クルアーンの対訳 - カンナダ語対訳 - Bashir Mysore

ページ番号:close

external-link copy
26 : 10

لِلَّذِیْنَ اَحْسَنُوا الْحُسْنٰی وَزِیَادَةٌ ؕ— وَلَا یَرْهَقُ وُجُوْهَهُمْ قَتَرٌ وَّلَا ذِلَّةٌ ؕ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟

ಒಳಿತನ್ನು ಮಾಡಿದವರಿಗೆ ಅತ್ತುö್ಯತ್ತಮ ಪ್ರತಿಫಲವಿದೆ, ಇನ್ನೂ ಹೆಚ್ಚು ಅನುಗ್ರಹವೂ ಇದೆ ಮತ್ತು ಅವರ ಮುಖಗಳಿಗೆ ಕಪ್ಪು ಛಾಯೆಯಾಗಲಿ ನಿಂದ್ಯತೆಯಾಗಲಿ ಆವರಿಸದು. ಅವರು ಸ್ವರ್ಗವಾಸಿಗಳಾಗಿರುವರು, ಅದರಲ್ಲವರು ಶಾಶ್ವತರಾಗಿರುತ್ತಾರೆ. info
التفاسير:

external-link copy
27 : 10

وَالَّذِیْنَ كَسَبُوا السَّیِّاٰتِ جَزَآءُ سَیِّئَةٍ بِمِثْلِهَا ۙ— وَتَرْهَقُهُمْ ذِلَّةٌ ؕ— مَا لَهُمْ مِّنَ اللّٰهِ مِنْ عَاصِمٍ ۚ— كَاَنَّمَاۤ اُغْشِیَتْ وُجُوْهُهُمْ قِطَعًا مِّنَ الَّیْلِ مُظْلِمًا ؕ— اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟

ಮತ್ತು ದುಷ್ಕೃತ್ಯಗಳನ್ನು ಮಾಡಿದವರಿಗೆ ದುಷ್ಕೃತ್ಯಗಳ ಪ್ರತಿಫಲವು ಅದಕ್ಕೆ ಸಮಾನವಾಗಿಯೇ ಇರುವುದು ಮತ್ತು ಅವರನ್ನು ನಿಂದ್ಯತೆಯು ಆವರಿಸುವುದು ಅವರನ್ನು ಅಲ್ಲಾಹನಿಂದ ಯಾವೊಬ್ಬನೂ ರಕ್ಷಿಸಲಾರನು. ಅವರ ಮುಖಗಳ ಮೇಲೆ ಅಂಧಕಾರದ ರಾತ್ರಿಯ ತುಣುಕುಗಳು ಆವರಿಸಿದಂತಿವೆ. ಅವರು ನರಕವಾಸಿಗಳಾಗಿರುವರು. ಅದರಲ್ಲವರು ಶಾಶ್ವತವಾಗಿರುವರು. info
التفاسير:

external-link copy
28 : 10

وَیَوْمَ نَحْشُرُهُمْ جَمِیْعًا ثُمَّ نَقُوْلُ لِلَّذِیْنَ اَشْرَكُوْا مَكَانَكُمْ اَنْتُمْ وَشُرَكَآؤُكُمْ ۚ— فَزَیَّلْنَا بَیْنَهُمْ وَقَالَ شُرَكَآؤُهُمْ مَّا كُنْتُمْ اِیَّانَا تَعْبُدُوْنَ ۟

ಅವರೆಲ್ಲರನ್ನು ಒಟ್ಟುಗೂಡಿಸುವ ದಿನದಂದು ನಾವು ನಮ್ಮ ಜೊತೆ ಸಹಭಾಗಿಗಳನ್ನು ನಿಶ್ಚಯಿಸಿದವರೊಂದಿಗೆ ಹೇಳುವೆವು; “ನೀವು ಮತ್ತು ನಿಮ್ಮ ಸಹಭಾಗಿ ದೇವರುಗಳು ನಿಂತಲ್ಲೇ ನಿಲ್ಲಿರಿ. ಅನಂತರ ನಾವು ಅವರನ್ನು ಪರಸ್ಪರ ಬೇರ್ಪಡಿಸಿಬಿಡುವೆವು ಮತ್ತು (ಅವರೊಂದಿಗೆ) ಅವರ ಸಹಭಾಗಿ ದೇವರುಗಳೆನ್ನುವರು; ನೀವು ನಮ್ಮನ್ನಂತು ಆರಾಧಿಸುತ್ತಿರಲಿಲ್ಲ” info
التفاسير:

external-link copy
29 : 10

فَكَفٰی بِاللّٰهِ شَهِیْدًا بَیْنَنَا وَبَیْنَكُمْ اِنْ كُنَّا عَنْ عِبَادَتِكُمْ لَغٰفِلِیْنَ ۟

ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ನಾವು ನಿಮ್ಮ ಆರಾಧನೆಯ ಕುರಿತು ಸಂಪೂರ್ಣ ಅಲಕ್ಷö್ಯರಲ್ಲಾಗಿದ್ದೆವು. info
التفاسير:

external-link copy
30 : 10

هُنَالِكَ تَبْلُوْا كُلُّ نَفْسٍ مَّاۤ اَسْلَفَتْ وَرُدُّوْۤا اِلَی اللّٰهِ مَوْلٰىهُمُ الْحَقِّ وَضَلَّ عَنْهُمْ مَّا كَانُوْا یَفْتَرُوْنَ ۟۠

ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಾನು ಮೊದಲು ಮಾಡಿದ ಕರ್ಮಗಳನ್ನು ತಿಳಿದುಕೊಳ್ಳುವನು ಮತ್ತು ಅವರು ತಮ್ಮ ನೈಜ ಪ್ರಭುವಾದ ಅಲ್ಲಾಹನೆಡೆಗೆ ಮರಳಿಸಲಾಗುವರು. ಮತ್ತು ಅವರು ಸುಳ್ಳಾಗಿ ಸೃಷ್ಟಿಸಿದ್ದೆಲ್ಲವೂ ಅವರಿಂದ ಕಣ್ಮರೆಯಾಗಿ ಬಿಡುವುದು. info
التفاسير:

external-link copy
31 : 10

قُلْ مَنْ یَّرْزُقُكُمْ مِّنَ السَّمَآءِ وَالْاَرْضِ اَمَّنْ یَّمْلِكُ السَّمْعَ وَالْاَبْصَارَ وَمَنْ یُّخْرِجُ الْحَیَّ مِنَ الْمَیِّتِ وَیُخْرِجُ الْمَیِّتَ مِنَ الْحَیِّ وَمَنْ یُّدَبِّرُ الْاَمْرَ ؕ— فَسَیَقُوْلُوْنَ اللّٰهُ ۚ— فَقُلْ اَفَلَا تَتَّقُوْنَ ۟

ನಿಮಗೆ ಆಕಾಶ ಮತ್ತು ಭೂಮಿಯಿಂದ ಜೀವನಾಧಾರ ನೀಡುವವನು ಯಾರು? ಅಥವಾ ಕಿವಿಗಳ ಮತ್ತು ಕಣ್ಣುಗಳ ಒಡೆಯನಾರು ? ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವನಾರು? ಮತ್ತು ಸಕಲ ಕಾರ್ಯಗಳನ್ನು ನಿಯೋಜಿಸುವವನಾರು ? ಎಂದು ಅವರೊಡನೆ ಕೇಳಿರಿ. ಅವರು ಹೇಳುವರು; ಅಲ್ಲಾಹ್ ಆಗ ನೀವು ಅವರೊಂದಿಗೆ ಹೇಳಿರಿ. ಹಾಗಿದ್ದೂ ನೀವು ಭಯವಿರಿಸಿಕೊಳ್ಳುವುದಿಲ್ಲವೇ ? info
التفاسير:

external-link copy
32 : 10

فَذٰلِكُمُ اللّٰهُ رَبُّكُمُ الْحَقُّ ۚ— فَمَاذَا بَعْدَ الْحَقِّ اِلَّا الضَّلٰلُ ۚ— فَاَنّٰی تُصْرَفُوْنَ ۟

ಅವನೇ ನಿಮ್ಮ ನೈಜ ಪ್ರಭು ಅಲ್ಲಾಹನಾಗಿದ್ದಾನೆ. ಇನ್ನು ಸತ್ಯವನ್ನು ಬಿಟ್ಟರೆ ಪಥಭ್ರಷ್ಟತೆಯಲ್ಲದೆ ಇನ್ನೇನು ಉಳಿದಿದೆ? ಹೀಗಿರುವಾಗ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ ? info
التفاسير:

external-link copy
33 : 10

كَذٰلِكَ حَقَّتْ كَلِمَتُ رَبِّكَ عَلَی الَّذِیْنَ فَسَقُوْۤا اَنَّهُمْ لَا یُؤْمِنُوْنَ ۟

ಇದೇ ಪ್ರಕಾರ ಕರ್ಮಭ್ರಷ್ಟರು ವಿಶ್ವಾಸವಿರಿಸಲಾರರು ಎಂಬ ನಿಮ್ಮ ಪ್ರಭುವಿನ ಮಾತು ಸತ್ಯವಾಗಿಬಿಟ್ಟಿದೆ. info
التفاسير: