Vertaling van de betekenissen Edele Qur'an - De Kannada vertaling - Bashir Maisoeri

Pagina nummer: 362:359 close

external-link copy
33 : 25

وَلَا یَاْتُوْنَكَ بِمَثَلٍ اِلَّا جِئْنٰكَ بِالْحَقِّ وَاَحْسَنَ تَفْسِیْرًا ۟ؕ

ಅವರು ಸತ್ಯವನ್ನು ವಿರೋಧಿಸಲು ಯಾವ ಉಪಮೆಯನ್ನು ತಂದರೂ ನಾವು ಅದರ ಸಮರ್ಪಕವಾದ ಉತ್ತರ ಹಾಗೂ ಉನ್ನತ ವಿವರಣೆ ನಿಮಗೆ ತಿಳಿಸಿಕೊಡದೆ ಇರಲಾರೆವು. info
التفاسير:

external-link copy
34 : 25

اَلَّذِیْنَ یُحْشَرُوْنَ عَلٰی وُجُوْهِهِمْ اِلٰی جَهَنَّمَ ۙ— اُولٰٓىِٕكَ شَرٌّ مَّكَانًا وَّاَضَلُّ سَبِیْلًا ۟۠

ಅವರು ಅಧೋಮುಖರಾಗಿ ನರಕದೆಡೆಗೆ ಒಟ್ಟು ಸೇರಿಸಲಾಗುವರು. ಅವರೇ ಅತ್ಯಂತ ನಿಕೃಷ್ಟ ಮಟ್ಟದವರು ಮತ್ತು ಭ್ರಷ್ಟ ಮಾರ್ಗದವರಾಗಿದ್ದಾರೆ. info
التفاسير:

external-link copy
35 : 25

وَلَقَدْ اٰتَیْنَا مُوْسَی الْكِتٰبَ وَجَعَلْنَا مَعَهٗۤ اَخَاهُ هٰرُوْنَ وَزِیْرًا ۟ۚۖ

ನಿಸ್ಸಂಶಯವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಮತ್ತು ನಾವು ಅವರ ಜೊತೆ ಅವರ ಸಹೋದರ ಹಾರೂನರನ್ನು ಅವರ ಸಹಾಯಕನಾಗಿ ನಿಶ್ಚಯಿಸಿದೆವು. info
التفاسير:

external-link copy
36 : 25

فَقُلْنَا اذْهَبَاۤ اِلَی الْقَوْمِ الَّذِیْنَ كَذَّبُوْا بِاٰیٰتِنَا ؕ— فَدَمَّرْنٰهُمْ تَدْمِیْرًا ۟ؕ

ಮತ್ತು ಹೇಳಿದೆವು: ನೀವಿಬ್ಬರೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದೆಡೆಗೆ ಹೋಗಿರಿ. ಅನಂತರ ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು. info
التفاسير:

external-link copy
37 : 25

وَقَوْمَ نُوْحٍ لَّمَّا كَذَّبُوا الرُّسُلَ اَغْرَقْنٰهُمْ وَجَعَلْنٰهُمْ لِلنَّاسِ اٰیَةً ؕ— وَاَعْتَدْنَا لِلظّٰلِمِیْنَ عَذَابًا اَلِیْمًا ۟ۚۙ

ನೂಹರವರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿದಾಗ ನಾವು ಅವರನ್ನು ಮುಳುಗಿಸಿಬಿಟ್ಟೆವು ಮತ್ತು ಅವರನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅಕ್ರಮಿಗಳಿಗೆ ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿಟ್ಟಿರುತ್ತೇವೆ. info
التفاسير:

external-link copy
38 : 25

وَّعَادًا وَّثَمُوْدَاۡ وَاَصْحٰبَ الرَّسِّ وَقُرُوْنًا بَیْنَ ذٰلِكَ كَثِیْرًا ۟

ಇದೇ ರೀತಿ ಆದ್, ಸಮೂದ್ ಜನಾಂಗವನ್ನು, ರಸ್ ಜನಾಂಗವನ್ನು ಮತ್ತು ಅವುಗಳ ನಡುವಿನ ಅನೇಕ ಜನಾಂಗಗಳನ್ನೂ (ನಾಶಪಡಿಸಿರುವೆವು). info
التفاسير:

external-link copy
39 : 25

وَكُلًّا ضَرَبْنَا لَهُ الْاَمْثَالَ ؗ— وَكُلًّا تَبَّرْنَا تَتْبِیْرًا ۟

ನಾವು ಪ್ರತಿಯೊಂದು (ಜನಾಂಗಕ್ಕೂ) ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೆವು. ಅನಂತರ (ನಿರಾಕರಿಸಿದುದರ ನಿಮಿತ್ತ) ಪ್ರತಿಯೊಂದನ್ನೂ ಸಂಪೂರ್ಣವಾಗಿ ನಾಶಗೊಳಿಸಿದೆವು. info
التفاسير:

external-link copy
40 : 25

وَلَقَدْ اَتَوْا عَلَی الْقَرْیَةِ الَّتِیْۤ اُمْطِرَتْ مَطَرَ السَّوْءِ ؕ— اَفَلَمْ یَكُوْنُوْا یَرَوْنَهَا ۚ— بَلْ كَانُوْا لَا یَرْجُوْنَ نُشُوْرًا ۟

ಇವರು (ಸತ್ಯ ನಿಷೇಧಿಗಳು) ವಿನಾಶಕಾರಿ ಮಳೆಯು ವರ್ಷಿಸಲಾದಂತಹ ನಾಡಿನಿಂದ ಹಾದು ಹೋಗಿದ್ದಾರೆ. ಹಾಗಿದ್ದೂ ಇವರು ಅದನ್ನು ನೋಡುವುದಿಲ್ಲವೇ? ವಾಸ್ತವದಲ್ಲಿ ಇವರಿಗೆ ಮರಣಾನಂತರ ಪುನರುತ್ಥಾನಗೊಳ್ಳು ವುದರ ನಿರೀಕ್ಷೆಯೇ ಇಲ್ಲ. info
التفاسير:

external-link copy
41 : 25

وَاِذَا رَاَوْكَ اِنْ یَّتَّخِذُوْنَكَ اِلَّا هُزُوًا ؕ— اَهٰذَا الَّذِیْ بَعَثَ اللّٰهُ رَسُوْلًا ۟

ಅವರು ನಿಮ್ಮನ್ನು (ಪೈಗಂಬರರನ್ನು) ಕಂಡಾಗಲೆಲ್ಲಾ ನಿಮ್ಮನ್ನು ಪರಿಹಾಸ್ಯ ಮಾಡತೊಡಗುತ್ತಾರೆ. ಅಲ್ಲಾಹನು ಸಂದೇಶವಾಹಕನಾಗಿ ನಿಯೋಗಿಸಿರುವುದು ಇವನನ್ನೇ? info
التفاسير:

external-link copy
42 : 25

اِنْ كَادَ لَیُضِلُّنَا عَنْ اٰلِهَتِنَا لَوْلَاۤ اَنْ صَبَرْنَا عَلَیْهَا ؕ— وَسَوْفَ یَعْلَمُوْنَ حِیْنَ یَرَوْنَ الْعَذَابَ مَنْ اَضَلُّ سَبِیْلًا ۟

ನಾವು ಇದರಲ್ಲೇ ಸ್ಥಿರಚಿತ್ತರಾಗಿರದಿರುತ್ತಿದ್ದರೆ ಈ ವ್ಯಕ್ತಿ ನಮ್ಮನ್ನು ನಮ್ಮ ಆರಾಧ್ಯ ದೇವರುಗಳಿಂದ ದಾರಿತಪ್ಪಿಸುತ್ತಿದ್ದನು. ಅವರು ಸಧ್ಯದಲ್ಲೆ ಯಾತನೆಗಳನ್ನು ಕಾಣುವಾಗ ಹೆಚ್ಚು ಮಾರ್ಗಭ್ರಷ್ಟನಾರೆಂದು ಸ್ಪಷ್ಟವಾಗಿ ಅರಿಯುವರು. info
التفاسير:

external-link copy
43 : 25

اَرَءَیْتَ مَنِ اتَّخَذَ اِلٰهَهٗ هَوٰىهُ ؕ— اَفَاَنْتَ تَكُوْنُ عَلَیْهِ وَكِیْلًا ۟ۙ

ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿರುವಿರಾ? info
التفاسير: