Vertaling van de betekenissen Edele Qur'an - De Kannada vertaling - Bashir Maisoeri

Pagina nummer:close

external-link copy
170 : 2

وَاِذَا قِیْلَ لَهُمُ اتَّبِعُوْا مَاۤ اَنْزَلَ اللّٰهُ قَالُوْا بَلْ نَتَّبِعُ مَاۤ اَلْفَیْنَا عَلَیْهِ اٰبَآءَنَا ؕ— اَوَلَوْ كَانَ اٰبَآؤُهُمْ لَا یَعْقِلُوْنَ شَیْـًٔا وَّلَا یَهْتَدُوْنَ ۟

ನೀವು ಅಲ್ಲಾಹನು ಅವತೀರ್ಣಗೊಳಿಸಿರುವ ಗ್ರಂಥವನ್ನು (ಕುರ್‌ಆನ್) ಅನುಸರಿಸಿರಿ ಎಂದು ಅವರೊಡನೆ ಹೇಳಲಾದಾಗ; ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡೆವೋ ಅದನ್ನು ಅನುಸರಿಸುತ್ತೇವೆ ಎನ್ನುತ್ತಾರೆ. ಅವರ ಪೂರ್ವಿಕರು ಬುದ್ಧಿಹೀನರೂ ಮತ್ತು ಮಾರ್ಗ ಭ್ರಷ್ಟರಾಗಿದ್ದರೂ ಅವರನ್ನೇ ಅನುಸರಿಸುವಿರಾ? info
التفاسير:

external-link copy
171 : 2

وَمَثَلُ الَّذِیْنَ كَفَرُوْا كَمَثَلِ الَّذِیْ یَنْعِقُ بِمَا لَا یَسْمَعُ اِلَّا دُعَآءً وَّنِدَآءً ؕ— صُمٌّۢ بُكْمٌ عُمْیٌ فَهُمْ لَا یَعْقِلُوْنَ ۟

ಸತ್ಯನಿಷೇಧಿಸಿದವರ ಉಪಮೆಯು ಆ ದನಗಾಹಿಯಂತಿದೆ ಅವನು ತನ್ನ ದನಗಳಿಗೆ ಕೂಗುತ್ತಾನೆ. ಅದು ಕೂಗುವವನ ಶಬ್ದವನ್ನಲ್ಲದೆ ಮತ್ತೇನನ್ನು ಕೇಳಿಸಿಕೊಳ್ಳುವುದಿಲ್ಲ. ಅವರು (ಸತ್ಯವನ್ನು ಕೆಳುವುದರಿಂದ) ಕಿವುಡರಾಗಿದ್ದಾರೆ (ಸತ್ಯವನ್ನು ಹೇಳುವುದರಿಂದ) ಮೂಕರಾಗಿದ್ದಾರೆ ಮತ್ತು ಸತ್ಯಮಾರ್ಗವನ್ನು ನೋಡುವುದರಿಂದ ಅಂಧರಾಗಿದ್ದಾರೆ ಅವರಿಗೆ ಬುದ್ಧಿ ಇರುವುದಿಲ್ಲ. info
التفاسير:

external-link copy
172 : 2

یٰۤاَیُّهَا الَّذِیْنَ اٰمَنُوْا كُلُوْا مِنْ طَیِّبٰتِ مَا رَزَقْنٰكُمْ وَاشْكُرُوْا لِلّٰهِ اِنْ كُنْتُمْ اِیَّاهُ تَعْبُدُوْنَ ۟

ಓ ಸತ್ಯವಿಶ್ವಾಸಿಗಳೇ, ನಾವು ನಿಮಗೆ ದಯಪಾಲಿಸಿರುವ ಶುದ್ಧವಾದ ಆಹಾರವನ್ನು ತಿನ್ನಿರಿ ಮತ್ತು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿರಿ, ನೀವು ಅವನನ್ನು ಮಾತ್ರ ಅರಾಧಿಸುವವರಾಗಿದ್ದರೆ. info
التفاسير:

external-link copy
173 : 2

اِنَّمَا حَرَّمَ عَلَیْكُمُ الْمَیْتَةَ وَالدَّمَ وَلَحْمَ الْخِنْزِیْرِ وَمَاۤ اُهِلَّ بِهٖ لِغَیْرِ اللّٰهِ ۚ— فَمَنِ اضْطُرَّ غَیْرَ بَاغٍ وَّلَا عَادٍ فَلَاۤ اِثْمَ عَلَیْهِ ؕ— اِنَّ اللّٰهَ غَفُوْرٌ رَّحِیْمٌ ۟

(ಅಲ್ಲಾಹನಂತು) ನಿಮ್ಮ ಮೇಲೆ ಶವ, ರಕ್ತ, ಹಂದಿಯ ಮಾಂಸ, ಅಲ್ಲಾಹೇತರರ ನಾಮದಲ್ಲಿ ಕೊಯ್ಯಲಾದ ಪ್ರಾಣಿಗಳನ್ನೂ ನಿಷಿದ್ಧಗೊಳಿಸಿದ್ದಾನೆ. ಇನ್ನು ಯಾರು (ನಿಷಿದ್ಧವಾಗಿರುವುದನ್ನು ತಿನ್ನಲು) ನಿರ್ಬಂಧಿತನಾಗುತ್ತಾನೋ ಅವನು ಮೇರೆ ಮೀರುವವನೂ, ಅಕ್ರಮವೆಸಗುವವನೂ ಆಗಿರದಿದ್ದರೆ ಅವನ ಮೇಲೆ ಅವುಗಳ ಸೇವನೆಯಿಂದ ಯಾವ ದೋಷವೂ ಇಲ್ಲ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯು ಆಗಿದ್ದಾನೆ. info
التفاسير:

external-link copy
174 : 2

اِنَّ الَّذِیْنَ یَكْتُمُوْنَ مَاۤ اَنْزَلَ اللّٰهُ مِنَ الْكِتٰبِ وَیَشْتَرُوْنَ بِهٖ ثَمَنًا قَلِیْلًا ۙ— اُولٰٓىِٕكَ مَا یَاْكُلُوْنَ فِیْ بُطُوْنِهِمْ اِلَّا النَّارَ وَلَا یُكَلِّمُهُمُ اللّٰهُ یَوْمَ الْقِیٰمَةِ وَلَا یُزَكِّیْهِمْ ۖۚ— وَلَهُمْ عَذَابٌ اَلِیْمٌ ۟

ನಿಸ್ಸಂದೇಹವಾಗಿಯು ಅಲ್ಲಾಹನು ಅವತೀರ್ಣಗೊಳಿಸಿದಂತಹ ಗ್ರಂಥವನ್ನು ಅಡಗಿಸಿಡುವವರು ಹಾಗೂ ಅದನ್ನು ತುಚ್ಛ ಲಾಭಕ್ಕಾಗಿ ಮಾರುವವರು ಖಂಡಿತವಾಗಿಯು ತಮ್ಮ ಹೊಟ್ಟೆಗಳಲ್ಲಿ ಅಗ್ನಿಯನ್ನು ತುಂಬುತಿದ್ದಾರೆ. ಅಲ್ಲಾಹನು ಪುನರುತ್ಥಾನ ದಿನದಂದು ಅವರೊಂದಿಗೆ ಮಾತನಾಡುವುದಿಲ್ಲ ಮತ್ತು ಅವರನ್ನು ಸಂಸ್ಕರಿಸುವುದೂ ಇಲ್ಲ. ಮತ್ತು ಅವರಿಗೆ ವೇದನಾಜನಕ ಯಾತನೆಯಿರುವುದು. info
التفاسير:

external-link copy
175 : 2

اُولٰٓىِٕكَ الَّذِیْنَ اشْتَرَوُا الضَّلٰلَةَ بِالْهُدٰی وَالْعَذَابَ بِالْمَغْفِرَةِ ۚ— فَمَاۤ اَصْبَرَهُمْ عَلَی النَّارِ ۟

ಅವರು ಸನ್ಮಾರ್ಗದ ಬದಲಿಗೆ ದುರ್ಮಾಗವನ್ನೂ, ಕ್ಷಮೆಯ ಬದಲಿಗೆ ಶಿಕ್ಷೆಯನ್ನೂ ಖರೀದಿಸಿದವರಾಗಿದ್ದಾರೆ. ಮತ್ತು ಅವರು ನರಕಾಗ್ನಿಯ ಯಾತನೆಯನ್ನು ಎಷ್ಟು ಸಹಿಸಿಕೊಳ್ಳುವರು? info
التفاسير:

external-link copy
176 : 2

ذٰلِكَ بِاَنَّ اللّٰهَ نَزَّلَ الْكِتٰبَ بِالْحَقِّ ؕ— وَاِنَّ الَّذِیْنَ اخْتَلَفُوْا فِی الْكِتٰبِ لَفِیْ شِقَاقٍ بَعِیْدٍ ۟۠

ಈ ಶಿಕ್ಷೆಗಳ ಕಾರಣ ಅಲ್ಲಾಹನಂತೂ ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದನು ಎಂಬುದೇ ಆಗಿದೆ. ನಿಸ್ಸಂದೇಹವಾಗಿಯೂ ಈ ಗ್ರಂಥದಲ್ಲಿ ಭಿನ್ನತೆ ತೋರುವವರು, ವಿರೋಧದಲ್ಲಿ ಬಹುದೂರ ಸಾಗಿದ್ದಾರೆ. info
التفاسير: