[1] ಜಿನ್ನ್‌ಗಳಿಗೆ ಅದೃಶ್ಯಜ್ಞಾನವಿದೆ, ಅವರು ಅದೃಶ್ಯವನ್ನು ತಿಳಿಯುತ್ತಾರೆಂದು ಸುಲೈಮಾನರ (ಅವರ ಮೇಲೆ ಶಾಂತಿಯಿರಲಿ) ಕಾಲದ ಕೆಲವು ಜನರು ನಂಬಿದ್ದರು. ಸುಲೈಮಾನರ (ಅವರ ಮೇಲೆ ಶಾಂತಿಯಿರಲಿ) ಮರಣದ ಮೂಲಕ ಈ ನಂಬಿಕೆ ಹುಸಿಯೆಂದು ಸಾಬೀತಾಯಿತು. ಸುಲೈಮಾನರು (ಅವರ ಮೇಲೆ ಶಾಂತಿಯಿರಲಿ) ತಮ್ಮ ಊರುಗೋಲಿನ ಆಸರೆಯಿಂದ ನಿಂತು ಜಿನ್ನ್‌ಗಳು ಕೆಲಸ ಮಾಡುವುದನ್ನು ವೀಕ್ಷಿಸುತ್ತಿದ್ದಾಗಲೇ ಮರಣಹೊಂದಿದರು. ಅವರು ನಿಧನರಾದ ವಿಷಯ ಜಿನ್ನ್‌ಗಳಿಗೆ ತಿಳಿಯಲಿಲ್ಲ. ಅವರು ತಮ್ಮನ್ನು ವೀಕ್ಷಿಸುತ್ತಲೇ ಇದ್ದಾರೆಂದು ಜಿನ್ನ್‌ಗಳು ಭಾವಿಸಿದ್ದರು. ಆದರೆ ಸುಲೈಮಾನರ (ಅವರ ಮೇಲೆ ಶಾಂತಿಯಿರಲಿ) ಊರುಗೋಲನ್ನು ಗೆದ್ದಲುಗಳು ತಿಂದು ಸುಲೈಮಾನರು ನೆಲಕ್ಕೆ ಬಿದ್ದಾಗ ಅವರು ನಿಧನರಾಗಿದ್ದಾರೆಂದು ಜಿನ್ನ್‌ಗಳಿಗೆ ತಿಳಿಯಿತು.