ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
16 : 33

قُلْ لَّنْ یَّنْفَعَكُمُ الْفِرَارُ اِنْ فَرَرْتُمْ مِّنَ الْمَوْتِ اَوِ الْقَتْلِ وَاِذًا لَّا تُمَتَّعُوْنَ اِلَّا قَلِیْلًا ۟

ಹೇಳಿರಿ: “ನೀವು ಸಾವಿನಿಂದ ಅಥವಾ ಕೊಲೆಯಾಗುವುದರಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುವುದಾದರೆ ಆ ಪಲಾಯನವು ನಿಮಗೆ ಯಾವುದೇ ಪ್ರಯೋಜನ ನೀಡುವುದಿಲ್ಲ. ನೀವು ಹಾಗೆ ಮಾಡಿದರೂ ನಿಮಗೆ ತಾತ್ಕಾಲಿಕ ಆನಂದ ಮಾತ್ರ ನೀಡಲಾಗುತ್ತದೆ.” info
التفاسير:

external-link copy
17 : 33

قُلْ مَنْ ذَا الَّذِیْ یَعْصِمُكُمْ مِّنَ اللّٰهِ اِنْ اَرَادَ بِكُمْ سُوْٓءًا اَوْ اَرَادَ بِكُمْ رَحْمَةً ؕ— وَلَا یَجِدُوْنَ لَهُمْ مِّنْ دُوْنِ اللّٰهِ وَلِیًّا وَّلَا نَصِیْرًا ۟

ಹೇಳಿರಿ: “ಅಲ್ಲಾಹು ನಿಮಗೇನಾದರೂ ತೊಂದರೆ ಮಾಡಲು ಬಯಸಿದರೆ, ಅಥವಾ ನಿಮಗೆ ದಯೆ ತೋರಲು ಬಯಸಿದರೆ, ಅಲ್ಲಾಹನಿಂದ ನಿಮ್ಮನ್ನು ರಕ್ಷಿಸುವವನು ಯಾರು? ಅವರು ಅಲ್ಲಾಹನ ಹೊರತು ಬೇರೆ ರಕ್ಷಕನನ್ನು ಅಥವಾ ಸಹಾಯಕನನ್ನು ಕಾಣಲಾರರು. info
التفاسير:

external-link copy
18 : 33

قَدْ یَعْلَمُ اللّٰهُ الْمُعَوِّقِیْنَ مِنْكُمْ وَالْقَآىِٕلِیْنَ لِاِخْوَانِهِمْ هَلُمَّ اِلَیْنَا ۚ— وَلَا یَاْتُوْنَ الْبَاْسَ اِلَّا قَلِیْلًا ۟ۙ

ನಿಮ್ಮಲ್ಲಿ ಇತರ ಜನರನ್ನು ತಡೆಯುವವರು, ತಮ್ಮ ಸಹೋದರರೊಡನೆ “ನಮ್ಮ ಬಳಿ ಬನ್ನಿ” ಎಂದು ಹೇಳುವವರು ಮತ್ತು ಅಪರೂಪವಾಗಿ ಮಾತ್ರ ಯುದ್ಧಕ್ಕೆ ಹೋಗುವವರು ಯಾರೆಂದು ಅಲ್ಲಾಹನಿಗೆ ತಿಳಿದಿದೆ. info
التفاسير:

external-link copy
19 : 33

اَشِحَّةً عَلَیْكُمْ ۖۚ— فَاِذَا جَآءَ الْخَوْفُ رَاَیْتَهُمْ یَنْظُرُوْنَ اِلَیْكَ تَدُوْرُ اَعْیُنُهُمْ كَالَّذِیْ یُغْشٰی عَلَیْهِ مِنَ الْمَوْتِ ۚ— فَاِذَا ذَهَبَ الْخَوْفُ سَلَقُوْكُمْ بِاَلْسِنَةٍ حِدَادٍ اَشِحَّةً عَلَی الْخَیْرِ ؕ— اُولٰٓىِٕكَ لَمْ یُؤْمِنُوْا فَاَحْبَطَ اللّٰهُ اَعْمَالَهُمْ ؕ— وَكَانَ ذٰلِكَ عَلَی اللّٰهِ یَسِیْرًا ۟

ಅವರು ನಿಮಗೆ ಸಹಾಯ ಮಾಡುವುದರಲ್ಲಿ ಅತ್ಯಂತ ಜಿಪುಣರಾಗಿದ್ದಾರೆ. ಭಯದ ಸನ್ನಿವೇಶವುಂಟಾದರೆ ಅವರು ನಿಮ್ಮನ್ನು ದಿಟ್ಟಿಸಿ ನೋಡುವುದ್ನು ನಿಮಗೆ ಕಾಣಬಹುದು. ಸಾವಿನ ದವಡೆಯಲ್ಲಿರುವ ವ್ಯಕ್ತಿಯ ಕಣ್ಣುಗಳಂತೆ ಅವರ ಕಣ್ಣುಗಳು ತಿರುಗುತ್ತವೆ. ಆದರೆ ಭಯವು ನಿವಾರಣೆಯಾದರೆ ಅವರು ಹರಿತವಾದ ನಾಲಗೆಗಳ ಮೂಲಕ ನಿಮ್ಮನ್ನು ಚುಚ್ಚಿ ಮಾತನಾಡುತ್ತಾರೆ. ಅವರು ಸಂಪತ್ತನ್ನು ಅತಿಯಾಗಿ ಆಸೆಪಡುತ್ತಾರೆ. ಅವರು ಸತ್ಯವಿಶ್ವಾಸಿಗಳಲ್ಲ. ಆದ್ದರಿಂದ ಅಲ್ಲಾಹು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು. ಅದು ಅಲ್ಲಾಹನ ಮಟ್ಟಿಗೆ ಬಹಳ ಸುಲಭವಾಗಿದೆ. info
التفاسير:

external-link copy
20 : 33

یَحْسَبُوْنَ الْاَحْزَابَ لَمْ یَذْهَبُوْا ۚ— وَاِنْ یَّاْتِ الْاَحْزَابُ یَوَدُّوْا لَوْ اَنَّهُمْ بَادُوْنَ فِی الْاَعْرَابِ یَسْاَلُوْنَ عَنْ اَنْۢبَآىِٕكُمْ ؕ— وَلَوْ كَانُوْا فِیْكُمْ مَّا قٰتَلُوْۤا اِلَّا قَلِیْلًا ۟۠

ಮಿತ್ರಪಡೆಗಳು (ವೈರಿಗಳು) ಓಡಿಹೋಗಿರಲಿಕ್ಕಿಲ್ಲ ಎಂದು ಅವರು (ಕಪಟವಿಶ್ವಾಸಿಗಳು) ಭಾವಿಸುತ್ತಾರೆ. ಮಿತ್ರಪಡೆಗಳೇನಾದರೂ ಪುನಃ ಬಂದರೆ, ಗ್ರಾಮೀಣ ಅರಬ್ಬರೊಂದಿಗೆ ಸೇರಿ ಮರುಭೂಮಿಗೆ ಹೋಗಿ ಅಲ್ಲಿ ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಬದುಕುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವರು ಚಿಂತಿಸುತ್ತಾರೆ. ಇನ್ನು ಅವರು ನಿಮ್ಮ ಜೊತೆ (ಮದೀನದಲ್ಲಿ) ಇದ್ದರೂ ಅವರು ಸ್ವಲ್ಪ ಮಾತ್ರ ಯುದ್ಧ ಮಾಡುವರು. info
التفاسير:

external-link copy
21 : 33

لَقَدْ كَانَ لَكُمْ فِیْ رَسُوْلِ اللّٰهِ اُسْوَةٌ حَسَنَةٌ لِّمَنْ كَانَ یَرْجُوا اللّٰهَ وَالْیَوْمَ الْاٰخِرَ وَذَكَرَ اللّٰهَ كَثِیْرًا ۟ؕ

ನಿಮಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಲ್ಲಾಹನನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ. info
التفاسير:

external-link copy
22 : 33

وَلَمَّا رَاَ الْمُؤْمِنُوْنَ الْاَحْزَابَ ۙ— قَالُوْا هٰذَا مَا وَعَدَنَا اللّٰهُ وَرَسُوْلُهٗ وَصَدَقَ اللّٰهُ وَرَسُوْلُهٗ ؗ— وَمَا زَادَهُمْ اِلَّاۤ اِیْمَانًا وَّتَسْلِیْمًا ۟ؕ

ಸತ್ಯವಿಶ್ವಾಸಿಗಳು ಮಿತ್ರಪಡೆಗಳನ್ನು ಕಂಡಾಗ ಹೇಳಿದರು: “ಇದೇ ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಮಗೆ ವಾಗ್ದಾನ ಮಾಡಿದ್ದು. ಅಲ್ಲಾಹು ಮತ್ತು ಅವನ ಸಂದೇಶವಾಹಕರು ಸತ್ಯವನ್ನೇ ಹೇಳಿದ್ದಾರೆ.” ಅದು ಅವರಿಗೆ ವಿಶ್ವಾಸ ಮತ್ತು ಶರಣಾಗತಿಯನ್ನು ಮಾತ್ರ ಹೆಚ್ಚಿಸಿತು. info
التفاسير: