Traduction des sens du Noble Coran - La traduction en Kannada - Hamzah Batûr

Numéro de la page:close

external-link copy
87 : 9

رَضُوْا بِاَنْ یَّكُوْنُوْا مَعَ الْخَوَالِفِ وَطُبِعَ عَلٰی قُلُوْبِهِمْ فَهُمْ لَا یَفْقَهُوْنَ ۟

(ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಉಳಿದುಕೊಳ್ಳಲು ಅವರು ಇಷ್ಟಪಟ್ಟರು. ಅವರ ಹೃದಯಗಳಿಗೆ ಮೊಹರು ಹಾಕಲಾಗಿದೆ. ಆದ್ದರಿಂದ ಅವರು ಅರ್ಥಮಾಡಿಕೊಳ್ಳುವುದಿಲ್ಲ. info
التفاسير:

external-link copy
88 : 9

لٰكِنِ الرَّسُوْلُ وَالَّذِیْنَ اٰمَنُوْا مَعَهٗ جٰهَدُوْا بِاَمْوَالِهِمْ وَاَنْفُسِهِمْ ؕ— وَاُولٰٓىِٕكَ لَهُمُ الْخَیْرٰتُ ؗ— وَاُولٰٓىِٕكَ هُمُ الْمُفْلِحُوْنَ ۟

ಆದರೆ ಸಂದೇಶವಾಹಕರು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳು ತಮ್ಮ ತನು-ಧನಗಳಿಂದ ಯುದ್ಧ ಮಾಡಿದರು. ಅವರೇ ಒಳಿತನ್ನು ಹೊಂದಿರುವವರು. ಅವರೇ ಯಶಸ್ವಿಯಾದವರು. info
التفاسير:

external-link copy
89 : 9

اَعَدَّ اللّٰهُ لَهُمْ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— ذٰلِكَ الْفَوْزُ الْعَظِیْمُ ۟۠

ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅದೇ ಅತಿದೊಡ್ಡ ವಿಜಯ. info
التفاسير:

external-link copy
90 : 9

وَجَآءَ الْمُعَذِّرُوْنَ مِنَ الْاَعْرَابِ لِیُؤْذَنَ لَهُمْ وَقَعَدَ الَّذِیْنَ كَذَبُوا اللّٰهَ وَرَسُوْلَهٗ ؕ— سَیُصِیْبُ الَّذِیْنَ كَفَرُوْا مِنْهُمْ عَذَابٌ اَلِیْمٌ ۟

ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿ (ಯುದ್ಧಕ್ಕೆ ತೆರಳದಿರಲು) ವಿನಾಯಿತಿ ಹೊಂದಿರುವವರು ಅವರಿಗೆ ಅನುಮತಿ ಸಿಗುವುದಕ್ಕಾಗಿ ನಿಮ್ಮ ಬಳಿಗೆ ಬಂದರು. ಆದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಸುಳ್ಳು ಹೇಳಿದವರು (ಮನೆಯಲ್ಲೇ) ಕುಳಿತರು. ಅವರಲ್ಲಿರುವ ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯು ಕಾದಿದೆ. info
التفاسير:

external-link copy
91 : 9

لَیْسَ عَلَی الضُّعَفَآءِ وَلَا عَلَی الْمَرْضٰی وَلَا عَلَی الَّذِیْنَ لَا یَجِدُوْنَ مَا یُنْفِقُوْنَ حَرَجٌ اِذَا نَصَحُوْا لِلّٰهِ وَرَسُوْلِهٖ ؕ— مَا عَلَی الْمُحْسِنِیْنَ مِنْ سَبِیْلٍ ؕ— وَاللّٰهُ غَفُوْرٌ رَّحِیْمٌ ۟ۙ

(ಯುದ್ಧದಲ್ಲಿ ಪಾಲ್ಗೊಳ್ಳದ) ದುರ್ಬಲರ ಮೇಲೆ, ರೋಗಿಗಳ ಮೇಲೆ ಮತ್ತು ಖರ್ಚು ಮಾಡಲು ಏನೂ ಇಲ್ಲದವರ ಮೇಲೆ ದೋಷವಿಲ್ಲ—ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಹಿತಚಿಂತಕರಾಗಿದ್ದರೆ. ಇಂತಹ ಸಜ್ಜನರ ಮೇಲೆ ಆರೋಪ ಹೊರಿಸಲು ಯಾವುದೇ ಅವಕಾಶವಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
92 : 9

وَّلَا عَلَی الَّذِیْنَ اِذَا مَاۤ اَتَوْكَ لِتَحْمِلَهُمْ قُلْتَ لَاۤ اَجِدُ مَاۤ اَحْمِلُكُمْ عَلَیْهِ ۪— تَوَلَّوْا وَّاَعْیُنُهُمْ تَفِیْضُ مِنَ الدَّمْعِ حَزَنًا اَلَّا یَجِدُوْا مَا یُنْفِقُوْنَ ۟ؕ

ಅವರು ನಿಮ್ಮ ಬಳಿಗೆ ಬಂದು, ಅವರನ್ನು ಕೂಡ ಯುದ್ಧಕ್ಕೆ ಒಯ್ಯಬೇಕೆಂದು ವಿನಂತಿಸಿದಾಗ, “ನಿಮ್ಮನ್ನು ಒಯ್ಯುವಂತಹ ಯಾವುದೇ ಸವಾರಿ ನನ್ನ ಬಳಿಯಿಲ್ಲ” ಎಂದು ನೀವು ಉತ್ತರಿಸಿದಿರಿ; ಆಗ (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಲು ಚಿಕ್ಕಾಸು ಕೂಡ ಇಲ್ಲದೆ ಬೇಸರದಿಂದ ಕಣ್ಣೀರು ಸುರಿಸುತ್ತಾ ಹಿಂದಿರುಗಿ ಹೋದವರ ಮೇಲೂ ದೋಷವಿಲ್ಲ. info
التفاسير:

external-link copy
93 : 9

اِنَّمَا السَّبِیْلُ عَلَی الَّذِیْنَ یَسْتَاْذِنُوْنَكَ وَهُمْ اَغْنِیَآءُ ۚ— رَضُوْا بِاَنْ یَّكُوْنُوْا مَعَ الْخَوَالِفِ ۙ— وَطَبَعَ اللّٰهُ عَلٰی قُلُوْبِهِمْ فَهُمْ لَا یَعْلَمُوْنَ ۟

ಆರೋಪ ಹೊರಿಸಲು ಅವಕಾಶವಿರುವುದು ಧನಿಕರಾಗಿದ್ದೂ ಸಹ (ಯುದ್ಧದಿಂದ ವಿನಾಯಿತಿ ಪಡೆಯಲು) ನಿಮ್ಮಲ್ಲಿ ಅನುಮತಿ ಕೇಳುವವರ ಮೇಲೆ ಮಾತ್ರ. ಅವರು (ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಕುಳಿತುಕೊಳ್ಳಲು ಇಷ್ಟಪಟ್ಟರು. ಅಲ್ಲಾಹು ಅವರ ಹೃದಯಗಳಿಗೆ ಮೊಹರು ಹಾಕಿದ್ದಾನೆ. ಆದ್ದರಿಂದ ಅವರು ತಿಳಿಯುವುದಿಲ್ಲ. info
التفاسير: