Traduction des sens du Noble Coran - La traduction en Kannada - Hamzah Batûr

Numéro de la page:close

external-link copy
123 : 9

یٰۤاَیُّهَا الَّذِیْنَ اٰمَنُوْا قَاتِلُوا الَّذِیْنَ یَلُوْنَكُمْ مِّنَ الْكُفَّارِ وَلْیَجِدُوْا فِیْكُمْ غِلْظَةً ؕ— وَاعْلَمُوْۤا اَنَّ اللّٰهَ مَعَ الْمُتَّقِیْنَ ۟

ಓ ಸತ್ಯವಿಶ್ವಾಸಿಗಳೇ! ನಿಮ್ಮ ಆಸುಪಾಸಿನಲ್ಲಿರುವ ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ಕಠೋರತೆಯನ್ನು ಕಾಣಲಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ. info
التفاسير:

external-link copy
124 : 9

وَاِذَا مَاۤ اُنْزِلَتْ سُوْرَةٌ فَمِنْهُمْ مَّنْ یَّقُوْلُ اَیُّكُمْ زَادَتْهُ هٰذِهٖۤ اِیْمَانًا ۚ— فَاَمَّا الَّذِیْنَ اٰمَنُوْا فَزَادَتْهُمْ اِیْمَانًا وَّهُمْ یَسْتَبْشِرُوْنَ ۟

ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು ಕೇಳುತ್ತಾರೆ: “ಇದು ನಿಮ್ಮಲ್ಲಿ ಯಾರಿಗೆ ವಿಶ್ವಾಸವನ್ನು ಹೆಚ್ಚಿಸಿದೆ?” ಸತ್ಯವಿಶ್ವಾಸಿಗಳು ಯಾರೋ—ಅವರಿಗೆ ಅದು ವಿಶ್ವಾಸವನ್ನು ಹೆಚ್ಚಿಸಿದೆ. ಅವರು ಅದರಲ್ಲಿ ಸಂತೋಷಪಡುತ್ತಾರೆ. info
التفاسير:

external-link copy
125 : 9

وَاَمَّا الَّذِیْنَ فِیْ قُلُوْبِهِمْ مَّرَضٌ فَزَادَتْهُمْ رِجْسًا اِلٰی رِجْسِهِمْ وَمَاتُوْا وَهُمْ كٰفِرُوْنَ ۟

ಆದರೆ ಯಾರ ಹೃದಯಗಳಲ್ಲಿ ರೋಗವಿದೆಯೋ, ಅವರಿಗೆ ಅದು ಹೊಲಸಿನ ಮೇಲೆ ಹೊಲಸನ್ನು ಹೆಚ್ಚಿಸಿದೆ. ಅವರು ಸತ್ಯನಿಷೇಧಿಗಳಾಗಿಯೇ ಸಾಯುತ್ತಾರೆ. info
التفاسير:

external-link copy
126 : 9

اَوَلَا یَرَوْنَ اَنَّهُمْ یُفْتَنُوْنَ فِیْ كُلِّ عَامٍ مَّرَّةً اَوْ مَرَّتَیْنِ ثُمَّ لَا یَتُوْبُوْنَ وَلَا هُمْ یَذَّكَّرُوْنَ ۟

ಪ್ರತಿವರ್ಷವೂ ಅವರು ಒಂದು ಅಥವಾ ಎರಡು ಬಾರಿ ಪರೀಕ್ಷೆಗೆ ಗುರಿಯಾಗುವುದನ್ನು ಅವರು ನೋಡುವುದಿಲ್ಲವೇ? ಆದರೂ ಅವರು ಪಶ್ಚಾತ್ತಾಪಪಡುವುದಿಲ್ಲ. ಅವರು ಉಪದೇಶ ಸ್ವೀಕರಿಸುವುದೂ ಇಲ್ಲ. info
التفاسير:

external-link copy
127 : 9

وَاِذَا مَاۤ اُنْزِلَتْ سُوْرَةٌ نَّظَرَ بَعْضُهُمْ اِلٰی بَعْضٍ ؕ— هَلْ یَرٰىكُمْ مِّنْ اَحَدٍ ثُمَّ انْصَرَفُوْا ؕ— صَرَفَ اللّٰهُ قُلُوْبَهُمْ بِاَنَّهُمْ قَوْمٌ لَّا یَفْقَهُوْنَ ۟

ಯಾವುದೇ ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು “ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ತಾನೇ?” ಎಂಬರ್ಥದಲ್ಲಿ ಇತರರನ್ನು ನೋಡುತ್ತಾರೆ. ನಂತರ ಅವರು ಅಲ್ಲಿಂದ ತೆರಳುತ್ತಾರೆ. ಅಲ್ಲಾಹು ಅವರ ಹೃದಯಗಳನ್ನು ತಿರುಗಿಸಿದ್ದಾನೆ. ಅವರು ಅರ್ಥಮಾಡಿಕೊಳ್ಳದ ಜನರಾಗಿರುವುದೇ ಅದಕ್ಕೆ ಕಾರಣ. info
التفاسير:

external-link copy
128 : 9

لَقَدْ جَآءَكُمْ رَسُوْلٌ مِّنْ اَنْفُسِكُمْ عَزِیْزٌ عَلَیْهِ مَا عَنِتُّمْ حَرِیْصٌ عَلَیْكُمْ بِالْمُؤْمِنِیْنَ رَءُوْفٌ رَّحِیْمٌ ۟

ನಿಮ್ಮ ಬಳಿಗೆ ನಿಮ್ಮಿಂದಲೇ ಇರುವ ಒಬ್ಬ ಸಂದೇಶವಾಹಕರು ಬಂದಿದ್ದಾರೆ. ನೀವು ಕಷ್ಟ ಅನುಭವಿಸುವುದು ಅವರಿಗೆ ಸಂಕಟದಾಯಕವಾಗಿದೆ. ಅವರಿಗೆ ನಿಮ್ಮ ಬಗ್ಗೆ ಕಳಕಳಿಯಿದೆ. ಅವರು ಸತ್ಯವಿಶ್ವಾಸಿಗಳೊಡನೆ ಕೃಪೆ ಮತ್ತು ದಯೆಯುಳ್ಳವರಾಗಿದ್ದಾರೆ. info
التفاسير:

external-link copy
129 : 9

فَاِنْ تَوَلَّوْا فَقُلْ حَسْبِیَ اللّٰهُ ۖؗ— لَاۤ اِلٰهَ اِلَّا هُوَ ؕ— عَلَیْهِ تَوَكَّلْتُ وَهُوَ رَبُّ الْعَرْشِ الْعَظِیْمِ ۟۠

ಅವರೇನಾದರೂ ತಿರುಗಿ ನಡೆದರೆ, ಹೇಳಿರಿ: “ನನಗೆ ಅಲ್ಲಾಹು ಸಾಕು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಾನು ಅವನಲ್ಲಿ ಭರವಸೆಯಿಟ್ಟಿದ್ದೇನೆ. ಅವನು ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.” info
التفاسير: