Fassarar Ma'anonin Alqura'ni - Fassarar Kanadiy - Hamza Batur

ಅತ್ತೂರ್

external-link copy
1 : 52

وَالطُّوْرِ ۟ۙ

ತೂರ್ ಪರ್ವತದ ಮೇಲಾಣೆ! info
التفاسير:

external-link copy
2 : 52

وَكِتٰبٍ مَّسْطُوْرٍ ۟ۙ

ಲಿಖಿತಗೊಳಿಸಿದ ಗ್ರಂಥದ ಮೇಲಾಣೆ! info
التفاسير:

external-link copy
3 : 52

فِیْ رَقٍّ مَّنْشُوْرٍ ۟ۙ

ತೆರೆದಿಟ್ಟ ತೊಗಲಿನ ಹಾಳೆಗಳಲ್ಲಿ. info
التفاسير:

external-link copy
4 : 52

وَّالْبَیْتِ الْمَعْمُوْرِ ۟ۙ

ಬೈತುಲ್ ಮಅ‌ಮೂರ್‌ನ ಮೇಲಾಣೆ![1] info

[1] ಇದು ಏಳನೇ ಆಕಾಶದಲ್ಲಿರುವ ಆರಾಧನಾಲಯವಾಗಿದ್ದು ದೇವದೂತರುಗಳು ಇಲ್ಲಿ ಆರಾಧನೆ ಮಾಡುತ್ತಾರೆ. ಇದು ದೇವದೂತರುಗಳಿಂದ ತುಂಬಿ ತುಳುಕುತ್ತಿರುತ್ತದೆ. ದಿನನಿತ್ಯ ಎಪ್ಪತ್ತು ಸಾವಿರ ದೇವದೂತರು ಇಲ್ಲಿಗೆ ಭೇಟಿ ನೀಡಿ ಆರಾಧನೆ ಮಾಡುತ್ತಾರೆ. ಇದರ ವಿಶೇಷತೆ ಏನೆಂದರೆ, ಒಮ್ಮೆ ಇಲ್ಲಿ ಆರಾಧನೆ ಮಾಡಿದ ದೇವದೂತರು ಪುನಃ ಇಲ್ಲಿಗೆ ಆರಾಧನೆ ಮಾಡಲು ಬರುವುದಿಲ್ಲ.

التفاسير:

external-link copy
5 : 52

وَالسَّقْفِ الْمَرْفُوْعِ ۟ۙ

ಎತ್ತರದ ಛಾವಣಿಯ (ಆಕಾಶದ) ಮೇಲಾಣೆ! info
التفاسير:

external-link copy
6 : 52

وَالْبَحْرِ الْمَسْجُوْرِ ۟ۙ

ಹೊತ್ತಿ ಉರಿಸಲಾದ ಸಮುದ್ರದ ಮೇಲಾಣೆ! info
التفاسير:

external-link copy
7 : 52

اِنَّ عَذَابَ رَبِّكَ لَوَاقِعٌ ۟ۙ

ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಸಂಭವಿಸಿಯೇ ತೀರುತ್ತದೆ. info
التفاسير:

external-link copy
8 : 52

مَّا لَهٗ مِنْ دَافِعٍ ۟ۙ

ಅದನ್ನು ತಡೆಯುವವರು ಯಾರೂ ಇಲ್ಲ. info
التفاسير:

external-link copy
9 : 52

یَّوْمَ تَمُوْرُ السَّمَآءُ مَوْرًا ۟

ಆಕಾಶವು ಪ್ರಬಲವಾಗಿ ಓಲಾಡುವ ದಿನ. info
التفاسير:

external-link copy
10 : 52

وَّتَسِیْرُ الْجِبَالُ سَیْرًا ۟ؕ

ಪರ್ವತಗಳು ಚಲಿಸತೊಡಗುವ ದಿನ. info
التفاسير:

external-link copy
11 : 52

فَوَیْلٌ یَّوْمَىِٕذٍ لِّلْمُكَذِّبِیْنَ ۟ۙ

ಅಂದು ಸತ್ಯನಿಷೇಧಿಗಳಿಗೆ ವಿನಾಶವಿದೆ. info
التفاسير:

external-link copy
12 : 52

الَّذِیْنَ هُمْ فِیْ خَوْضٍ یَّلْعَبُوْنَ ۟ۘ

ಅವರು ಯಾರೆಂದರೆ, ವ್ಯರ್ಥ ಮಾತುಗಳಲ್ಲಿ ಮಗ್ನವಾಗಿ ಆಟವಾಡುವವರು. info
التفاسير:

external-link copy
13 : 52

یَوْمَ یُدَعُّوْنَ اِلٰی نَارِ جَهَنَّمَ دَعًّا ۟ؕ

ಅವರನ್ನು ಬಲವಾಗಿ ನರಕಾಗ್ನಿಗೆ ತಳ್ಳಲಾಗುವ ದಿನ! info
التفاسير:

external-link copy
14 : 52

هٰذِهِ النَّارُ الَّتِیْ كُنْتُمْ بِهَا تُكَذِّبُوْنَ ۟

(ಅವರೊಂದಿಗೆ ಹೇಳಲಾಗುವುದು): “ಇದೇ ನೀವು ನಿಷೇಧಿಸುತ್ತಿದ್ದ ನರಕ. info
التفاسير: