Fassarar Ma'anonin Alqura'ni - Fassarar Kanadiy - Hamza Batur

external-link copy
94 : 4

یٰۤاَیُّهَا الَّذِیْنَ اٰمَنُوْۤا اِذَا ضَرَبْتُمْ فِیْ سَبِیْلِ اللّٰهِ فَتَبَیَّنُوْا وَلَا تَقُوْلُوْا لِمَنْ اَلْقٰۤی اِلَیْكُمُ السَّلٰمَ لَسْتَ مُؤْمِنًا ۚ— تَبْتَغُوْنَ عَرَضَ الْحَیٰوةِ الدُّنْیَا ؗ— فَعِنْدَ اللّٰهِ مَغَانِمُ كَثِیْرَةٌ ؕ— كَذٰلِكَ كُنْتُمْ مِّنْ قَبْلُ فَمَنَّ اللّٰهُ عَلَیْكُمْ فَتَبَیَّنُوْا ؕ— اِنَّ اللّٰهَ كَانَ بِمَا تَعْمَلُوْنَ خَبِیْرًا ۟

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಾಗ (ಶತ್ರು ಮತ್ತು ಮಿತ್ರ ಯಾರೆಂದು) ಸ್ಪಷ್ಟವಾಗಿ ಗುರುತಿಸಿರಿ. ನಿಮಗೆ ಸಲಾಮ್ ಹೇಳಿದವನೊಂದಿಗೆ ನೀನು ಸತ್ಯವಿಶ್ವಾಸಿಯಲ್ಲ ಎಂದು ಹೇಳಬೇಡಿ. ನೀವು ಭೌತಿಕ ಲಾಭದ ಹುಡುಕಾಟದಲ್ಲಿದ್ದರೆ, ಅಲ್ಲಾಹನ ಬಳಿ ಯಥೇಷ್ಟ ಐಶ್ವರ್ಯವಿದೆ. ಈ ಹಿಂದೆ ನೀವೂ ಹೀಗೆಯೇ (ಸತ್ಯನಿಷೇಧದಲ್ಲಿ) ಇದ್ದಿರಿ.[1] ನಂತರ ಅಲ್ಲಾಹು ನಿಮಗೆ (ಸನ್ಮಾರ್ಗ ತೋರಿಸಿ) ಉಪಕಾರ ಮಾಡಿದನು. ಆದ್ದರಿಂದ ನೀವು ಸ್ಪಷ್ಟವಾಗಿ ಗುರುತಿಸಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ. info

[1] ಯುದ್ಧದಲ್ಲಿ ಒಬ್ಬ ಶತ್ರು ಸೈನಿಕನನ್ನು ಕೊಂದರೆ, ಅವನ ಶಸ್ತ್ರ, ಯುದ್ಧಾಂಗಿ ಮುಂತಾದ ವಸ್ತುಗಳು ಕೊಂದವನಿಗೆ ಸಿಗುತ್ತದೆ. ಈ ಭೌತಿಕ ಲಾಭದ ಮೇಲೆ ಕಣ್ಣಿಟ್ಟು ಯಾರನ್ನೂ ಅನ್ಯಾಯವಾಗಿ ಕೊಲ್ಲಬೇಡಿ. ಹಿಂದಿನ ನಿಮಿಷದ ತನಕ ಶತ್ರುವಾಗಿದ್ದವನು, ನಿಮಗೆ ಸಲಾಂ ಹೇಳಿ ಮುಸಲ್ಮಾನನಾಗಲು ಮುಂದಾದರೆ, ಅವನು ತನ್ನ ಜೀವ ಉಳಿಸುವುದಕ್ಕಾಗಿ ಸಲಾಂ ಹೇಳುತ್ತಿದ್ದಾನೆಂದು ಭಾವಿಸಿ ಅವನನ್ನು ಕೊಲ್ಲಬೇಡಿ. ಹಿಂದೆ ನೀವು ಕೂಡ ಅವನಂತೆಯೇ ಸತ್ಯನಿಷೇಧಿಗಳಾಗಿದ್ದಿರಿ.

التفاسير: