クルアーンの対訳 - カンナダ語対訳 - Bashir Mysore

ページ番号:close

external-link copy
34 : 10

قُلْ هَلْ مِنْ شُرَكَآىِٕكُمْ مَّنْ یَّبْدَؤُا الْخَلْقَ ثُمَّ یُعِیْدُهٗ ؕ— قُلِ اللّٰهُ یَبْدَؤُا الْخَلْقَ ثُمَّ یُعِیْدُهٗ فَاَنّٰی تُؤْفَكُوْنَ ۟

ಹೇಳಿರಿ; ಸೃಷ್ಟಿಯ ಆರಂಭ ಮಾಡಿ ಆನಂತರ ಪುನಾರಾವರ್ತಿಸುವವನು ಯಾರಾದರೂ ನಿಮ್ಮ ಸಹಭಾಗಿ ದೇವರುಗಳಲ್ಲಿದ್ದಾರೆಯೇ? ಹೇಳಿರಿ; ಅಲ್ಲಾಹನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಆನಂತರ ಅವನೇ ಪುನರಾವರ್ತಿಸುತ್ತಾನೆ. ಹಾಗಿದ್ದೂ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ? info
التفاسير:

external-link copy
35 : 10

قُلْ هَلْ مِنْ شُرَكَآىِٕكُمْ مَّنْ یَّهْدِیْۤ اِلَی الْحَقِّ ؕ— قُلِ اللّٰهُ یَهْدِیْ لِلْحَقِّ ؕ— اَفَمَنْ یَّهْدِیْۤ اِلَی الْحَقِّ اَحَقُّ اَنْ یُّتَّبَعَ اَمَّنْ لَّا یَهِدِّیْۤ اِلَّاۤ اَنْ یُّهْدٰی ۚ— فَمَا لَكُمْ ۫— كَیْفَ تَحْكُمُوْنَ ۟

ಹೇಳಿರಿ ನಿಮ್ಮ ಸಹಭಾಗಿ ದೇವರುಗಳಲ್ಲಿ ಸತ್ಯದೆಡೆಗೆ ಮಾರ್ಗದರ್ಶನ ಮಾಡುವವರು ಯಾರಾದರೂ ಇದ್ದಾರೆಯೇ? ಹೇಳಿರಿ: ಅಲ್ಲಾಹನೇ ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ. ಇನ್ನು ಸತ್ಯದೆಡೆಗೆ ಮುನ್ನಡೆಸುವವನು ಅನುಸರಿಸ್ಪಡಲು ಯೋಗ್ಯನೇ ಅಥವಾ ಮಾರ್ಗದರ್ಶನ ಮಾಡದ ವಿನಃ ಮಾರ್ಗ ಪಡೆಯದವನೇ? ಹಾಗಿದ್ದೂ ನಿಮಗೇನಾಗಿಬಿಟ್ಟಿದೆ? ನೀವು ಎಂತಹ ತೀರ್ಮಾನ ಕೈಗೊಳ್ಳುತ್ತಿರುವಿರಿ? info
التفاسير:

external-link copy
36 : 10

وَمَا یَتَّبِعُ اَكْثَرُهُمْ اِلَّا ظَنًّا ؕ— اِنَّ الظَّنَّ لَا یُغْنِیْ مِنَ الْحَقِّ شَیْـًٔا ؕ— اِنَّ اللّٰهَ عَلِیْمٌۢ بِمَا یَفْعَلُوْنَ ۟

ಮತ್ತು ಬಹುದೇವಾರಾಧಕರ ಪೈಕಿ ಅಧಿಕ ಜನರು ಊಹೆಯನ್ನೇ ಅನುಸರಿಸುತ್ತಿದ್ದಾರೆ. ಖಂಡಿತವಾಗಿಯೂ ಸತ್ಯದ ಎದುರು ಊಹೆಯು ಒಂದಿಷ್ಟೂ ಪ್ರಯೋಜನಕ್ಕೆ ಬಾರದು. ನಿಶ್ಚಯವಾಗಿಯು ಅಲ್ಲಾಹನು ಅವರು ಮಾಡುತ್ತಿರುವುದೆಲ್ಲವನ್ನು ಚೆನ್ನಾಗಿ ಅರಿಯುತ್ತಾನೆ. info
التفاسير:

external-link copy
37 : 10

وَمَا كَانَ هٰذَا الْقُرْاٰنُ اَنْ یُّفْتَرٰی مِنْ دُوْنِ اللّٰهِ وَلٰكِنْ تَصْدِیْقَ الَّذِیْ بَیْنَ یَدَیْهِ وَتَفْصِیْلَ الْكِتٰبِ لَا رَیْبَ فِیْهِ مِنْ رَّبِّ الْعٰلَمِیْنَ ۟۫

ಮತ್ತು ಈ ಕುರ್‌ಆನ್ ಅಲ್ಲಾಹನ ಹೊರತು ಇತರರಿಂದ ರಚಿಸಿ ತಂದA- ತಹದ್ದಲ್ಲ. ಆದರೆ ಇದಂತು ತನಗಿಂತ ಮುಂಚೆ ಅವತೀರ್ಣಗೊಳಿಸಿರುವಂತಹ ಗ್ರಂಥಗಳನ್ನು ಸತ್ಯವೆಂದು ಪ್ರಾಮಾಣೀಕರಿಸುವ, ಮತ್ತು ದೈವಿಕ ನಿಯಮಗಳನ್ನು ವಿವರಿಸುವಂತಹ ಗ್ರಂಥವಾಗಿದೆ. ಇದು ಸರ್ವಲೋಕಗಳ ಪ್ರಭುವಿನವತಿಯಿಂದ ಅವತೀರ್ಣವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. info
التفاسير:

external-link copy
38 : 10

اَمْ یَقُوْلُوْنَ افْتَرٰىهُ ؕ— قُلْ فَاْتُوْا بِسُوْرَةٍ مِّثْلِهٖ وَادْعُوْا مَنِ اسْتَطَعْتُمْ مِّنْ دُوْنِ اللّٰهِ اِنْ كُنْتُمْ صٰدِقِیْنَ ۟

ಅವರು ಮುಹಮ್ಮದ್‌ರವರು ಸ್ವತಃ ಅದನ್ನು ರಚಿಸಿರುವರೆಂದು ಹೇಳುತ್ತಿದ್ದಾರೆಯೇ ? ಉತ್ತರಿಸಿರಿ ; ಹಾಗಿದ್ದರೆ ಅದರಂತಹಾ ಒಂದೇ ಒಂದು ಅಧ್ಯಾಯವನ್ನು ಪ್ರಸ್ತುತ ಪಡಿಸಿರಿ ಹಾಗು ನೀವು ಸತ್ಯವಾದಿಗಳಾಗಿದ್ದರೆ. ಅಲ್ಲಾಹನ ಹೊರತು ನಿಮ್ಮ (ಸಹಾಯಕ್ಕಾಗಿ) ಸಾಧ್ಯವಿದ್ದವರನ್ನೆಲ್ಲಾ ಕರೆದುಕೊಳ್ಳಿರಿ. info
التفاسير:

external-link copy
39 : 10

بَلْ كَذَّبُوْا بِمَا لَمْ یُحِیْطُوْا بِعِلْمِهٖ وَلَمَّا یَاْتِهِمْ تَاْوِیْلُهٗ ؕ— كَذٰلِكَ كَذَّبَ الَّذِیْنَ مِنْ قَبْلِهِمْ فَانْظُرْ كَیْفَ كَانَ عَاقِبَةُ الظّٰلِمِیْنَ ۟

ಅವರ ಜ್ಞಾನದ ಹಿಡಿತಕ್ಕೆ ಬಾರದ ಮತ್ತು ಅದರ ಪರಿಣಾಮವು ಅವರಿಗೆ ಸ್ಪಷ್ಟವಾಗದಂತಹದ್ದನ್ನು ಅವರು ಸುಳ್ಳಾಗಿಸುತ್ತಾರೆ. ಇದೇ ಪ್ರಕಾರ ಅವರ ಪೂರ್ವಿಕರೂ ಸಹ ಸುಳ್ಳಾಗಿಸಿದ್ದರು. ಕೊನೆಗೆ ಅಕ್ರಮಿಗಳ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ. info
التفاسير:

external-link copy
40 : 10

وَمِنْهُمْ مَّنْ یُّؤْمِنُ بِهٖ وَمِنْهُمْ مَّنْ لَّا یُؤْمِنُ بِهٖ ؕ— وَرَبُّكَ اَعْلَمُ بِالْمُفْسِدِیْنَ ۟۠

ಮತ್ತು ಅವರ ಪೈಕಿ ಕೆಲವರು ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಕೆಲವರು ಇದರಲ್ಲಿ ವಿಶ್ವಾಸವಿಡುವುದಿಲ್ಲ ಮತ್ತು ನಿಮ್ಮ ಪ್ರಭುವು ಕ್ಷೆÆÃಭೆ ಹರಡುವವರನ್ನು ಚೆನ್ನಾಗಿ ಅರಿಯುತ್ತಾನೆ. info
التفاسير:

external-link copy
41 : 10

وَاِنْ كَذَّبُوْكَ فَقُلْ لِّیْ عَمَلِیْ وَلَكُمْ عَمَلُكُمْ ۚ— اَنْتُمْ بَرِیْٓـُٔوْنَ مِمَّاۤ اَعْمَلُ وَاَنَا بَرِیْٓءٌ مِّمَّا تَعْمَلُوْنَ ۟

ಮತ್ತು ಅವರು ನಿಮ್ಮನ್ನು ಸುಳ್ಳಾಗಿಸಿದರೆ, ಹೇಳಿರಿ; ನನಗೆ ನನ್ನ ಕರ್ಮ ನಿಮಗೆ ನಿಮ್ಮ ಕರ್ಮ, ನನ್ನ ಕರ್ಮಗಳಿಂದ ನೀವು ಹೊಣೆಮುಕ್ತರಾಗಿದ್ದೀರಿ, ಮತ್ತು ನಾನು ನಿಮ್ಮ ಕರ್ಮಗಳಿಂದ ಹೊಣೆ ಮುಕ್ತನಾಗಿದ್ದೇನೆ. info
التفاسير:

external-link copy
42 : 10

وَمِنْهُمْ مَّنْ یَّسْتَمِعُوْنَ اِلَیْكَ ؕ— اَفَاَنْتَ تُسْمِعُ الصُّمَّ وَلَوْ كَانُوْا لَا یَعْقِلُوْنَ ۟

ಮತ್ತು ಅವರ ಪೈಕಿ ಕೆಲವರು ನಿಮ್ಮೆಡೆಗೆ ಕಿವಿಗೊಡುವವರೂ ಇದ್ದಾರೆ. ಏನು ನೀವು ಕಿವುಡರಿಗೆ ತಿಳಿಯದಿದ್ದರೂ ಕೇಳಿಸುವಿರಾ ? info
التفاسير: