કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

પેજ નંબર:close

external-link copy
23 : 34

وَلَا تَنْفَعُ الشَّفَاعَةُ عِنْدَهٗۤ اِلَّا لِمَنْ اَذِنَ لَهٗ ؕ— حَتّٰۤی اِذَا فُزِّعَ عَنْ قُلُوْبِهِمْ قَالُوْا مَاذَا ۙ— قَالَ رَبُّكُمْ ؕ— قَالُوا الْحَقَّ ۚ— وَهُوَ الْعَلِیُّ الْكَبِیْرُ ۟

ಅಲ್ಲಾಹು ಯಾರಿಗೆ (ಶಿಫಾರಸು ಮಾಡಲು) ಅನುಮತಿ ನೀಡಿದ್ದಾನೋ ಅವರಿಗಲ್ಲದೆ ಬೇರೆ ಯಾರಿಗೂ ಅವನ ಬಳಿ ಶಿಫಾರಸು ಪ್ರಯೋಜನ ಪಡುವುದಿಲ್ಲ. ಎಲ್ಲಿಯವರೆಗೆಂದರೆ, ಅವರ (ದೇವದೂತರುಗಳ) ಹೃದಯಗಳಿಂದ ಭೀತಿಯು ದೂರವಾದಾಗ ಅವರು ಕೇಳುವರು: “ನಿಮ್ಮ ಪರಿಪಾಲಕ (ಅಲ್ಲಾಹು) ಏನು ಹೇಳಿದನು?” ಅವರು ಉತ್ತರಿಸುವರು: “ಸತ್ಯವನ್ನು. ಅವನು ಪರಮೋನ್ನತನು ಮತ್ತು ಮಹಾ ಮಹಿಮನಾಗಿದ್ದಾನೆ.” info
التفاسير:

external-link copy
24 : 34

قُلْ مَنْ یَّرْزُقُكُمْ مِّنَ السَّمٰوٰتِ وَالْاَرْضِ ؕ— قُلِ اللّٰهُ ۙ— وَاِنَّاۤ اَوْ اِیَّاكُمْ لَعَلٰی هُدًی اَوْ فِیْ ضَلٰلٍ مُّبِیْنٍ ۟

ಕೇಳಿರಿ: “ಭೂಮ್ಯಾಕಾಶಗಳಿಂದ ನಿಮಗೆ ಉಪಜೀವನವನ್ನು ಒದಗಿಸುವುದು ಯಾರು?” ಹೇಳಿರಿ: “ಅಲ್ಲಾಹು. ನಿಶ್ಚಯವಾಗಿಯೂ ಒಂದೋ ನಾವು ಅಥವಾ ನೀವು ಸನ್ಮಾರ್ಗದಲ್ಲಿ ಅಥವಾ ಸ್ಪಷ್ಟ ದುರ್ಮಾರ್ಗದಲ್ಲಿದ್ದೇವೆ.” info
التفاسير:

external-link copy
25 : 34

قُلْ لَّا تُسْـَٔلُوْنَ عَمَّاۤ اَجْرَمْنَا وَلَا نُسْـَٔلُ عَمَّا تَعْمَلُوْنَ ۟

ಹೇಳಿರಿ: “ನಾವು ಮಾಡಿದ ಅಪರಾಧಗಳ ಬಗ್ಗೆ ನಿಮ್ಮೊಡನೆ ಪ್ರಶ್ನಿಸಲಾಗುವುದಿಲ್ಲ. ನೀವು ಮಾಡುತ್ತಿರುವ ಅಪರಾಧಗಳ ಬಗ್ಗೆ ನಮ್ಮೊಡನೆಯೂ ಪ್ರಶ್ನಿಸಲಾಗುವುದಿಲ್ಲ.” info
التفاسير:

external-link copy
26 : 34

قُلْ یَجْمَعُ بَیْنَنَا رَبُّنَا ثُمَّ یَفْتَحُ بَیْنَنَا بِالْحَقِّ ؕ— وَهُوَ الْفَتَّاحُ الْعَلِیْمُ ۟

ಹೇಳಿರಿ: “ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮನ್ನು ಪರಸ್ಪರ ಒಟ್ಟುಗೂಡಿಸುವನು. ನಂತರ ನಮ್ಮ ನಡುವೆ ಸರಿಯಾದ ತೀರ್ಪು ನೀಡುವನು. ಅವನು ತೀರ್ಪುಗಾರನು ಮತ್ತು ಸರ್ವಜ್ಞನಾಗಿದ್ದಾನೆ.” info
التفاسير:

external-link copy
27 : 34

قُلْ اَرُوْنِیَ الَّذِیْنَ اَلْحَقْتُمْ بِهٖ شُرَكَآءَ كَلَّا ؕ— بَلْ هُوَ اللّٰهُ الْعَزِیْزُ الْحَكِیْمُ ۟

ಹೇಳಿರಿ: “ನೀವು ಅಲ್ಲಾಹನ ಸಹಭಾಗಿಗಳೆಂದು ವಾದಿಸುತ್ತಾ ಅವನ ಜೊತೆಗೆ ಸೇರಿಸಿದ (ನಿಮ್ಮ ದೇವರುಗಳನ್ನು) ತೋರಿಸಿಕೊಡಿ. ಇಲ್ಲ (ಅವನಿಗೆ ಸಹಭಾಗಿಗಳೇ ಇಲ್ಲ)! ವಾಸ್ತವವಾಗಿ, ಅವನು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಾಗಿದ್ದಾನೆ.” info
التفاسير:

external-link copy
28 : 34

وَمَاۤ اَرْسَلْنٰكَ اِلَّا كَآفَّةً لِّلنَّاسِ بَشِیْرًا وَّنَذِیْرًا وَّلٰكِنَّ اَكْثَرَ النَّاسِ لَا یَعْلَمُوْنَ ۟

ನಾವು ನಿಮ್ಮನ್ನು ಸಂಪೂರ್ಣ ಮನುಕುಲಕ್ಕೆ ಸುವಾರ್ತೆ ತಿಳಿಸಲು ಮತ್ತು ಮುನ್ನೆಚ್ಚರಿಕೆ ನೀಡಲು ಕಳುಹಿಸಿದ್ದೇವೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿದಿಲ್ಲ. info
التفاسير:

external-link copy
29 : 34

وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟

ಅವರು ಕೇಳುತ್ತಾರೆ: “ನೀವು ಸತ್ಯವಂತರಾಗಿದ್ದರೆ ಈ ಎಚ್ಚರಿಕೆಯು ಯಾವಾಗ ಬರುತ್ತದೆ ಎಂದು ಹೇಳಿರಿ.” info
التفاسير:

external-link copy
30 : 34

قُلْ لَّكُمْ مِّیْعَادُ یَوْمٍ لَّا تَسْتَاْخِرُوْنَ عَنْهُ سَاعَةً وَّلَا تَسْتَقْدِمُوْنَ ۟۠

ಹೇಳಿರಿ: “ನಿಮಗೆ ನಿಶ್ಚಯಿಸಲಾದ ಒಂದು ದಿನವಿದೆ. ಅದರಿಂದ ಒಂದು ಕ್ಷಣ ಹಿಂದಕ್ಕೆ ಸರಿಯಲು ಅಥವಾ ಮುಂದಕ್ಕೆ ಹೋಗಲು ನಿಮಗೆ ಸಾಧ್ಯವಿಲ್ಲ.” info
التفاسير:

external-link copy
31 : 34

وَقَالَ الَّذِیْنَ كَفَرُوْا لَنْ نُّؤْمِنَ بِهٰذَا الْقُرْاٰنِ وَلَا بِالَّذِیْ بَیْنَ یَدَیْهِ ؕ— وَلَوْ تَرٰۤی اِذِ الظّٰلِمُوْنَ مَوْقُوْفُوْنَ عِنْدَ رَبِّهِمْ ۖۚ— یَرْجِعُ بَعْضُهُمْ اِلٰی بَعْضِ ١لْقَوْلَ ۚ— یَقُوْلُ الَّذِیْنَ اسْتُضْعِفُوْا لِلَّذِیْنَ اسْتَكْبَرُوْا لَوْلَاۤ اَنْتُمْ لَكُنَّا مُؤْمِنِیْنَ ۟

ಸತ್ಯನಿಷೇಧಿಗಳು ಹೇಳಿದರು: “ನಾವು ಈ ಕುರ್‌ಆನ್‍ನಲ್ಲಿ ಅಥವಾ ಇದಕ್ಕಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ಎಂದಿಗೂ ವಿಶ್ವಾಸವಿಡುವುದಿಲ್ಲ.” (ಪ್ರವಾದಿಯವರೇ) ಈ ಅಕ್ರಮಿಗಳನ್ನು (ಪುನರುತ್ಥಾನ ದಿನ) ಅವರ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಿಸಲಾಗುವ ದೃಶ್ಯವನ್ನು ನೀವು ನೋಡುತ್ತಿದ್ದರೆ! ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಹೊರಿಸುವರು. ದುರ್ಬಲರು ಪ್ರಬಲರೊಡನೆ ಹೇಳುವರು: “ನೀವಿಲ್ಲದಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಾಗುತ್ತಿದ್ದೆವು.” info
التفاسير: