Fassarar Ma'anonin Alqura'ni - Fassarar Kanadiy - Hamza Batur

Lambar shafi:close

external-link copy
231 : 2

وَاِذَا طَلَّقْتُمُ النِّسَآءَ فَبَلَغْنَ اَجَلَهُنَّ فَاَمْسِكُوْهُنَّ بِمَعْرُوْفٍ اَوْ سَرِّحُوْهُنَّ بِمَعْرُوْفٍ ۪— وَلَا تُمْسِكُوْهُنَّ ضِرَارًا لِّتَعْتَدُوْا ۚ— وَمَنْ یَّفْعَلْ ذٰلِكَ فَقَدْ ظَلَمَ نَفْسَهٗ ؕ— وَلَا تَتَّخِذُوْۤا اٰیٰتِ اللّٰهِ هُزُوًا ؗ— وَّاذْكُرُوْا نِعْمَتَ اللّٰهِ عَلَیْكُمْ وَمَاۤ اَنْزَلَ عَلَیْكُمْ مِّنَ الْكِتٰبِ وَالْحِكْمَةِ یَعِظُكُمْ بِهٖ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِكُلِّ شَیْءٍ عَلِیْمٌ ۟۠

ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿ, ನಂತರ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದರೆ, ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ಬಳಿಯಿಟ್ಟುಕೊಳ್ಳಿ ಅಥವಾ ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ಬಿಟ್ಟು ಬಿಡಿ. ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಅತಿರೇಕವೆಸಗಲು ಅವರನ್ನು ಬಳಿಯಿಟ್ಟುಕೊಳ್ಳಬೇಡಿ. ಯಾರು ಹೀಗೆ ಮಾಡುತ್ತಾನೋ ಅವನು ಅವನ ಮೇಲೆಯೇ ಅಕ್ರಮವೆಸಗಿದ್ದಾನೆ. ಅಲ್ಲಾಹನ ನಿಯಮಗಳನ್ನು ತಮಾಷೆಯಾಗಿ ಸ್ವೀಕರಿಸಬೇಡಿ. ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹಗಳನ್ನು ಮತ್ತು ನಿಮಗೆ ಉಪದೇಶ ನೀಡುತ್ತಾ ಅವನು ಅವತೀರ್ಣಗೊಳಿಸಿದ ಗ್ರಂಥ ಮತ್ತು ವಿವೇಕವನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ. info
التفاسير:

external-link copy
232 : 2

وَاِذَا طَلَّقْتُمُ النِّسَآءَ فَبَلَغْنَ اَجَلَهُنَّ فَلَا تَعْضُلُوْهُنَّ اَنْ یَّنْكِحْنَ اَزْوَاجَهُنَّ اِذَا تَرَاضَوْا بَیْنَهُمْ بِالْمَعْرُوْفِ ؕ— ذٰلِكَ یُوْعَظُ بِهٖ مَنْ كَانَ مِنْكُمْ یُؤْمِنُ بِاللّٰهِ وَالْیَوْمِ الْاٰخِرِ ؕ— ذٰلِكُمْ اَزْكٰی لَكُمْ وَاَطْهَرُ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟

ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿ, ನಂತರ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದರೆ, ಅವರು ಅವರ ಗಂಡಂದಿರನ್ನು ವಿವಾಹವಾಗುವುದನ್ನು ತಡೆಯಬೇಡಿ—ಸ್ವೀಕಾರಾರ್ಹ ರೀತಿಯಲ್ಲಿ ಅವರು ಪರಸ್ಪರ ಸಂತೃಪ್ತರಾಗಿದ್ದರೆ. ಇದು ನಿಮ್ಮ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ನೀಡುವ ಉಪದೇಶವಾಗಿದೆ. ಅದು ನಿಮಗೆ ಅತಿಶ್ರೇಷ್ಠ ಮತ್ತು ಅತ್ಯಂತ ಪರಿಶುದ್ಧವಾಗಿದೆ. ಅಲ್ಲಾಹು ತಿಳಿದಿದ್ದಾನೆ; ಆದರೆ ನೀವು ತಿಳಿದಿಲ್ಲ. info
التفاسير:

external-link copy
233 : 2

وَالْوَالِدٰتُ یُرْضِعْنَ اَوْلَادَهُنَّ حَوْلَیْنِ كَامِلَیْنِ لِمَنْ اَرَادَ اَنْ یُّتِمَّ الرَّضَاعَةَ ؕ— وَعَلَی الْمَوْلُوْدِ لَهٗ رِزْقُهُنَّ وَكِسْوَتُهُنَّ بِالْمَعْرُوْفِ ؕ— لَا تُكَلَّفُ نَفْسٌ اِلَّا وُسْعَهَا ۚ— لَا تُضَآرَّ وَالِدَةٌ بِوَلَدِهَا وَلَا مَوْلُوْدٌ لَّهٗ بِوَلَدِهٖ ۗ— وَعَلَی الْوَارِثِ مِثْلُ ذٰلِكَ ۚ— فَاِنْ اَرَادَا فِصَالًا عَنْ تَرَاضٍ مِّنْهُمَا وَتَشَاوُرٍ فَلَا جُنَاحَ عَلَیْهِمَا ؕ— وَاِنْ اَرَدْتُّمْ اَنْ تَسْتَرْضِعُوْۤا اَوْلَادَكُمْ فَلَا جُنَاحَ عَلَیْكُمْ اِذَا سَلَّمْتُمْ مَّاۤ اٰتَیْتُمْ بِالْمَعْرُوْفِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِمَا تَعْمَلُوْنَ بَصِیْرٌ ۟

ತಾಯಂದಿರು ತಮ್ಮ ಮಕ್ಕಳಿಗೆ ಎರಡು ವರ್ಷ ಪೂರ್ಣವಾಗಿ ಸ್ತನಪಾನ ಮಾಡಬೇಕು—ಇದು ಸ್ತನಪಾನದ ಅವಧಿಯನ್ನು ಪೂರ್ಣಗೊಳಿಸಲು ಬಯಸುವವರಿಗೆ. ಸ್ವೀಕಾರಾರ್ಹ ರೀತಿಯಲ್ಲಿ ಅವರಿಗೆ ಆಹಾರ ಮತ್ತು ಬಟ್ಟೆಬರೆಗಳನ್ನು ಒದಗಿಸುವುದು ಮಗುವಿನ ತಂದೆಯ ಕರ್ತವ್ಯವಾಗಿದೆ. ಯಾರ ಮೇಲೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾದುದನ್ನು ಹೊರಿಸಲಾಗುವುದಿಲ್ಲ. ಮಗುವಿನ ಕಾರಣದಿಂದ ತಾಯಿಗೆ ತೊಂದರೆಯಾಗಬಾರದು ಮತ್ತು ಮಗುವಿನ ಕಾರಣದಿಂದ ತಂದೆಗೂ ತೊಂದರೆಯಾಗಬಾರದು. ವಾರಿಸುದಾರರಿಗೂ ಇದೇ ರೀತಿಯ ಕರ್ತವ್ಯಗಳಿವೆ. ಅವರಿಬ್ಬರು ಸಂತೃಪ್ತಿಯಿಂದ ಮತ್ತು ಸಮಾಲೋಚನೆಯಿಂದ ಮಗುವಿನ ಸ್ತನಪಾನವನ್ನು ನಿಲ್ಲಿಸಲು ಬಯಸಿದರೆ ಅವರಿಬ್ಬರ ಮೇಲೂ ದೋಷವಿಲ್ಲ. ನಿಮ್ಮ ಮಕ್ಕಳಿಗೆ ಬೇರೊಬ್ಬರಿಂದ ಸ್ತನಪಾನ ಮಾಡಿಸಲು ನೀವು ಬಯಸುವುದಾದರೆ, ಅದರಲ್ಲೂ ನಿಮಗೆ ದೋಷವಿಲ್ಲ—ಸ್ವೀಕಾರಾರ್ಹ ರೀತಿಯಲ್ಲಿ ಅವರಿಗೆ ಅವರ ವೇತನವನ್ನು ಕೊಡುವುದಾದರೆ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನೀವು ಮಾಡುವ ಕರ್ಮಗಳನ್ನು ಅಲ್ಲಾಹು ನೋಡುತ್ತಿದ್ದಾನೆ. info
التفاسير: