വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
94 : 9

یَعْتَذِرُوْنَ اِلَیْكُمْ اِذَا رَجَعْتُمْ اِلَیْهِمْ ؕ— قُلْ لَّا تَعْتَذِرُوْا لَنْ نُّؤْمِنَ لَكُمْ قَدْ نَبَّاَنَا اللّٰهُ مِنْ اَخْبَارِكُمْ ؕ— وَسَیَرَی اللّٰهُ عَمَلَكُمْ وَرَسُوْلُهٗ ثُمَّ تُرَدُّوْنَ اِلٰی عٰلِمِ الْغَیْبِ وَالشَّهَادَةِ فَیُنَبِّئُكُمْ بِمَا كُنْتُمْ تَعْمَلُوْنَ ۟

(ಓ ಪೈಗಂಬರರೇ) ನೀವು ಅವರ ಬಳಿಗೆ ಮರಳಿ ಹೋದಾಗ ಅವರು ನಿಮ್ಮ ಮುಂದೆ ನೆಪಗಳನ್ನೊಡ್ಡುತ್ತಾರೆ. ಹೇಳಿರಿ: ನೀವು ನೆಪವನ್ನು ಹೇಳಬೇಡಿರಿ. ನಾವು ನಿಮ್ಮನ್ನು ನಂಬುವುದಿಲ್ಲ ಏಕೆಂದರೆ ಅಲ್ಲಾಹನು ನಮಗೆ ನಿಮ್ಮ ವಿಷಯವನ್ನು ತಿಳಿಸಿದ್ದಾನೆ ಮತ್ತು ಮುಂದೆಯೂ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ನಿಮ್ಮ ಕರ್ಮಗಳನ್ನು ನೋಡಲಿರುವರು. ನಂತರ ನೀವು ರಹಸ್ಯ ಮತ್ತು ಬಹಿರಂಗವನ್ನು ಬಲ್ಲವನೆಡೆಗೆ (ಅಲ್ಲಾಹನೆಡೆಗೆ) ಮರಳಿಸಲಾಗುವಿರಿ. ಆಗ ಅವನು ನೀವೇನನ್ನು ಮಾಡುತ್ತಿದ್ದೀರೆಂದು ನಿಮಗೆ ತಿಳಿಸಿಕೊಡುವನು. info
التفاسير:

external-link copy
95 : 9

سَیَحْلِفُوْنَ بِاللّٰهِ لَكُمْ اِذَا انْقَلَبْتُمْ اِلَیْهِمْ لِتُعْرِضُوْا عَنْهُمْ ؕ— فَاَعْرِضُوْا عَنْهُمْ ؕ— اِنَّهُمْ رِجْسٌ ؗ— وَّمَاْوٰىهُمْ جَهَنَّمُ ۚ— جَزَآءً بِمَا كَانُوْا یَكْسِبُوْنَ ۟

ನೀವು ಅವರ ಬಳಿಗೆ ಮರಳಿದಾಗ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಲೆಂದು ಅವರು ಅಲ್ಲಾಹನ ಆಣೆ ಹಾಕುವರು ಆದುದರಿಂದ ನೀವು ಅವರನ್ನು ಅವರಪಾಡಿಗೆ ಬಿಟ್ಟು ಬಿಡಿರಿ ಅವರು ಖಂಡಿತವಾಗಿಯೂ ಅಶುದ್ಧರಾಗಿದ್ದಾರೆ ಮತ್ತು ಅವರ ವಾಸಸ್ಥಳವು ನರಕವಾಗಿದೆ. ಇದು ಅವರು ಸಂಪಾದಿಸುತ್ತಿದ್ದ ಕರ್ಮಗಳ ಪ್ರತಿಫಲವಾಗಿದೆ. info
التفاسير:

external-link copy
96 : 9

یَحْلِفُوْنَ لَكُمْ لِتَرْضَوْا عَنْهُمْ ۚ— فَاِنْ تَرْضَوْا عَنْهُمْ فَاِنَّ اللّٰهَ لَا یَرْضٰی عَنِ الْقَوْمِ الْفٰسِقِیْنَ ۟

ನೀವು ಅವರ ಬಗ್ಗೆ ಸಂತೃಪ್ತರಾಗುವುದಕ್ಕಾಗಿ ಅವರು ನಿಮ್ಮ ಮುಂದೆ ಆಣೆ ಹಾಕುತ್ತಾರೆ. ನೀವು ಅವರ ಬಗ್ಗೆ ಸಂತೃಪ್ತರಾದರೂ ಅಲ್ಲಾಹನಂತು ಅಂತಹ ಧಿಕ್ಕಾರಿಗಳಾದ ಜನರ ಬಗ್ಗೆ ಸಂತೃಪ್ತನಾಗುವುದಿಲ್ಲ. info
التفاسير:

external-link copy
97 : 9

اَلْاَعْرَابُ اَشَدُّ كُفْرًا وَّنِفَاقًا وَّاَجْدَرُ اَلَّا یَعْلَمُوْا حُدُوْدَ مَاۤ اَنْزَلَ اللّٰهُ عَلٰی رَسُوْلِهٖ ؕ— وَاللّٰهُ عَلِیْمٌ حَكِیْمٌ ۟

ಗ್ರಾಮೀಣ ನಿವಾಸಿಗಳು ಸತ್ಯನಿಷೇಧ ಮತ್ತು ಕಾಪಟ್ಯದಲ್ಲಿ ಅತ್ಯಂತ ಕಠಿಣರಾಗಿದ್ದಾರೆ. ಅಲ್ಲಾಹನು ತನ್ನ ಸಂದೇಶವಾಹಕರ ಮೇಲೆ ಅವತೀರ್ಣಗೊಳಿಸಿದ (ಮೇರೆ) ನಿಯಮಗಳನ್ನು ಅವರು ಅರಿಯದಿರುವುದಕ್ಕೆ ಹೆಚ್ಚು ಅರ್ಹರಾಗಿದ್ದಾರೆ. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير:

external-link copy
98 : 9

وَمِنَ الْاَعْرَابِ مَنْ یَّتَّخِذُ مَا یُنْفِقُ مَغْرَمًا وَّیَتَرَبَّصُ بِكُمُ الدَّوَآىِٕرَ ؕ— عَلَیْهِمْ دَآىِٕرَةُ السَّوْءِ ؕ— وَاللّٰهُ سَمِیْعٌ عَلِیْمٌ ۟

ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ದಂಡವೆAದು ಭಾವಿಸುವ ಮತ್ತು ನಿಮ್ಮ ಮೇಲೆ ವಿಪತ್ತುಗಳು ಎರಗಲೆಂದು ನಿರೀಕ್ಷಿಸುವ ಕೂಟವೂ ಗ್ರಾಮೀಣವಾಸಿಗಳಲ್ಲಿದೆ. ವಿಪತ್ತುಗಳಂತೂ ಅವರ ಮೇಲೆಯೇ ಎರಗಲಿವೆ ಮತ್ತು ಅಲ್ಲಾಹನು ಸರ್ವವನ್ನು ಆಲಿಸುವವನು, ಅರಿಯುವವನೂ ಆಗಿದ್ದಾನೆ. info
التفاسير:

external-link copy
99 : 9

وَمِنَ الْاَعْرَابِ مَنْ یُّؤْمِنُ بِاللّٰهِ وَالْیَوْمِ الْاٰخِرِ وَیَتَّخِذُ مَا یُنْفِقُ قُرُبٰتٍ عِنْدَ اللّٰهِ وَصَلَوٰتِ الرَّسُوْلِ ؕ— اَلَاۤ اِنَّهَا قُرْبَةٌ لَّهُمْ ؕ— سَیُدْخِلُهُمُ اللّٰهُ فِیْ رَحْمَتِهٖ ؕ— اِنَّ اللّٰهَ غَفُوْرٌ رَّحِیْمٌ ۟۠

ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವ ಕೂಟವೊಂದು ಗ್ರಾಮೀಣವಾಸಿಗಳಲ್ಲಿದೆ. ಮತ್ತು ಅವÀರು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಅಲ್ಲಾಹನ ಸಾಮೀಪ್ಯ ಸಾಧನವನ್ನಾಗಿಯೂ, ಮತ್ತು ಸಂದೇಶವಾಹಕರ ಕಡೆಯಿಂದ ಕೃಪಾಶೀರ್ವಾದ ಪಡೆಯುವ ಸಾಧನ ವನ್ನಾಗಿಯೂ ಮಾಡಿಕೊಳ್ಳುತ್ತಾರೆ. ತಿಳಿದುಕೊಳ್ಳಿರಿ: ನಿಸ್ಸಂಶಯವಾಗಿಯೂ ಇದು ಅವರಿಗೆ ಸಾಮೀಪ್ಯಕ್ಕಿರುವ ಸಾಧನವಾಗಿದೆ. ಸಧ್ಯದಲ್ಲೇ ಅಲ್ಲಾಹನು ಅವರನ್ನು ತನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಮಹಾಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ. info
التفاسير: