Traduction des sens du Noble Coran - La traduction en Kannada - Hamzah Batûr

Numéro de la page:close

external-link copy
20 : 4

وَاِنْ اَرَدْتُّمُ اسْتِبْدَالَ زَوْجٍ مَّكَانَ زَوْجٍ ۙ— وَّاٰتَیْتُمْ اِحْدٰىهُنَّ قِنْطَارًا فَلَا تَاْخُذُوْا مِنْهُ شَیْـًٔا ؕ— اَتَاْخُذُوْنَهٗ بُهْتَانًا وَّاِثْمًا مُّبِیْنًا ۟

ನೀವು ಒಬ್ಬ ಪತ್ನಿಯ ಬದಲಿಗೆ ಇನ್ನೊಬ್ಬ ಪತ್ನಿಯನ್ನು ತರಲು ಉದ್ದೇಶಿಸಿದರೆ, ಮತ್ತು ಅವರಲ್ಲಿ ಒಬ್ಬಳಿಗೆ ನೀವು ದೊಡ್ಡ ಮೊತ್ತವನ್ನು ಕೊಟ್ಟಿದ್ದರೆ, ಅದರಿಂದ ಏನನ್ನೂ ಹಿಂದಕ್ಕೆ ಪಡೆಯಬೇಡಿ. ಸುಳ್ಳಾರೋಪದಿಂದ ಮತ್ತು ಸ್ಪಷ್ಟ ಪಾಪದಿಂದ ನೀವು ಅದನ್ನು ಹಿಂದಕ್ಕೆ ಪಡೆಯುವಿರಾ? info
التفاسير:

external-link copy
21 : 4

وَكَیْفَ تَاْخُذُوْنَهٗ وَقَدْ اَفْضٰی بَعْضُكُمْ اِلٰی بَعْضٍ وَّاَخَذْنَ مِنْكُمْ مِّیْثَاقًا غَلِیْظًا ۟

ನೀವು ಪರಸ್ಪರ ಒಂದಾಗಿದ್ದು, ಅವರು ನಿಮ್ಮಿಂದ ಬಲಿಷ್ಠ ಕರಾರನ್ನು ಪಡೆದಿರುವಾಗ ನೀವು ಹೇಗೆ ತಾನೇ ಅದನ್ನು ಹಿಂದಕ್ಕೆ ಪಡೆಯುವಿರಿ? info
التفاسير:

external-link copy
22 : 4

وَلَا تَنْكِحُوْا مَا نَكَحَ اٰبَآؤُكُمْ مِّنَ النِّسَآءِ اِلَّا مَا قَدْ سَلَفَ ؕ— اِنَّهٗ كَانَ فَاحِشَةً وَّمَقْتًا ؕ— وَسَآءَ سَبِیْلًا ۟۠

ನಿಮ್ಮ ತಂದೆಯರು ವಿವಾಹವಾದ ಮಹಿಳೆಯರನ್ನು ನೀವು ವಿವಾಹವಾಗಬಾರದು. ಈಗಾಗಲೇ ಸಂಭವಿಸಿದವುಗಳ ಹೊರತು. ನಿಶ್ಚಯವಾಗಿಯೂ ಅದು ಅಶ್ಲೀಲ, ಅಸಹ್ಯ ಮತ್ತು ಕೆಟ್ಟ ಮಾರ್ಗವಾಗಿದೆ. info
التفاسير:

external-link copy
23 : 4

حُرِّمَتْ عَلَیْكُمْ اُمَّهٰتُكُمْ وَبَنٰتُكُمْ وَاَخَوٰتُكُمْ وَعَمّٰتُكُمْ وَخٰلٰتُكُمْ وَبَنٰتُ الْاَخِ وَبَنٰتُ الْاُخْتِ وَاُمَّهٰتُكُمُ الّٰتِیْۤ اَرْضَعْنَكُمْ وَاَخَوٰتُكُمْ مِّنَ الرَّضَاعَةِ وَاُمَّهٰتُ نِسَآىِٕكُمْ وَرَبَآىِٕبُكُمُ الّٰتِیْ فِیْ حُجُوْرِكُمْ مِّنْ نِّسَآىِٕكُمُ الّٰتِیْ دَخَلْتُمْ بِهِنَّ ؗ— فَاِنْ لَّمْ تَكُوْنُوْا دَخَلْتُمْ بِهِنَّ فَلَا جُنَاحَ عَلَیْكُمْ ؗ— وَحَلَآىِٕلُ اَبْنَآىِٕكُمُ الَّذِیْنَ مِنْ اَصْلَابِكُمْ ۙ— وَاَنْ تَجْمَعُوْا بَیْنَ الْاُخْتَیْنِ اِلَّا مَا قَدْ سَلَفَ ؕ— اِنَّ اللّٰهَ كَانَ غَفُوْرًا رَّحِیْمًا ۟ۙ

ನಿಮಗೆ ವಿವಾಹವಾಗಲು ನಿಷಿದ್ಧವಾಗಿರುವವರು ಯಾರೆಂದರೆ—ನಿಮ್ಮ ತಾಯಂದಿರು, ಹೆಣ್ಣುಮಕ್ಕಳು, ಸಹೋದರಿಯರು, ತಂದೆಯ ಸಹೋದರಿಯರು, ತಾಯಿಯ ಸಹೋದರಿಯರು, ಸಹೋದರರ ಹೆಣ್ಣುಮಕ್ಕಳು, ಸಹೋದರಿಯರ ಹೆಣ್ಣುಮಕ್ಕಳು, ನಿಮಗೆ ಸ್ತನಪಾನ ಮಾಡಿದ ತಾಯಂದಿರು, ಸ್ತನಪಾನ ಸಂಬಂಧದಲ್ಲಿ ಸಹೋದರಿಗಳಾಗಿರುವವರು, ನಿಮ್ಮ ಪತ್ನಿಯರ ತಾಯಂದಿರು, ನಿಮ್ಮ ಪೋಷಣೆಯಲ್ಲಿ ಬೆಳೆಯುತ್ತಿರುವ ನಿಮ್ಮ ಪತ್ನಿಯರ ಹೆಣ್ಣುಮಕ್ಕಳು—ನೀವು ಆ ಪತ್ನಿಯರೊಡನೆ ಲೈಂಗಿಕ ಸಂಪರ್ಕ ಮಾಡಿದ್ದರೆ—ನೀವು ಅವರೊಡನೆ ಲೈಂಗಿಕ ಸಂಪರ್ಕ ಮಾಡಿರದಿದ್ದರೆ ಆ ಸಾಕುಪುತ್ರಿಯರನ್ನು ವಿವಾಹವಾಗುವುದರಲ್ಲಿ ದೋಷವಿಲ್ಲ; ನಿಮ್ಮ ಬೆನ್ನೆಲುಬಿನಿಂದ ಹುಟ್ಟಿದ ಗಂಡುಮಕ್ಕಳ ಪತ್ನಿಯರು ಮತ್ತು ಇಬ್ಬರು ಸಹೋದರಿಯರನ್ನು ಏಕಕಾಲದಲ್ಲಿ ವಿವಾಹವಾಗುವುದು—ಈಗಾಗಲೇ ಸಂಭವಿಸಿರುವುದರ ಹೊರತು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير: