Fassarar Ma'anonin Alqura'ni - Fassarar Kanadiy - Hamza Batur

Lambar shafi:close

external-link copy
38 : 3

هُنَالِكَ دَعَا زَكَرِیَّا رَبَّهٗ ۚ— قَالَ رَبِّ هَبْ لِیْ مِنْ لَّدُنْكَ ذُرِّیَّةً طَیِّبَةً ۚ— اِنَّكَ سَمِیْعُ الدُّعَآءِ ۟

ಅಲ್ಲಿ ಝಕರಿಯ್ಯಾ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನಿನ್ನ ಕಡೆಯಿಂದ ನನಗೊಂದು ಪರಿಶುದ್ಧ ಸಂತಾನವನ್ನು ಕರುಣಿಸು. ನಿಶ್ಚಯವಾಗಿಯೂ ನೀನು ಪ್ರಾರ್ಥನೆಗೆ ಕಿವಿಗೊಡುವವನಾಗಿರುವೆ.” info
التفاسير:

external-link copy
39 : 3

فَنَادَتْهُ الْمَلٰٓىِٕكَةُ وَهُوَ قَآىِٕمٌ یُّصَلِّیْ فِی الْمِحْرَابِ ۙ— اَنَّ اللّٰهَ یُبَشِّرُكَ بِیَحْیٰی مُصَدِّقًا بِكَلِمَةٍ مِّنَ اللّٰهِ وَسَیِّدًا وَّحَصُوْرًا وَّنَبِیًّا مِّنَ الصّٰلِحِیْنَ ۟

ಅವರು ಕೋಣೆಯಲ್ಲಿ ನಿಂತು ನಮಾಝ್ ಮಾಡುತ್ತಿದ್ದಾಗ, ದೇವದೂತರುಗಳು ಅವರನ್ನು ಕರೆದು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಯಹ್ಯಾ (ಎಂಬ ಮಗುವಿ)ನ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರು (ಯಹ್ಯಾ) ಅಲ್ಲಾಹನ ಕಡೆಯ ವಚನವನ್ನು ದೃಢೀಕರಿಸುವವರು, ಸರದಾರರು, ಆತ್ಮಸಂಯಮವುಳ್ಳವರು ಮತ್ತು ನೀತಿವಂತರಲ್ಲಿ ಸೇರಿದ ಪ್ರವಾದಿಯಾಗಿರುವರು.” info
التفاسير:

external-link copy
40 : 3

قَالَ رَبِّ اَنّٰی یَكُوْنُ لِیْ غُلٰمٌ وَّقَدْ بَلَغَنِیَ الْكِبَرُ وَامْرَاَتِیْ عَاقِرٌ ؕ— قَالَ كَذٰلِكَ اللّٰهُ یَفْعَلُ مَا یَشَآءُ ۟

ಝಕರಿಯ್ಯಾ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗು ಹುಟ್ಟುವುದು ಹೇಗೆ? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಬಂಜೆಯಾಗಿದ್ದಾಳೆ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಮಾಡುತ್ತಾನೆ.” info
التفاسير:

external-link copy
41 : 3

قَالَ رَبِّ اجْعَلْ لِّیْۤ اٰیَةً ؕ— قَالَ اٰیَتُكَ اَلَّا تُكَلِّمَ النَّاسَ ثَلٰثَةَ اَیَّامٍ اِلَّا رَمْزًا ؕ— وَاذْكُرْ رَّبَّكَ كَثِیْرًا وَّسَبِّحْ بِالْعَشِیِّ وَالْاِبْكَارِ ۟۠

ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಂದು ದೃಷ್ಟಾಂತವನ್ನು ಮಾಡಿ ತೋರಿಸು.” ಅಲ್ಲಾಹು ಹೇಳಿದನು: “ನಿಮಗಿರುವ ದೃಷ್ಟಾಂತವೇನೆಂದರೆ, ನೀವು ಮೂರು ದಿನಗಳ ಕಾಲ ಜನರೊಡನೆ ಸನ್ನೆಯ ಮೂಲಕವಲ್ಲದೆ ಮಾತನಾಡುವುದಿಲ್ಲ. ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅತ್ಯಧಿಕವಾಗಿ ಸ್ಮರಿಸಿರಿ ಮತ್ತು ಸಂಜೆ ಹಾಗೂ ಮುಂಜಾನೆಗಳಲ್ಲಿ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.” info
التفاسير:

external-link copy
42 : 3

وَاِذْ قَالَتِ الْمَلٰٓىِٕكَةُ یٰمَرْیَمُ اِنَّ اللّٰهَ اصْطَفٰىكِ وَطَهَّرَكِ وَاصْطَفٰىكِ عَلٰی نِسَآءِ الْعٰلَمِیْنَ ۟

ದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ. ನಿಮಗೆ ಪರಿಶುದ್ಧಿಯನ್ನು ದಯಪಾಲಿಸಿದ್ದಾನೆ ಮತ್ತು ಸರ್ವಲೋಕಗಳ ಮಹಿಳೆಯರಲ್ಲಿ ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ. info
التفاسير:

external-link copy
43 : 3

یٰمَرْیَمُ اقْنُتِیْ لِرَبِّكِ وَاسْجُدِیْ وَارْكَعِیْ مَعَ الرّٰكِعِیْنَ ۟

ಓ ಮರ್ಯಮ್! ನೀವು ನಿಮ್ಮ ಪರಿಪಾಲಕನಿಗೆ ವಿಧೇಯರಾಗಿರಿ; ಸಾಷ್ಟಾಂಗ ಮಾಡಿರಿ ಮತ್ತು ತಲೆಬಾಗುವವರೊಂದಿಗೆ ತಲೆಬಾಗಿರಿ.” info
التفاسير:

external-link copy
44 : 3

ذٰلِكَ مِنْ اَنْۢبَآءِ الْغَیْبِ نُوْحِیْهِ اِلَیْكَ ؕ— وَمَا كُنْتَ لَدَیْهِمْ اِذْ یُلْقُوْنَ اَقْلَامَهُمْ اَیُّهُمْ یَكْفُلُ مَرْیَمَ ۪— وَمَا كُنْتَ لَدَیْهِمْ اِذْ یَخْتَصِمُوْنَ ۟

ಇವೆಲ್ಲವೂ ಅದೃಶ್ಯ ಸಮಾಚಾರಗಳಾಗಿದ್ದು ನಾವು ನಿಮಗೆ ಇದನ್ನು ದೇವವಾಣಿಯ ಮೂಲಕ ತಿಳಿಸುತ್ತಿದ್ದೇವೆ. ಮರ್ಯಮರ ಪಾಲನೆ-ಪೋಷಣೆಯನ್ನು ಯಾರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು ಎಸೆದ ಸಂದರ್ಭದಲ್ಲಿ ನೀವು ಅವರ ಬಳಿಯಿರಲಿಲ್ಲ. ಅವರು ತರ್ಕಿಸುತ್ತಿರುವಾಗಲೂ ನೀವು ಅವರ ಬಳಿಯಿರಲಿಲ್ಲ. info
التفاسير:

external-link copy
45 : 3

اِذْ قَالَتِ الْمَلٰٓىِٕكَةُ یٰمَرْیَمُ اِنَّ اللّٰهَ یُبَشِّرُكِ بِكَلِمَةٍ مِّنْهُ ۙۗ— اسْمُهُ الْمَسِیْحُ عِیْسَی ابْنُ مَرْیَمَ وَجِیْهًا فِی الدُّنْیَا وَالْاٰخِرَةِ وَمِنَ الْمُقَرَّبِیْنَ ۟ۙ

ದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ತನ್ನ ಒಂದು ವಚನದ ಬಗ್ಗೆ ನಿಮಗೆ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರ ಹೆಸರು ಮರ್ಯಮರ ಮಗ ಮಸೀಹ್ ಈಸಾ. ಅವರು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಪ್ರತಿಷ್ಠಿತರಾಗಿರುವರು ಮತ್ತು ಅಲ್ಲಾಹನ ಸಾಮೀಪ್ಯ ಗಳಿಸಿದವರಲ್ಲಿ ಸೇರಿದವರಾಗಿರುವರು. info
التفاسير: