Fassarar Ma'anonin Alqura'ni - Fassarar Kanadiy - Bashir Maisuri

external-link copy
231 : 2

وَاِذَا طَلَّقْتُمُ النِّسَآءَ فَبَلَغْنَ اَجَلَهُنَّ فَاَمْسِكُوْهُنَّ بِمَعْرُوْفٍ اَوْ سَرِّحُوْهُنَّ بِمَعْرُوْفٍ ۪— وَلَا تُمْسِكُوْهُنَّ ضِرَارًا لِّتَعْتَدُوْا ۚ— وَمَنْ یَّفْعَلْ ذٰلِكَ فَقَدْ ظَلَمَ نَفْسَهٗ ؕ— وَلَا تَتَّخِذُوْۤا اٰیٰتِ اللّٰهِ هُزُوًا ؗ— وَّاذْكُرُوْا نِعْمَتَ اللّٰهِ عَلَیْكُمْ وَمَاۤ اَنْزَلَ عَلَیْكُمْ مِّنَ الْكِتٰبِ وَالْحِكْمَةِ یَعِظُكُمْ بِهٖ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِكُلِّ شَیْءٍ عَلِیْمٌ ۟۠

ಮತ್ತು ನೀವು ಪತ್ನಿಯರಿಗೆ ವಿಚ್ಛೇದನೆ ನೀಡಿ ಅವರು ತಮ್ಮ ಅವಧಿಯನ್ನು ತಲುಪಿದರೆ ಒಂದೋ ಅವರನ್ನು ಸದಾಚಾರದೊಂದಿಗೆ (ದಾಂಪತ್ಯದಲ್ಲಿ) ತಡೆÀದಿರಿಸಿಕೊಳ್ಳಿರಿ, ಇಲ್ಲವೇ, ಅವರಿಗೆ ಸದಾಚಾರದೊಂದಿಗೆ ವಿದಾಯ ಹೇಳಿರಿ ಮತ್ತು ಅವರನ್ನು ಪೀಡಿಸುವ ಉದ್ದೇಶದಿಂದ ತಡೆದಿರಿಸಿಕೊಳ್ಳಬೇಡಿರಿ ಮತ್ತು ಯಾರು ಹೀಗೆ ಮಾಡುತ್ತಾನೋ ಅವನು ತನ್ನ ಮೇಲೆಯೇ ಅಕ್ರಮವೆಸಗುತ್ತಾನೆ. ಮತ್ತು ನೀವು ಅಲ್ಲಾಹನ ನಿಯಮಗಳನ್ನು ಅಪಹಾಸ್ಯದ ವಸ್ತುವನ್ನಾಗಿ ಮಾಡಿಕೊಳ್ಳಬೇಡಿರಿ ಮತ್ತು ನಿಮ್ಮ ಮೇಲಿರುವ ಅಲ್ಲಾಹನ ಉಪಕಾರವನ್ನು ಸ್ಮರಿಸಿರಿ ಮತ್ತು ಅವನು ನಿಮ್ಮ ಮೇಲೆ ಅವತೀರ್ಣಗೊಳಿಸಿದ ಗ್ರಂಥ ಹಾಗೂ ಸುಜ್ಞಾನವನ್ನು ಸ್ಮರಿಸಿರಿ. ಅದರ ಮೂಲಕ ಅವನು ನಿಮಗೆ ಉಪದೇಶ ನೀಡುತ್ತಿದ್ದಾನೆ. ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ಹಾಗೂ ನಿಜವಾಗಿಯು ಅಲ್ಲಾಹನು ಸಕಲ ಸಂಗತಿಗಳ ಕುರಿತು ಸರ್ವಜ್ಞಾನಿಯಾಗಿರುವನು ಎಂಬುದನ್ನು ನೀವು ಅರಿತುಕೊಳ್ಳಿರಿ. info
التفاسير: