[1] ದೇವದೂತರುಗಳು ಮನುಷ್ಯ ರೂಪದಲ್ಲಿ ಇಬ್ರಾಹೀಮರ (ಅವರ ಮೇಲೆ ಶಾಂತಿಯಿರಲಿ) ಬಳಿಗೆ ಬಂದಿದ್ದರು. ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ಅವರನ್ನು ಸತ್ಕರಿಸಿದರು. ಆದರೆ ಅವರು ಆಹಾರ ಸೇವಿಸದಿರುವುದನ್ನು ಕಂಡಾಗ ಇಬ್ರಾಹೀಮರಿಗೆ (ಅವರ ಮೇಲೆ ಶಾಂತಿಯಿರಲಿ) ಅವರು ಮನುಷ್ಯರಲ್ಲವೆಂದು ಸ್ಪಷ್ಟವಾಗಿ ಗಾಬರಿಯಾಯಿತು.
[1] ಇಬ್ರಾಹೀಮರಿಗೆ (ಅವರ ಮೇಲೆ ಶಾಂತಿಯಿರಲಿ) ಇಬ್ಬರು ಮಕ್ಕಳು—ಇಸ್ಮಾಯೀಲ್ ಮತ್ತು ಇಸ್‌ಹಾಕ್. ಯಾಕೂಬ್ ಇಸ್‌ಹಾಕರ ಮಗ. ಇಸ್‌ಹಾಕರ ಹಿಂದೆ ಎಂದರೆ ಅವರ ವಂಶದಲ್ಲಿ ಎಂದರ್ಥ. (ಅವರೆಲ್ಲರ ಮೇಲೆ ಶಾಂತಿಯಿರಲಿ)