Fassarar Ma'anonin Alqura'ni - Fassarar Kanadiy - Bashir Maisuri

external-link copy
154 : 3

ثُمَّ اَنْزَلَ عَلَیْكُمْ مِّنْ بَعْدِ الْغَمِّ اَمَنَةً نُّعَاسًا یَّغْشٰی طَآىِٕفَةً مِّنْكُمْ ۙ— وَطَآىِٕفَةٌ قَدْ اَهَمَّتْهُمْ اَنْفُسُهُمْ یَظُنُّوْنَ بِاللّٰهِ غَیْرَ الْحَقِّ ظَنَّ الْجَاهِلِیَّةِ ؕ— یَقُوْلُوْنَ هَلْ لَّنَا مِنَ الْاَمْرِ مِنْ شَیْءٍ ؕ— قُلْ اِنَّ الْاَمْرَ كُلَّهٗ لِلّٰهِ ؕ— یُخْفُوْنَ فِیْۤ اَنْفُسِهِمْ مَّا لَا یُبْدُوْنَ لَكَ ؕ— یَقُوْلُوْنَ لَوْ كَانَ لَنَا مِنَ الْاَمْرِ شَیْءٌ مَّا قُتِلْنَا هٰهُنَا ؕ— قُلْ لَّوْ كُنْتُمْ فِیْ بُیُوْتِكُمْ لَبَرَزَ الَّذِیْنَ كُتِبَ عَلَیْهِمُ الْقَتْلُ اِلٰی مَضَاجِعِهِمْ ۚ— وَلِیَبْتَلِیَ اللّٰهُ مَا فِیْ صُدُوْرِكُمْ وَلِیُمَحِّصَ مَا فِیْ قُلُوْبِكُمْ ؕ— وَاللّٰهُ عَلِیْمٌۢ بِذَاتِ الصُّدُوْرِ ۟

ತರುವಾಯ ಅವನು ಆ ದುಃಖದ ಬಳಿಕ ನಿಮ್ಮ ಮೇಲೆ ನಿರ್ಭಯತೆಯನ್ನು ಇಳಿಸಿದನು ಮತ್ತು ನಿಮ್ಮಲ್ಲಿ ಒಂದು ತಂಡಕ್ಕೆ ಸಮಾಧಾನದ ತೂಕಡಿಕೆಯು ಹತ್ತತೊಡಗಿತು. ಇನ್ನು ಕೆಲವರು ತಮ್ಮದೇ ಕುರಿತಾದ ಚಿಂತೆಯಲ್ಲಿ ಮುಳುಗಿದ್ದರು ಮತ್ತು ಅವರು ಅಲ್ಲಾಹನ ಕುರಿತು ಸತ್ಯಕ್ಕೆ ವಿರುದ್ಧವಾದ ಅಜ್ಞಾನಜನ್ಯ ತುಂಬಿದ ಸಂದೇಹಗಳನ್ನು ಮಾಡತೊಡಗಿದರು ಮತ್ತು ಹೇಳುತ್ತಿದ್ದರು: ನಮಗೆ ಯಾವುದಾದರು ವಿಷಯದಲ್ಲಿ ಅಧಿಕಾರವಿದೆಯೇ? ನೀವು ಹೇಳಿರಿ: ಸಕಲ ಕಾರ್ಯವೂ ಅಲ್ಲಾಹನ ಅಧಿಕಾರದಲ್ಲಿದೆ. ಇವರು ತಮ್ಮ ಮನಸ್ಸುಗಳಲ್ಲಿರುವ ರಹಸ್ಯವನ್ನು ನಿಮಗೆ ತಿಳಿಸುವುದಿಲ್ಲ ಮತ್ತು ಹೇಳುತ್ತಾರೆ: ನಮಗೇನಾದರೂ ಅಧಿಕಾರವಿರುತ್ತಿದ್ದರೆ ನಾವು ಇಲ್ಲಿ ಕೊಲ್ಲಲ್ಪಡುತ್ತಿರಲಿಲ್ಲ. ನೀವು ಹೇಳಿರಿ: ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಯಾರ ವಿಧಿಯಲ್ಲಿ ಕೊಲೆ ಯಾಗುವುದಿರುತ್ತದೆಯೋ ಅವರು ತಮ್ಮ ಮರಣಾ ಸ್ಥಳಕ್ಕೆ ಬರುತ್ತಿದ್ದರು. ಅಲ್ಲಾಹನಿಗೆ ನಿಮ್ಮ ಹೃದಯಗಳಲ್ಲಿ ಅಡಿಗಿರುವುದನ್ನು ಪರೀಕ್ಷಿಸಲಿಕ್ಕಿತ್ತು ಮತ್ತು ಹೃದಯಗಳಲ್ಲಿರುವ ವಿಚಾರಗಳನ್ನು ಶುದ್ಧೀಕರಿಸಲಿಕ್ಕಿತ್ತು ಮತ್ತು ಅಲ್ಲಾಹನು ಹೃದಯಗಳಲ್ಲಿರುವುದನ್ನು ತಿಳಿಯುವವನಗಿದ್ದಾನೆ. info
التفاسير: