖನಾಗುವವನ, ಇಹಲೋಕ ಜೀವನದ ಹೊರತು ಬೇರೆನನ್ನೂ ಉದ್ದೇಶಿಸದವನನ್ನು ನೀವು ಕಡೆಗಣಿಸಿರಿ. info
التفاسير:

external-link copy
30 : 53

ذٰلِكَ مَبْلَغُهُمْ مِّنَ الْعِلْمِ ؕ— اِنَّ رَبَّكَ هُوَ اَعْلَمُ بِمَنْ ضَلَّ عَنْ سَبِیْلِهٖ وَهُوَ اَعْلَمُ بِمَنِ اهْتَدٰی ۟

ಅವರ ಜ್ಞಾನದ ಬಂಡವಾಳವಿಷ್ಟೇ, ನಿಮ್ಮ ಪ್ರಭು ಅವನ ಮಾರ್ಗದಿಂದ ತಪ್ಪಿದವರನ್ನು ಅರಿಯುತ್ತಾನೆ, ಹಾಗೂ ಸನ್ಮಾರ್ಗ ಪಡೆದವನನ್ನೂ ಚೆನ್ನಾಗಿ ಬಲ್ಲನು. info
التفاسير:

external-link copy
31 : 53

وَلِلّٰهِ مَا فِی السَّمٰوٰتِ وَمَا فِی الْاَرْضِ ۙ— لِیَجْزِیَ الَّذِیْنَ اَسَآءُوْا بِمَا عَمِلُوْا وَیَجْزِیَ الَّذِیْنَ اَحْسَنُوْا بِالْحُسْنٰی ۟ۚ

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಇದು ಅವನು ದುಷ್ಕರ್ಮವೆಸಗುವವರಿಗೆ ಅವರ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲೆಂದು ಮತ್ತು ಒಳಿತನ್ನು ಮಾಡುವವರಿಗೆ ಅತ್ಯುತ್ತಮ ಪ್ರತಿಫಲ ನೀಡಲೆಂದಾಗಿದೆ. info
التفاسير:

external-link copy
32 : 53

اَلَّذِیْنَ یَجْتَنِبُوْنَ كَبٰٓىِٕرَ الْاِثْمِ وَالْفَوَاحِشَ اِلَّا اللَّمَمَ ؕ— اِنَّ رَبَّكَ وَاسِعُ الْمَغْفِرَةِ ؕ— هُوَ اَعْلَمُ بِكُمْ اِذْ اَنْشَاَكُمْ مِّنَ الْاَرْضِ وَاِذْ اَنْتُمْ اَجِنَّةٌ فِیْ بُطُوْنِ اُمَّهٰتِكُمْ ۚ— فَلَا تُزَكُّوْۤا اَنْفُسَكُمْ ؕ— هُوَ اَعْلَمُ بِمَنِ اتَّقٰی ۟۠

ಅಂದರೆ ಮಹಾಪಾಪಗಳಿಂದ, ಅಶ್ಲೀಲ ಕೃತ್ಯಗಳಿಂದ ದೂರವಿರುವವರು, ಆದರೆ ಸಣ್ಣ ಪಾಪಗಳ ಹೊರತು, ನಿಸ್ಸಂಶಯವಾಗಿಯೂ ನಿಮ್ಮ ಪ್ರಭುವು ವಿಶಾಲವಾದ ಕ್ಷಮೆವುಳ್ಳವನಾಗಿದ್ದಾನೆ, ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಗರ್ಭಗಳಲ್ಲಿ ಭ್ರೂಣದಲ್ಲಿದ್ದಾಗಲೂ ನಿಮ್ಮನ್ನುಚೆನ್ನಾಗಿ ಬಲ್ಲನು. ಆದ್ದರಿಂದ ನೀವು ಆತ್ಮಪ್ರಶಂಸೆಯನ್ನು ಮಾಡದಿರಿ. ಖಂಡಿತವಾಗಿಯೂ ಅವನು ಭಯ ಭಕ್ತಿಯಿರಿಸಿದವರನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. info
التفاسير:

external-link copy
33 : 53

اَفَرَءَیْتَ الَّذِیْ تَوَلّٰی ۟ۙ

(ಓ ಪೈಗಂಬರರೇ) ನೀವು ವಿಮುಖನಾದವನನ್ನು ನೋಡಿದಿರಾ? info
التفاسير:

external-link copy
34 : 53

وَاَعْطٰی قَلِیْلًا وَّاَكْدٰی ۟

ಅವನು ಸ್ವಲ್ಪ ಮಾತ್ರ ಕೊಟ್ಟನು ಮತ್ತು ತಡೆ ಹಿಡಿದನು. info
التفاسير:

external-link copy
35 : 53

اَعِنْدَهٗ عِلْمُ الْغَیْبِ فَهُوَ یَرٰی ۟

ಅವನ ಬಳಿ ಅಗೋಚರ ಜ್ಞಾನವಿದೆಯೇ ? ಹೀಗೆ ಅವನು (ಎಲ್ಲವನ್ನು) ಕಾಣುತ್ತಿದ್ದಾನೆಯೇ? info
التفاسير:

external-link copy
36 : 53

اَمْ لَمْ یُنَبَّاْ بِمَا فِیْ صُحُفِ مُوْسٰی ۟ۙ

ಮೂಸಾರ ಗ್ರಂಥದಲ್ಲಿರುವುದನ್ನು ಅವನಿಗೆ ತಿಳಿಸಲಾಗಿಲ್ಲವೇ ? info
التفاسير:

external-link copy
37 : 53

وَاِبْرٰهِیْمَ الَّذِیْ وَ ۟ۙ

ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು) info
التفاسير:

external-link copy
38 : 53

اَلَّا تَزِرُ وَازِرَةٌ وِّزْرَ اُخْرٰی ۟ۙ

ಆ ವಿಷಯ ಪಾಪ ಭಾರಹೊರುವ ಯಾವೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಭಾರವನ್ನು ಹೊರಲಾರನು. info
التفاسير:

external-link copy
39 : 53

وَاَنْ لَّیْسَ لِلْاِنْسَانِ اِلَّا مَا سَعٰی ۟ۙ

ಮನುಷ್ಯನಿಗೆ ತಾನು ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲವೆಂದು. info
التفاسير:

external-link copy
40 : 53

وَاَنَّ سَعْیَهٗ سَوْفَ یُرٰی ۟

ಅವನ ಪರಿಶ್ರಮವನ್ನು ಸದ್ಯದಲ್ಲೇ ನೋಡಲಾಗುವುದು. info
التفاسير:

external-link copy
41 : 53

ثُمَّ یُجْزٰىهُ الْجَزَآءَ الْاَوْفٰی ۟ۙ

ತರುವಾಯ ಅವನಿಗೆ ಸಂಪೂರ್ಣ ಪ್ರತಿಫಲವನ್ನು ನೀಡಲಾಗುವುದು. info
التفاسير:

external-link copy
42 : 53

وَاَنَّ اِلٰی رَبِّكَ الْمُنْتَهٰی ۟ۙ

ನಿಸ್ಸಂಶಯವಾಗಿಯೂ (ಕೊನೆಗೆ) ಸಕಲರಿಗೂ ತಮ್ಮ ಪ್ರಭುವಿನೆಡೆಗೇ ತಲುಪಲಿಕ್ಕಿರುವುದು. info
التفاسير:

external-link copy
43 : 53

وَاَنَّهٗ هُوَ اَضْحَكَ وَاَبْكٰی ۟ۙ

ನಿಶ್ಚಯವಾಗಿ ಅವನೇ (ಅಲ್ಲಾಹನು) ನಗಿಸುತ್ತಾನೆ ಹಾಗು ಅವನೇ ಅಳುವಂತೆ ಮಾಡುತ್ತಾನೆ. info
التفاسير:

external-link copy
44 : 53

وَاَنَّهٗ هُوَ اَمَاتَ وَاَحْیَا ۟ۙ

ನಿಶ್ಚಯವಾಗಿ ಅವನೇ ಮರಣ ಕೊಡುತ್ತಾನೆ ಮತ್ತು ಜೀವ ನೀಡುತ್ತಾನೆ. info
التفاسير:

external-link copy
45 : 53

وَاَنَّهٗ خَلَقَ الزَّوْجَیْنِ الذَّكَرَ وَالْاُ ۟ۙ

ಮತ್ತು ನಿಶ್ಚಯವಾಗಿ ಅವನೇ ಗಂಡು ಹೆಣ್ಣು ಜೋಡಿಗಳನ್ನು ಸೃಷ್ಟಿಸಿರುವನು. info
التفاسير:

external-link copy
46 : 53

مِنْ نُّطْفَةٍ اِذَا تُمْنٰی ۪۟

ಒಂದು ವೀರ್ಯಾಣುವಿನಿಂದ, ಅದು (ಗರ್ಭಾಶಯದಲ್ಲಿ) ಸ್ರವಿಸಲ್ಪಟ್ಟಾಗ. info
التفاسير:

external-link copy
47 : 53

وَاَنَّ عَلَیْهِ النَّشْاَةَ الْاُخْرٰی ۟ۙ

ನಿಶ್ಚಯವಾಗಿಯು ಪುನಃ ಜೀವಂತಗೊಳಿಸುವುದು ಅವನ ಹೊಣೆಯಾಗಿದೆ. info
التفاسير:

external-link copy
48 : 53

وَاَنَّهٗ هُوَ اَغْنٰی وَاَقْنٰی ۟ۙ

ಅವನೇ ಶ್ರೀಮಂತಗೊಳಿಸುತ್ತಾನೆ ಹಾಗು ಬಂಡವಾಳ ನೀಡುತ್ತಾನೆ. info
التفاسير:

external-link copy
49 : 53

وَاَنَّهٗ هُوَ رَبُّ الشِّعْرٰی ۟ۙ

ಅವನೇ 'ಶಿಅರಾ'(ನಕ್ಷತ್ರದ) ಪ್ರಭುವಾಗಿರುವನು. info
التفاسير:

external-link copy
50 : 53

وَاَنَّهٗۤ اَهْلَكَ عَادَا ١لْاُوْلٰی ۟ۙ

ಮತ್ತು ಅವನೇ ಪ್ರಥಮ ಆದ್ ಜನಾಂಗವನ್ನೂ ನಾಶಪಡಿಸಿರುವನು. info
التفاسير:

external-link copy
51 : 53

وَثَمُوْدَاۡ فَمَاۤ اَبْقٰی ۟ۙ

ಸಮೂದ್ ಜನಾಂಗವನ್ನೂ ಅವರಲ್ಲಿ ಯಾರೂ ಉಳಿಯದಂತೆ ಅಳಿಸಿದನು. info
التفاسير:

external-link copy
52 : 53

وَقَوْمَ نُوْحٍ مِّنْ قَبْلُ ؕ— اِنَّهُمْ كَانُوْا هُمْ اَظْلَمَ وَاَطْغٰی ۟ؕ

ಅದಕ್ಕಿಂತ ಮೊದಲು ನೂಹರ ಜನಾಂಗವನ್ನು ಸಹ. ನಿಜವಾಗಿಯು ಅವರು ಅತ್ಯಂತ ಅಕ್ರಮಿಗಳೂ, ಮಿತಿ ಮೀರಿದವರಾಗಿದ್ದರು. info
التفاسير:

external-link copy
53 : 53

وَالْمُؤْتَفِكَةَ اَهْوٰی ۟ۙ

ಅವನೇ ಬುಡಮೇಲಾದ (ಲೂತರ) ನಾಡನ್ನು ಕೆಡವಿಬಿಟ್ಟನು. info
التفاسير:

external-link copy
54 : 53

فَغَشّٰىهَا مَا غَشّٰی ۟ۚ

ತರುವಾಯ ಆಚ್ಛಾದಿಸುವುದೆಲ್ಲವೂ ಅದನ್ನು ಆಚ್ಛಾದಿಸಿದವು info
التفاسير:

external-link copy
55 : 53

فَبِاَیِّ اٰلَآءِ رَبِّكَ تَتَمَارٰی ۟

ಆದ್ದರಿಂದ, ನೀವು ನಿಮ್ಮ ಪ್ರಭುವಿನ ಯಾವಯಾವ ಅನುಗ್ರಹಗಳ ಬಗ್ಗೆ ಸಂಶಯ ಪಡುತ್ತಿರುವಿರಿ ? info
التفاسير:

external-link copy
56 : 53

هٰذَا نَذِیْرٌ مِّنَ النُّذُرِ الْاُوْلٰی ۟

ಇವರು (ಪೈಗಂಬರರು) ಗತಕಾಲದ ಮುನ್ನೆಚ್ಚರಿಕೆಗಾರರಲ್ಲಿ ಒಬ್ಬ ಮುನ್ನೆಚ್ಚರಿಕೆಗಾರರಾಗಿದ್ದಾರೆ. info
التفاسير:

external-link copy
57 : 53

اَزِفَتِ الْاٰزِفَةُ ۟ۚ

ಸಮೀಪವಾಗುವ ಅಂತ್ಯಗಳಿಗೆಯು ಸಮೀಪವಾಯಿತು. info
التفاسير:

external-link copy
58 : 53

لَیْسَ لَهَا مِنْ دُوْنِ اللّٰهِ كَاشِفَةٌ ۟ؕ

ಅದನ್ನು ಅಲ್ಲಾಹನ ಹೊರತು ಇನ್ನಾರೂ ಅನಾವರಣ ಗೊಳಿಸುವವರಿಲ್ಲ. info
التفاسير:

external-link copy
59 : 53

اَفَمِنْ هٰذَا الْحَدِیْثِ تَعْجَبُوْنَ ۟ۙ

ನೀವು ಈ ಕುರ್‌ಆನಿನ ಕುರಿತು ಆಶ್ಚರ್ಯ ಪಡುತ್ತಿರುವಿರಾ? info
التفاسير:

external-link copy
60 : 53

وَتَضْحَكُوْنَ وَلَا تَبْكُوْنَ ۟ۙ

ನೀವು ನಗುತ್ತಿರುವಿರಾ? ಅಳುವುದಿಲ್ಲವೇ? info
التفاسير:

external-link copy
61 : 53

وَاَنْتُمْ سٰمِدُوْنَ ۟

ನೀವು ನಿರ್ಲಕ್ಷತೋರಿಸುತ್ತಿರುವಿರಿ. info
التفاسير:

external-link copy
62 : 53

فَاسْجُدُوْا لِلّٰهِ وَاعْبُدُوْا ۟

ಆದ್ದರಿಂದ ನೀವು ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ ಹಾಗೂ (ಅವನನ್ನೇ) ಆರಾಧಿಸಿರಿ. info
التفاسير: