કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

external-link copy
14 : 34

فَلَمَّا قَضَیْنَا عَلَیْهِ الْمَوْتَ مَا دَلَّهُمْ عَلٰی مَوْتِهٖۤ اِلَّا دَآبَّةُ الْاَرْضِ تَاْكُلُ مِنْسَاَتَهٗ ۚ— فَلَمَّا خَرَّ تَبَیَّنَتِ الْجِنُّ اَنْ لَّوْ كَانُوْا یَعْلَمُوْنَ الْغَیْبَ مَا لَبِثُوْا فِی الْعَذَابِ الْمُهِیْنِ ۟

ನಾವು ಅವರಿಗೆ ಮರಣವನ್ನು ವಿಧಿಸಿದಾಗ, ಅವರ ಮರಣದ ಬಗ್ಗೆ ಜಿನ್ನ್‌ಗಳಿಗೆ ತಿಳಿಸಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದ ಗೆದ್ದಲುಗಳಾಗಿದ್ದವು. ಸುಲೈಮಾನರ ದೇಹವು ಕೆಳಗೆ ಬಿದ್ದಾಗ, ನಮಗೆ ಅದೃಶ್ಯ ವಿಷಯಗಳು ತಿಳಿದಿರುತ್ತಿದ್ದರೆ ನಾವು ಈ ಅವಮಾನಕರ ಶಿಕ್ಷೆಯಲ್ಲಿ ಕೊಳೆಯಬೇಕಾಗಿ ಬರುತ್ತಿರಲಿಲ್ಲ ಎಂದು ಜಿನ್ನ್‌ಗಳಿಗೆ ಮನವರಿಕೆಯಾಯಿತು.[1] info

[1] ಜಿನ್ನ್‌ಗಳಿಗೆ ಅದೃಶ್ಯಜ್ಞಾನವಿದೆ, ಅವರು ಅದೃಶ್ಯವನ್ನು ತಿಳಿಯುತ್ತಾರೆಂದು ಸುಲೈಮಾನರ (ಅವರ ಮೇಲೆ ಶಾಂತಿಯಿರಲಿ) ಕಾಲದ ಕೆಲವು ಜನರು ನಂಬಿದ್ದರು. ಸುಲೈಮಾನರ (ಅವರ ಮೇಲೆ ಶಾಂತಿಯಿರಲಿ) ಮರಣದ ಮೂಲಕ ಈ ನಂಬಿಕೆ ಹುಸಿಯೆಂದು ಸಾಬೀತಾಯಿತು. ಸುಲೈಮಾನರು (ಅವರ ಮೇಲೆ ಶಾಂತಿಯಿರಲಿ) ತಮ್ಮ ಊರುಗೋಲಿನ ಆಸರೆಯಿಂದ ನಿಂತು ಜಿನ್ನ್‌ಗಳು ಕೆಲಸ ಮಾಡುವುದನ್ನು ವೀಕ್ಷಿಸುತ್ತಿದ್ದಾಗಲೇ ಮರಣಹೊಂದಿದರು. ಅವರು ನಿಧನರಾದ ವಿಷಯ ಜಿನ್ನ್‌ಗಳಿಗೆ ತಿಳಿಯಲಿಲ್ಲ. ಅವರು ತಮ್ಮನ್ನು ವೀಕ್ಷಿಸುತ್ತಲೇ ಇದ್ದಾರೆಂದು ಜಿನ್ನ್‌ಗಳು ಭಾವಿಸಿದ್ದರು. ಆದರೆ ಸುಲೈಮಾನರ (ಅವರ ಮೇಲೆ ಶಾಂತಿಯಿರಲಿ) ಊರುಗೋಲನ್ನು ಗೆದ್ದಲುಗಳು ತಿಂದು ಸುಲೈಮಾನರು ನೆಲಕ್ಕೆ ಬಿದ್ದಾಗ ಅವರು ನಿಧನರಾಗಿದ್ದಾರೆಂದು ಜಿನ್ನ್‌ಗಳಿಗೆ ತಿಳಿಯಿತು.

التفاسير: