വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
27 : 9

ثُمَّ یَتُوْبُ اللّٰهُ مِنْ بَعْدِ ذٰلِكَ عَلٰی مَنْ یَّشَآءُ ؕ— وَاللّٰهُ غَفُوْرٌ رَّحِیْمٌ ۟

ತರುವಾಯ ಅದರ ಬಳಿಕ ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ. info
التفاسير:

external-link copy
28 : 9

یٰۤاَیُّهَا الَّذِیْنَ اٰمَنُوْۤا اِنَّمَا الْمُشْرِكُوْنَ نَجَسٌ فَلَا یَقْرَبُوا الْمَسْجِدَ الْحَرَامَ بَعْدَ عَامِهِمْ هٰذَا ۚ— وَاِنْ خِفْتُمْ عَیْلَةً فَسَوْفَ یُغْنِیْكُمُ اللّٰهُ مِنْ فَضْلِهٖۤ اِنْ شَآءَ ؕ— اِنَّ اللّٰهَ عَلِیْمٌ حَكِیْمٌ ۟

ಓ ಸತ್ಯವಿಶ್ವಾಸಿಗಳೇ, ನಿಸ್ಸಂಶಯವಾಗಿಯು ಬಹುದೇವವಿಶ್ವಾಸಿಗಳು ಮಲಿನರಾಗಿದ್ದಾರೆ. ಆದ್ದರಿಂದ ಅವರು ಈ ವರ್ಷದ ಬಳಿಕ ಮಸ್ಜಿದುಲ್ ಹರಾಮ್‌ನ ಸಮೀಪಕ್ಕು ಬರದಿರಲಿ. ನಿಮಗೆ ದಾರಿದ್ರö್ಯದ ಭಯವಿದ್ದರೆ ಅಲ್ಲಾಹನು ಇಚ್ಛಿಸಿದರೆ ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನಗೊಳಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ. info
التفاسير:

external-link copy
29 : 9

قَاتِلُوا الَّذِیْنَ لَا یُؤْمِنُوْنَ بِاللّٰهِ وَلَا بِالْیَوْمِ الْاٰخِرِ وَلَا یُحَرِّمُوْنَ مَا حَرَّمَ اللّٰهُ وَرَسُوْلُهٗ وَلَا یَدِیْنُوْنَ دِیْنَ الْحَقِّ مِنَ الَّذِیْنَ اُوْتُوا الْكِتٰبَ حَتّٰی یُعْطُوا الْجِزْیَةَ عَنْ یَّدٍ وَّهُمْ صٰغِرُوْنَ ۟۠

ಗ್ರಂಥ ನೀಡಲಾದವರ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಅಲ್ಲಾಹನು, ಅವನ ಸಂದೇಶವಾಹಕರು ನಿಷಿದ್ಧಗೊಳಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸಿದವರೊಡನೆ ಯುದ್ಧ ಮಾಡಿರಿ. ಹಾಗೂ ಸತ್ಯ ಧರ್ಮವನ್ನು ಸ್ವೀಕರಿಸದವರು ಯಾರೋ ಅವರು ಅಪಮಾನಿತರೂ, ನಿಂದ್ಯರೂ ಆಗಿ ತಮ್ಮ ಕೈಯಿಂದ ಜಿಜಿಯಾ (ತೆರಿಗೆ) ಪಾವತಿಸುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಿರಿ. info
التفاسير:

external-link copy
30 : 9

وَقَالَتِ الْیَهُوْدُ عُزَیْرُ ١بْنُ اللّٰهِ وَقَالَتِ النَّصٰرَی الْمَسِیْحُ ابْنُ اللّٰهِ ؕ— ذٰلِكَ قَوْلُهُمْ بِاَفْوَاهِهِمْ ۚ— یُضَاهِـُٔوْنَ قَوْلَ الَّذِیْنَ كَفَرُوْا مِنْ قَبْلُ ؕ— قَاتَلَهُمُ اللّٰهُ ۚ— اَنّٰی یُؤْفَكُوْنَ ۟

ಉಝೈರ್ ಅಲ್ಲಾಹನ ಪುತ್ರನೆಂದು ಯಹೂದರು ಹೇಳುತ್ತಾರೆ. ಮತ್ತು ಕ್ರೆöÊಸ್ತರು: ಮಸೀಹ ಅಲ್ಲಾಹನ ಪುತ್ರನೆಂದು ಹೇಳುತ್ತಾರೆ. ಇದು ಕೇವಲ ಅವರ ಬಾಯಿ ಮಾತು ಮಾತ್ರ. ಹಿಂದಿನ ಸತ್ಯನಿಷೇಧಿಗಳ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹನು ಅವರನ್ನು ನಾಶಗೊಳಿಸಲಿ. ಅವರು ದಾರಿಗೆಟ್ಟು ಅದೆಲ್ಲಿ ಅಲೆಯುತ್ತಿದ್ದಾರೆ. info
التفاسير:

external-link copy
31 : 9

اِتَّخَذُوْۤا اَحْبَارَهُمْ وَرُهْبَانَهُمْ اَرْبَابًا مِّنْ دُوْنِ اللّٰهِ وَالْمَسِیْحَ ابْنَ مَرْیَمَ ۚ— وَمَاۤ اُمِرُوْۤا اِلَّا لِیَعْبُدُوْۤا اِلٰهًا وَّاحِدًا ۚ— لَاۤ اِلٰهَ اِلَّا هُوَ ؕ— سُبْحٰنَهٗ عَمَّا یُشْرِكُوْنَ ۟

ಅವರು (ಕ್ರೆöÊಸ್ತರು) ಅಲ್ಲಾಹನ ಹೊರತು ತಮ್ಮ ವಿದ್ವಾಂಸರನ್ನೂ, ಸನ್ಯಾಸಿಗಳನ್ನೂ ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಮರ್ಯಮರ ಪುತ್ರನಾದ ಮಸೀಹರನ್ನು ಸಹ, ವಸ್ತುತಃ ಅವರಿಗೆ ಕೇವಲ ಏಕೈಕ ಆರಾಧ್ಯನ ಆರಾಧನೆಯ ಆದೇಶ ನೀಡಲಾಗಿತ್ತು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅವನು ಪರಿಶುದ್ಧನಾಗಿದ್ದಾನೆ. info
التفاسير: