Vertaling van de betekenissen Edele Qur'an - De Kannada vertaling - Bashir Maisoeri

Pagina nummer:close

external-link copy
32 : 15

قَالَ یٰۤاِبْلِیْسُ مَا لَكَ اَلَّا تَكُوْنَ مَعَ السّٰجِدِیْنَ ۟

ಅಲ್ಲಾಹನು ಕೇಳಿದನು! ಓ ಇಬ್‌ಲೀಸ್ ಸಾಷ್ಟಾಂಗವೆರಗುವವರ ಜೊತೆಗೆ ಸೇರದಿರಲು ನಿನಗೇನಾಗಿದೆ ? info
التفاسير:

external-link copy
33 : 15

قَالَ لَمْ اَكُنْ لِّاَسْجُدَ لِبَشَرٍ خَلَقْتَهٗ مِنْ صَلْصَالٍ مِّنْ حَمَاٍ مَّسْنُوْنٍ ۟

ಅವನು ಉತ್ತರಿಸಿದನು; ನೀನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಸೃಷ್ಟಿಸಿರುವಂತಹ ಮಾನವನಿಗೆ ನಾನು ಸಾಷ್ಟಾಂಗ ಮಾಡುವವನಲ್ಲ. info
التفاسير:

external-link copy
34 : 15

قَالَ فَاخْرُجْ مِنْهَا فَاِنَّكَ رَجِیْمٌ ۟ۙ

ಅಲ್ಲಾಹನು ಹೇಳಿದನು: ನೀನಿಲ್ಲಿಂದ ತೊಲಗು. ನಿಜವಾಗಿಯೂ ನೀನು ಧಿಕ್ಕರಿಸಲ್ಪಪಟ್ಟವನಾಗಿರುವೆ. info
التفاسير:

external-link copy
35 : 15

وَّاِنَّ عَلَیْكَ اللَّعْنَةَ اِلٰی یَوْمِ الدِّیْنِ ۟

ನಿಶ್ಚಯವಾಗಿಯೂ ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ. info
التفاسير:

external-link copy
36 : 15

قَالَ رَبِّ فَاَنْظِرْنِیْۤ اِلٰی یَوْمِ یُبْعَثُوْنَ ۟

ಅವನು ಹೇಳಿದನು; ಓ ನನ್ನ ಪ್ರಭುವೇ ಜನರು ಪುನರೆಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು. info
التفاسير:

external-link copy
37 : 15

قَالَ فَاِنَّكَ مِنَ الْمُنْظَرِیْنَ ۟ۙ

ಅಲ್ಲಾಹನು ಹೇಳಿದನು; ಖಂಡಿತವಾಗಿಯೂ ನೀನು ಕಾಲಾವಕಾಶ ನೀಡಿದವರಲ್ಲಾಗಿರುವೆ. info
التفاسير:

external-link copy
38 : 15

اِلٰی یَوْمِ الْوَقْتِ الْمَعْلُوْمِ ۟

ಆ ನಿಶ್ಚಿತಾವಧಿಯ ದಿನದವರೆಗೆ. info
التفاسير:

external-link copy
39 : 15

قَالَ رَبِّ بِمَاۤ اَغْوَیْتَنِیْ لَاُزَیِّنَنَّ لَهُمْ فِی الْاَرْضِ وَلَاُغْوِیَنَّهُمْ اَجْمَعِیْنَ ۟ۙ

ಅವನು ಹೇಳಿದನು; ಓ ನನ್ನ ಪ್ರಭುವೇ ನೀನು ನನ್ನನ್ನು ದಾರಿಗೆಡಿಸಿರುವೆ ಖಂಡಿತವಾಗಿಯೂ ನಾನು ಅವರಿಗಾಗಿ ಭೂಮಿಯಲ್ಲಿ ಕೆಡುಕುಗಳನ್ನು ಅಲಂಕೃತಗೊಳಿಸಿ ಅವರೆಲ್ಲರನ್ನೂ ದಾರಿಗೆಡಿಸುವೆನು. info
التفاسير:

external-link copy
40 : 15

اِلَّا عِبَادَكَ مِنْهُمُ الْمُخْلَصِیْنَ ۟

ಅವರ ಪೈಕಿ ನಿನ್ನ ನಿಷ್ಠಾವಂತ ದಾಸರ ಹೊರತು. info
التفاسير:

external-link copy
41 : 15

قَالَ هٰذَا صِرَاطٌ عَلَیَّ مُسْتَقِیْمٌ ۟

ಅಲ್ಲಾಹನು ಹೇಳಿದನು; ಇದೇ ನನ್ನೆಡೆಗೆ ತಲುಪುವ ಋಜುವಾದ ಮಾರ್ಗವಾಗಿದೆ. info
التفاسير:

external-link copy
42 : 15

اِنَّ عِبَادِیْ لَیْسَ لَكَ عَلَیْهِمْ سُلْطٰنٌ اِلَّا مَنِ اتَّبَعَكَ مِنَ الْغٰوِیْنَ ۟

ನಿಶ್ಚಯವಾಗಿಯೂ ನನ್ನ ದಾಸರ ಮೇಲೆ ನಿನ್ನ ಯಾವ ಅಧಿಕಾರ ಇರಲಾರದು. ಆದರೆ ನಿನ್ನನ್ನು ಅನುಸರಿಸಿದ ದಾರಿಗೆಟ್ಟವರ ಹೊರತು. info
التفاسير:

external-link copy
43 : 15

وَاِنَّ جَهَنَّمَ لَمَوْعِدُهُمْ اَجْمَعِیْنَ ۟ۙ

ಖಂಡಿತವಾಗಿಯೂ ಅವರೆಲ್ಲರ ವಾಗ್ದತ್ತ ನೆಲೆಯು ನರಕವಾಗಿದೆ. info
التفاسير:

external-link copy
44 : 15

لَهَا سَبْعَةُ اَبْوَابٍ ؕ— لِكُلِّ بَابٍ مِّنْهُمْ جُزْءٌ مَّقْسُوْمٌ ۟۠

ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ಅವರ ಒಂದು ಭಾಗವು ನಿಗದಿತವಾಗಿದೆ. info
التفاسير:

external-link copy
45 : 15

اِنَّ الْمُتَّقِیْنَ فِیْ جَنّٰتٍ وَّعُیُوْنٍ ۟ؕ

ನಿಶ್ಚಯವಾಗಿಯೂ ಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲಿಯೂ ಚಿಲುಮೆಗಳಲ್ಲಿಯೂ ಇರುವರು. info
التفاسير:

external-link copy
46 : 15

اُدْخُلُوْهَا بِسَلٰمٍ اٰمِنِیْنَ ۟

(ಅವರೊಂದಿಗೆ ಹೇಳಲಾಗುವುದು) ನೀವು ಇದರೊಳಗೆ ನಿರ್ಭಯರಾಗಿ ಶಾಂತಿಯೊAದಿಗೆ ಪ್ರವೇಶಿಸಿರಿ. info
التفاسير:

external-link copy
47 : 15

وَنَزَعْنَا مَا فِیْ صُدُوْرِهِمْ مِّنْ غِلٍّ اِخْوَانًا عَلٰی سُرُرٍ مُّتَقٰبِلِیْنَ ۟

ನಾವು ಅವರ ಹೃದಯಗಳಲ್ಲಿ ಇದ್ದಂತಹ ವೈಮನಸ್ಸನ್ನು ತೆಗೆದುಹಾಕುವೆವು. ಅವರು ಸಹೋದರರಾಗಿ ಮಂಚಗಳಲ್ಲಿ ಎದುರುಬದುರಾಗಿ ಆಸೀನರಾಗಿರುವರು. info
التفاسير:

external-link copy
48 : 15

لَا یَمَسُّهُمْ فِیْهَا نَصَبٌ وَّمَا هُمْ مِّنْهَا بِمُخْرَجِیْنَ ۟

ಅದರಲ್ಲಿ ಅವರಿಗೆ ಯಾವುದೇ ಕಷÀ್ಟ ಬಾಧಿಸದು ಮತ್ತು ಅವರೆಂದೂ ಅಲ್ಲಿಂದ ಹೊರಹಾಕಲ್ಪಡಲಾರರು. info
التفاسير:

external-link copy
49 : 15

نَبِّئْ عِبَادِیْۤ اَنِّیْۤ اَنَا الْغَفُوْرُ الرَّحِیْمُ ۟ۙ

ನಿಶ್ಚಯವಾಗಿಯೂ ನಾನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದೇನೆಂದು ನೀವು ನನ್ನ ದಾಸರಿಗೆ ತಿಳಿಸಿಬಿಡಿರಿ. info
التفاسير:

external-link copy
50 : 15

وَاَنَّ عَذَابِیْ هُوَ الْعَذَابُ الْاَلِیْمُ ۟

ಮತ್ತು ನನ್ನ ಯಾತನೆಯು ಸಹ ಅತ್ಯಂತ ವೇದನಾಜನಕವಾಗಿದೆ. info
التفاسير:

external-link copy
51 : 15

وَنَبِّئْهُمْ عَنْ ضَیْفِ اِبْرٰهِیْمَ ۟ۘ

ಅವರಿಗೆ ಇಬ್ರಾಹಿಮರ ಅತಿಥಿಗಳ ವೃತ್ತಾಂತವನ್ನು ತಿಳಿಸಿಬಿಡಿ. info
التفاسير: