ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
55 : 33

لَا جُنَاحَ عَلَیْهِنَّ فِیْۤ اٰبَآىِٕهِنَّ وَلَاۤ اَبْنَآىِٕهِنَّ وَلَاۤ اِخْوَانِهِنَّ وَلَاۤ اَبْنَآءِ اِخْوَانِهِنَّ وَلَاۤ اَبْنَآءِ اَخَوٰتِهِنَّ وَلَا نِسَآىِٕهِنَّ وَلَا مَا مَلَكَتْ اَیْمَانُهُنَّ ۚ— وَاتَّقِیْنَ اللّٰهَ ؕ— اِنَّ اللّٰهَ كَانَ عَلٰی كُلِّ شَیْءٍ شَهِیْدًا ۟

ಮಹಿಳೆಯರು ಅವರ ತಂದೆಯಂದಿರು, ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿ ಪುತ್ರರು, ಅವರದ್ದೇ ಮಹಿಳೆಯರು ಮತ್ತು ಅವರ ಅಧೀನದಲ್ಲಿರುವ ಗುಲಾಮರು ಮುಂತಾದವರ ಮುಂದೆ (ಹಿಜಾಬ್ ಧರಿಸದೆ) ಬರುವುದರಲ್ಲಿ ತೊಂದರೆಯಿಲ್ಲ. (ಮಹಿಳೆಯರೇ) ನೀವು ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ. info
التفاسير:

external-link copy
56 : 33

اِنَّ اللّٰهَ وَمَلٰٓىِٕكَتَهٗ یُصَلُّوْنَ عَلَی النَّبِیِّ ؕ— یٰۤاَیُّهَا الَّذِیْنَ اٰمَنُوْا صَلُّوْا عَلَیْهِ وَسَلِّمُوْا تَسْلِیْمًا ۟

ನಿಶ್ಚಯವಾಗಿಯೂ ಅಲ್ಲಾಹು ಪ್ರವಾದಿಯ ಮೇಲೆ ಕೃಪೆ ತೋರುತ್ತಾನೆ ಮತ್ತು ದೇವದೂತರುಗಳು ಅದಕ್ಕಾಗಿ ಪ್ರಾರ್ಥಿಸುತ್ತಾರೆ. ಓ ಸತ್ಯವಿಶ್ವಾಸಿಗಳೇ! ನೀವು ಕೂಡ ಅವರ ಮೇಲೆ ಕೃಪೆ ಮತ್ತು ಶಾಂತಿ ವರ್ಷಿಸಲು ಪ್ರಾರ್ಥಿಸಿರಿ. info
التفاسير:

external-link copy
57 : 33

اِنَّ الَّذِیْنَ یُؤْذُوْنَ اللّٰهَ وَرَسُوْلَهٗ لَعَنَهُمُ اللّٰهُ فِی الدُّنْیَا وَالْاٰخِرَةِ وَاَعَدَّ لَهُمْ عَذَابًا مُّهِیْنًا ۟

ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ತೊಂದರೆ ಕೊಡುವವರನ್ನು ಅಲ್ಲಾಹು ಇಹಲೋಕದಲ್ಲೂ, ಪರಲೋಕದಲ್ಲೂ ಶಪಿಸಿದ್ದಾನೆ. ಅವರಿಗೆ ಅತ್ಯಂತ ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ. info
التفاسير:

external-link copy
58 : 33

وَالَّذِیْنَ یُؤْذُوْنَ الْمُؤْمِنِیْنَ وَالْمُؤْمِنٰتِ بِغَیْرِ مَا اكْتَسَبُوْا فَقَدِ احْتَمَلُوْا بُهْتَانًا وَّاِثْمًا مُّبِیْنًا ۟۠

ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರು ಯಾವುದೇ ತಪ್ಪು ಮಾಡದಿದ್ದರೂ ಸಹ ಅವರಿಗೆ ತೊಂದರೆ ಕೊಡುವವರು ಯಾರೋ ಅವರು ಮಹಾ ಸುಳ್ಳಾರೋಪವನ್ನು ಮತ್ತು ಸ್ಪಷ್ಟ ಪಾಪವನ್ನು ಹೊತ್ತುಕೊಳ್ಳುತ್ತಾರೆ. info
التفاسير:

external-link copy
59 : 33

یٰۤاَیُّهَا النَّبِیُّ قُلْ لِّاَزْوَاجِكَ وَبَنٰتِكَ وَنِسَآءِ الْمُؤْمِنِیْنَ یُدْنِیْنَ عَلَیْهِنَّ مِنْ جَلَابِیْبِهِنَّ ؕ— ذٰلِكَ اَدْنٰۤی اَنْ یُّعْرَفْنَ فَلَا یُؤْذَیْنَ ؕ— وَكَانَ اللّٰهُ غَفُوْرًا رَّحِیْمًا ۟

ಓ ಪ್ರವಾದಿಯವರೇ! ನಿಮ್ಮ ಮಡದಿಯರಿಗೆ, ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ—ಅವರು ತಮ್ಮ ಮೈಮೇಲೆ ಚಾದರಗಳನ್ನು ಹೊದ್ದುಕೊಳ್ಳಲು ಹೇಳಿರಿ. ಇದರಿಂದ ಅವರನ್ನು ಬಹಳ ಬೇಗ ಗುರುತು ಹಚ್ಚಲು ಸಾಧ್ಯವಾಗುತ್ತದೆ ಮತ್ತು ಅವರಿಗೆ ಕಿರುಕುಳಗಳು ಉಂಟಾಗುವುದಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
60 : 33

لَىِٕنْ لَّمْ یَنْتَهِ الْمُنٰفِقُوْنَ وَالَّذِیْنَ فِیْ قُلُوْبِهِمْ مَّرَضٌ وَّالْمُرْجِفُوْنَ فِی الْمَدِیْنَةِ لَنُغْرِیَنَّكَ بِهِمْ ثُمَّ لَا یُجَاوِرُوْنَكَ فِیْهَاۤ اِلَّا قَلِیْلًا ۟ۚۛ

ಕಪಟವಿಶ್ವಾಸಿಗಳು, ಹೃದಯಗಳಲ್ಲಿ ರೋಗವಿರುವವರು ಮತ್ತು ಮದೀನದಲ್ಲಿ ಸುಳ್ಳು ವದಂತಿ ಹಬ್ಬಿಸುವವರು ಅದನ್ನು ನಿಲ್ಲಿಸದಿದ್ದರೆ ನಾವು ನಿಮಗೆ ಖಂಡಿತ ಅವರ ಮೇಲೆ ಹತೋಟಿಯನ್ನು ನೀಡುತ್ತೇವೆ. ನಂತರ ಅವರು ಸ್ವಲ್ಪ ದಿನಗಳವರೆಗೆ ಮಾತ್ರ ನಿಮ್ಮೊಡನೆ ಅಲ್ಲಿ (ಮದೀನದಲ್ಲಿ) ಇರಲು ಸಾಧ್ಯ. info
التفاسير:

external-link copy
61 : 33

مَّلْعُوْنِیْنَ ۛۚ— اَیْنَمَا ثُقِفُوْۤا اُخِذُوْا وَقُتِّلُوْا تَقْتِیْلًا ۟

ಅವರು ಶಾಪಗ್ರಸ್ತರು. ಅವರು ಎಲ್ಲೇ ಕಂಡುಬಂದರೂ ಅವರನ್ನು ಸೆರೆ ಹಿಡಿಯಲಾಗಲಿ ಮತ್ತು ಕಗ್ಗೊಲೆ ಮಾಡಲಾಗಲಿ. info
التفاسير:

external-link copy
62 : 33

سُنَّةَ اللّٰهِ فِی الَّذِیْنَ خَلَوْا مِنْ قَبْلُ ۚ— وَلَنْ تَجِدَ لِسُنَّةِ اللّٰهِ تَبْدِیْلًا ۟

ಹಿಂದಿನ ಕಾಲದವರ ವಿಷಯದಲ್ಲೂ ಅಲ್ಲಾಹು ಇದೇ ಕ್ರಮ ಕೈಗೊಂಡಿದ್ದನು. ಅಲ್ಲಾಹನ ಕ್ರಮಕ್ಕೆ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ. info
التفاسير: