വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
100 : 9

وَالسّٰبِقُوْنَ الْاَوَّلُوْنَ مِنَ الْمُهٰجِرِیْنَ وَالْاَنْصَارِ وَالَّذِیْنَ اتَّبَعُوْهُمْ بِاِحْسَانٍ ۙ— رَّضِیَ اللّٰهُ عَنْهُمْ وَرَضُوْا عَنْهُ وَاَعَدَّ لَهُمْ جَنّٰتٍ تَجْرِیْ تَحْتَهَا الْاَنْهٰرُ خٰلِدِیْنَ فِیْهَاۤ اَبَدًا ؕ— ذٰلِكَ الْفَوْزُ الْعَظِیْمُ ۟

ಮುಹಾಜಿರ್ ಮತ್ತು ಅನ್ಸಾರ್‌ಗಳ ಪೈಕಿ (ಸತ್ಯವಿಶ್ವಾಸದಲ್ಲಿ) ಮೂಂಚೂಣಿ ಯಲ್ಲಿರುವ ಮತ್ತು ಅವರನ್ನು ನಿಷ್ಕಳಂಕದೊAದಿಗೆ ಅನುಸರಿಸಿದವರ ಬಗ್ಗೆ ಅಲ್ಲಾಹನು ಸಂತುಷ್ಟನಾಗಿರುವನು ಮತ್ತು ಅವರೆಲ್ಲರೂ ಅವನ ಬಗ್ಗೆ ಸಂತೃಪ್ತರಾಗಿರುವರು ಮತ್ತು ಅಲ್ಲಾಹನು ಅವರಿಗೋಸ್ಕರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ತೋಟಗಳನ್ನು ಸಿದ್ಧಗೊಳಿಸಿಟ್ಟಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಇದು ಮಹಾ ಯಶಸ್ಸಾಗಿದೆ. info
التفاسير:

external-link copy
101 : 9

وَمِمَّنْ حَوْلَكُمْ مِّنَ الْاَعْرَابِ مُنٰفِقُوْنَ ۛؕ— وَمِنْ اَهْلِ الْمَدِیْنَةِ ؔۛ۫— مَرَدُوْا عَلَی النِّفَاقِ ۫— لَا تَعْلَمُهُمْ ؕ— نَحْنُ نَعْلَمُهُمْ ؕ— سَنُعَذِّبُهُمْ مَّرَّتَیْنِ ثُمَّ یُرَدُّوْنَ اِلٰی عَذَابٍ عَظِیْمٍ ۟ۚ

ಮತ್ತು ನಿಮ್ಮ ಸುತ್ತಮುತ್ತಲಲ್ಲಿರುವ ಗ್ರಾಮೀಣ ವಾಸಿಗಳಲ್ಲಿಯೂ ಮತ್ತು ಮದೀನಾದ ವಾಸಿಗಳಲ್ಲಿಯೂ ಕಪಟವಿಶ್ವಾಸಿಗಳಿದ್ದಾರೆ. ಅವರು ಕಾಪಟ್ಯದಲ್ಲಿ ಬೇರೂರಿಬಿಟ್ಟಿದ್ದಾರೆ. ತಾವು ಅವರನ್ನು ಅರಿತಿಲ್ಲ. ಅವರನ್ನು ನಾವು ಅರಿತಿದ್ದೇವೆ. ನಾವು ಅವರನ್ನು ಎರಡು ಬಾರಿ ಶಿಕ್ಷಿಸುವೆವು. ನಂತರ ಅವರು ಮಹಾ ಭೀಕರ ಶಿಕ್ಷೆಯೆಡೆಗೆ ಮರಳಿಸಲಾಗುವರು. info
التفاسير:

external-link copy
102 : 9

وَاٰخَرُوْنَ اعْتَرَفُوْا بِذُنُوْبِهِمْ خَلَطُوْا عَمَلًا صَالِحًا وَّاٰخَرَ سَیِّئًا ؕ— عَسَی اللّٰهُ اَنْ یَّتُوْبَ عَلَیْهِمْ ؕ— اِنَّ اللّٰهَ غَفُوْرٌ رَّحِیْمٌ ۟

ಮತ್ತು ತಮ್ಮ ತಪ್ಪನ್ನು ಒಪ್ಪಿಕೊಂಡವರೂ ಕೆಲವರಿದ್ದಾರೆ. ಅವರು ಸತ್ಕರ್ಮವನ್ನು ದುಷ್ಕರ್ಮದೊಂದಿಗೆ ಬೆರೆಸಿದ್ದರು. ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ನಿಸ್ಸಂದೇಹವಾಗಿಯೂ ಅಲ್ಲಾಹನು ಅತ್ಯಂತ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
103 : 9

خُذْ مِنْ اَمْوَالِهِمْ صَدَقَةً تُطَهِّرُهُمْ وَتُزَكِّیْهِمْ بِهَا وَصَلِّ عَلَیْهِمْ ؕ— اِنَّ صَلٰوتَكَ سَكَنٌ لَّهُمْ ؕ— وَاللّٰهُ سَمِیْعٌ عَلِیْمٌ ۟

ತಾವು ಅವರ ಸೊತ್ತಿನಿಂದ ದಾನವನ್ನು ತೆಗೆÀದುಕೊಳ್ಳಿರಿ. ಅದರ ಮೂಲಕ ತಾವು ಅವರನ್ನು ಶುದ್ಧಿಕರಿಸಿರಿ ಹಾಗೂ ಸಂಸ್ಕರಿಸಿರಿ ಮತ್ತು ಅವರಿಗೋಸ್ಕರ ಪ್ರಾರ್ಥಿಸಿರಿ. ನಿಸ್ಸಂಶಯವಾಗಿಯೂ ತಮ್ಮ ಪ್ರಾರ್ಥನೆಯು ಅವರಿಗೆ ಶಾಂತಿದಾಯಕವಾಗಿದೆ ಮತ್ತು ಅಲ್ಲಾಹನು ಚೆನ್ನಾಗಿ ಆಲಿಸುವವನೂ ಮತ್ತು ಅರಿಯುವವನೂ ಆಗಿದ್ದಾನೆ. info
التفاسير:

external-link copy
104 : 9

اَلَمْ یَعْلَمُوْۤا اَنَّ اللّٰهَ هُوَ یَقْبَلُ التَّوْبَةَ عَنْ عِبَادِهٖ وَیَاْخُذُ الصَّدَقٰتِ وَاَنَّ اللّٰهَ هُوَ التَّوَّابُ الرَّحِیْمُ ۟

ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನೆಂದೂ, ಅವನೇ ದಾನಗಳನ್ನು ಸ್ವೀಕರಿಸುವವನೆಂದೂ ಅವರಿಗೆ ತಿಳಿದಿಲ್ಲವೇ ಮತ್ತು ನಿಸ್ಸಂಶಯವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ, ಕಾರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
105 : 9

وَقُلِ اعْمَلُوْا فَسَیَرَی اللّٰهُ عَمَلَكُمْ وَرَسُوْلُهٗ وَالْمُؤْمِنُوْنَ ؕ— وَسَتُرَدُّوْنَ اِلٰی عٰلِمِ الْغَیْبِ وَالشَّهَادَةِ فَیُنَبِّئُكُمْ بِمَا كُنْتُمْ تَعْمَلُوْنَ ۟ۚ

ತಾವು ಹೇಳಿರಿ: ನೀವು ಕಾರ್ಯವೆಸÀಗಿರಿ ನಿಮ್ಮ ಕರ್ಮಗಳನ್ನು ಸ್ವತಃ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನೋಡಲಿರುವರು ಮತ್ತು ಖಂಡಿತವಾಗಿಯೂ ನೀವು ಸಕಲ ರಹಸ್ಯ ಹಾಗೂ ಬಹಿರಂಗ ವಿಷಯಗಳನ್ನು ಬಲ್ಲವನೆಡೆಗೆ ಮರಳಿಸಲಾಗುವಿರಿ. ಹಾಗೆಯೇ ಅವನು ನಿಮ್ಮ ಸಕಲ ಕೃತ್ಯಗಳನ್ನು ತಿಳಿಸಲಿದ್ದಾನೆ. info
التفاسير:

external-link copy
106 : 9

وَاٰخَرُوْنَ مُرْجَوْنَ لِاَمْرِ اللّٰهِ اِمَّا یُعَذِّبُهُمْ وَاِمَّا یَتُوْبُ عَلَیْهِمْ ؕ— وَاللّٰهُ عَلِیْمٌ حَكِیْمٌ ۟

ಮತ್ತು ಅಲ್ಲಾಹನ ಆಜ್ಞೆ ಬರುವವರೆಗೆ ಕಾದಿರಿಸಲಾದವರು ಕೆಲವರಿದ್ದಾರೆ. ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير: