Fassarar Ma'anonin Alqura'ni - Fassarar Kanadiy - Bashir Maisuri

Lambar shafi:close

external-link copy
62 : 3

اِنَّ هٰذَا لَهُوَ الْقَصَصُ الْحَقُّ ۚ— وَمَا مِنْ اِلٰهٍ اِلَّا اللّٰهُ ؕ— وَاِنَّ اللّٰهَ لَهُوَ الْعَزِیْزُ الْحَكِیْمُ ۟

ಖಂಡಿತವಾಗಿಯು ಇದು ನೈಜ ಘಟನೆಗಳ ವಿವರಣೆಯಾಗಿದೆ ಮತ್ತು ಅಲ್ಲಾಹನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಮತ್ತು ನಿಸ್ಸಂದೇಹವಾಗಿಯು ಪ್ರತಾಪಶಾಲಿಯು, ಯುಕ್ತಿಪೂರ್ಣನು ಅಲ್ಲಾಹನಾಗಿದ್ದಾನೆ. info
التفاسير:

external-link copy
63 : 3

فَاِنْ تَوَلَّوْا فَاِنَّ اللّٰهَ عَلِیْمٌۢ بِالْمُفْسِدِیْنَ ۟۠

ಇನ್ನು ಅವರು ವಿಮುಖರಾದರೆ ಖಂಡಿತವಾಗಿಯು ಅಲ್ಲಾಹನು ಕಿಡಿಗೇಡಿಗಳ ಕುರಿತು ಚೆನ್ನಾಗಿ ಬಲ್ಲನು. info
التفاسير:

external-link copy
64 : 3

قُلْ یٰۤاَهْلَ الْكِتٰبِ تَعَالَوْا اِلٰی كَلِمَةٍ سَوَآءٍ بَیْنَنَا وَبَیْنَكُمْ اَلَّا نَعْبُدَ اِلَّا اللّٰهَ وَلَا نُشْرِكَ بِهٖ شَیْـًٔا وَّلَا یَتَّخِذَ بَعْضُنَا بَعْضًا اَرْبَابًا مِّنْ دُوْنِ اللّٰهِ ؕ— فَاِنْ تَوَلَّوْا فَقُوْلُوا اشْهَدُوْا بِاَنَّا مُسْلِمُوْنَ ۟

ಓ ಪೈಗಂಬರರೇ ಹೇಳಿರಿ: 'ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ಅಲ್ಲಾಹನನ್ನು ಹೊರತುಪಡಿಸಿ ನಾವು ಪರಸ್ಪರರಲ್ಲಿ ಇತರ ಯಾರನ್ನೂ ನಮ್ಮ ಪ್ರಭುವಾಗಿರಿಸದಿರೋಣ. ಇನ್ನು ಅವರು ವಿಮುಖರಾದರೆ ಅವರೊಡನೆ ಹೇಳಿರಿ: 'ನಾವು (ಅಲ್ಲಾಹನಿಗೆ) ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ' info
التفاسير:

external-link copy
65 : 3

یٰۤاَهْلَ الْكِتٰبِ لِمَ تُحَآجُّوْنَ فِیْۤ اِبْرٰهِیْمَ وَمَاۤ اُنْزِلَتِ التَّوْرٰىةُ وَالْاِنْجِیْلُ اِلَّا مِنْ بَعْدِهٖ ؕ— اَفَلَا تَعْقِلُوْنَ ۟

ಓ ಗ್ರಂಥದವರೇ, ನೀವು ಇಬ್ರಾಹೀಮರ ವಿಷಯದಲ್ಲಿ ಏಕೆ ತರ್ಕಿಸುತ್ತೀರಿ? ವಸ್ತುತಃ ತೌರಾತ್ ಮತ್ತು ಇಂಜೀಲ್‌ಗಳAತು ಅವರ ನಂತರ ಅವತೀರ್ಣಗೊಂಡಿವೆ. ಹಾಗಿದ್ದು ನೀವು ತಿಳಿದುಕೊಳ್ಳುವುದಿಲ್ಲವೇ? info
التفاسير:

external-link copy
66 : 3

هٰۤاَنْتُمْ هٰۤؤُلَآءِ حَاجَجْتُمْ فِیْمَا لَكُمْ بِهٖ عِلْمٌ فَلِمَ تُحَآجُّوْنَ فِیْمَا لَیْسَ لَكُمْ بِهٖ عِلْمٌ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟

ನಿಮಗೆ ಜ್ಞಾನವಿರುವ ವಿಷಯದಲ್ಲಿ ನೀವು ತರ್ಕಿಸದಿರಿ. ಇನ್ನು ನಿಮಗೆ ಯಾವುದೇ ಜ್ಞಾನವಿಲ್ಲದ ವಿಷಯದಲ್ಲಿ ನೀವೇಕೆ ತರ್ಕಿಸುತ್ತಿರುವಿರಿ? ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಅರಿಯುವುದಿಲ್ಲ. info
التفاسير:

external-link copy
67 : 3

مَا كَانَ اِبْرٰهِیْمُ یَهُوْدِیًّا وَّلَا نَصْرَانِیًّا وَّلٰكِنْ كَانَ حَنِیْفًا مُّسْلِمًا ؕ— وَمَا كَانَ مِنَ الْمُشْرِكِیْنَ ۟

ಇಬ್ರಾಹೀಮರು ಯಹೂದಿಯರೋ, ಕ್ರೆöÊಸ್ತರೋ ಆಗಿರಲಿಲ್ಲ. ಆದರೆ ಅವರು ಮಿಥ್ಯವನ್ನು ತ್ಯಜಿಸಿ ಸತ್ಯವನ್ನು ಅನುಸರಿಸುವ ಶರಣರಾಗಿದ್ದರು ಮತ್ತು ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ. info
التفاسير:

external-link copy
68 : 3

اِنَّ اَوْلَی النَّاسِ بِاِبْرٰهِیْمَ لَلَّذِیْنَ اتَّبَعُوْهُ وَهٰذَا النَّبِیُّ وَالَّذِیْنَ اٰمَنُوْا ؕ— وَاللّٰهُ وَلِیُّ الْمُؤْمِنِیْنَ ۟

ಖಂಡಿತವಾಗಿಯು ಜನರ ಪೈಕಿ ಇಬ್ರಾಹೀಮನೊಂದಿಗೆ ಹೆಚ್ಚು ಸಮೀಪಸ್ಥರು ಅವರನ್ನು ಅನುಸರಿಸಿದವರು ಮತ್ತು ಈ ಪೈಗಂಬರ್ (ಮುಹಮ್ಮದ್(ಸ)) ಮತ್ತು ಸತ್ಯವಿಶ್ವಾಸಿಗಳಾಗಿದ್ದಾರೆ (ಮುಸ್ಲಿಮರು) ಅಲ್ಲಾಹನು ಸತ್ಯವಿಶ್ವಾಸಿಗಳ ಮಿತ್ರನಾಗಿದ್ದಾನೆ. info
التفاسير:

external-link copy
69 : 3

وَدَّتْ طَّآىِٕفَةٌ مِّنْ اَهْلِ الْكِتٰبِ لَوْ یُضِلُّوْنَكُمْ ؕ— وَمَا یُضِلُّوْنَ اِلَّاۤ اَنْفُسَهُمْ وَمَا یَشْعُرُوْنَ ۟

ಗ್ರಂಥದವರ ಪೈಕಿ ಒಂದು ಪಂಗಡದವರು ನಿಮ್ಮನ್ನು ಪಥಭ್ರಷ್ಟಗೊಳಿಸಲು ಬಯಸುತ್ತಾರೆ. ವಾಸ್ತವದಲ್ಲಿ ಅವರು ಸ್ವತಃ ತಮ್ಮನ್ನೇ ಪಥಭ್ರಷ್ಟಗೊಳಿಸುತ್ತಿದ್ದಾರೆ. ಮತ್ತು ಅವರು ಅದನ್ನು ಗ್ರಹಿಸುವುದಿಲ್ಲ. info
التفاسير:

external-link copy
70 : 3

یٰۤاَهْلَ الْكِتٰبِ لِمَ تَكْفُرُوْنَ بِاٰیٰتِ اللّٰهِ وَاَنْتُمْ تَشْهَدُوْنَ ۟

ಓ ಗ್ರಂಥದವರೇ, ನೀವು ಅಲ್ಲಾಹನ ದೃಷ್ಟಾಂತಗಳನ್ನು ಏಕೆ ನಿರಾಕರಿಸುತ್ತಿರುವಿರಿ? ಸ್ವತಃ ನೀವು ಅವುಗಳ ಸತ್ಯತೆಯ ಸಾಕ್ಷಿವಹಿಸುತ್ತಿದ್ದೀರಿ. info
التفاسير: