Fassarar Ma'anonin Alqura'ni - Fassarar Kanadiy - Bashir Maisuri

ಅಲ್ -ಹದೀದ್

external-link copy
1 : 57

سَبَّحَ لِلّٰهِ مَا فِی السَّمٰوٰتِ وَالْاَرْضِ ۚ— وَهُوَ الْعَزِیْزُ الْحَكِیْمُ ۟

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಪಾವಿತ್ರö್ಯವನ್ನು ಸ್ತುತಿಸುತ್ತಿವೆ. ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು. info
التفاسير:

external-link copy
2 : 57

لَهٗ مُلْكُ السَّمٰوٰتِ وَالْاَرْضِ ۚ— یُحْیٖ وَیُمِیْتُ ۚ— وَهُوَ عَلٰی كُلِّ شَیْءٍ قَدِیْرٌ ۟

ಆಕಾಶಗಳ ಹಾಗು ಭೂಮಿಯ ಅಧಿಪತ್ಯವು ಅವನದೇ ಆಗಿದೆ. ಜೀವನನೀಡುವವನು ಹಾಗು ಮರಣ ಕೊಡುವವನು ಅವನೇ, ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
3 : 57

هُوَ الْاَوَّلُ وَالْاٰخِرُ وَالظَّاهِرُ وَالْبَاطِنُ ۚ— وَهُوَ بِكُلِّ شَیْءٍ عَلِیْمٌ ۟

ಆದಿಯು, ಅಂತ್ಯನು, ಪ್ರತ್ಯಕ್ಷನು, ಪರೋಕ್ಷನು ಅವನೇ, ಮತ್ತು ಅವನು ಸಕಲ ವಸ್ತುಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ. info
التفاسير: