Traduction des sens du Noble Coran - La traduction en Kannada - Hamzah Batûr

Numéro de la page:close

external-link copy
87 : 4

اَللّٰهُ لَاۤ اِلٰهَ اِلَّا هُوَ ؕ— لَیَجْمَعَنَّكُمْ اِلٰی یَوْمِ الْقِیٰمَةِ لَا رَیْبَ فِیْهِ ؕ— وَمَنْ اَصْدَقُ مِنَ اللّٰهِ حَدِیْثًا ۟۠

ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಿಶ್ಚಯವಾಗಿಯೂ ಅವನು ನಿಮ್ಮೆಲ್ಲರನ್ನೂ ಪುನರುತ್ಥಾನ ದಿನಕ್ಕೆ ಒಟ್ಟುಗೂಡಿಸುವನು. ಅದರಲ್ಲಿ ಸಂದೇಹವೇ ಇಲ್ಲ. ಮಾತಿನಲ್ಲಿ ಅಲ್ಲಾಹನಿಗಿಂತಲೂ ಹೆಚ್ಚು ಸತ್ಯವಂತನು ಯಾರು? info
التفاسير:

external-link copy
88 : 4

فَمَا لَكُمْ فِی الْمُنٰفِقِیْنَ فِئَتَیْنِ وَاللّٰهُ اَرْكَسَهُمْ بِمَا كَسَبُوْا ؕ— اَتُرِیْدُوْنَ اَنْ تَهْدُوْا مَنْ اَضَلَّ اللّٰهُ ؕ— وَمَنْ یُّضْلِلِ اللّٰهُ فَلَنْ تَجِدَ لَهٗ سَبِیْلًا ۟

ನಿಮಗೇನಾಗಿದೆ? ಕಪಟವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗಿದ್ದೀರಿ? ಅವರು ಮಾಡಿದ (ದುಷ್ಕರ್ಮಗಳ) ಕಾರಣದಿಂದ ಅಲ್ಲಾಹು ಅವರನ್ನು ಹಿಂದಕ್ಕೆ ತಿರುಗಿಸಿದ್ದಾನೆ. ಅಲ್ಲಾಹು ದಾರಿತಪ್ಪಿಸಿದ ಜನರಿಗೆ ನೀವು ಸನ್ಮಾರ್ಗ ತೋರಿಸಲು ಬಯಸುತ್ತೀರಾ? ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯನ್ನು ನೀವು ಕಾಣಲಾರಿರಿ. info
التفاسير:

external-link copy
89 : 4

وَدُّوْا لَوْ تَكْفُرُوْنَ كَمَا كَفَرُوْا فَتَكُوْنُوْنَ سَوَآءً فَلَا تَتَّخِذُوْا مِنْهُمْ اَوْلِیَآءَ حَتّٰی یُهَاجِرُوْا فِیْ سَبِیْلِ اللّٰهِ ؕ— فَاِنْ تَوَلَّوْا فَخُذُوْهُمْ وَاقْتُلُوْهُمْ حَیْثُ وَجَدْتُّمُوْهُمْ ۪— وَلَا تَتَّخِذُوْا مِنْهُمْ وَلِیًّا وَّلَا نَصِیْرًا ۟ۙ

ಅವರು ಸತ್ಯನಿಷೇಧಿಗಳಾದಂತೆ ನೀವೂ ಸತ್ಯನಿಷೇಧಿಗಳಾಗಬೇಕು ಮತ್ತು ನೀವೆಲ್ಲರೂ ಸಮಾನರಾಗಬೇಕು ಎಂದು ಅವರು ಬಯಸುತ್ತಾರೆ. ಆದ್ದರಿಂದ ಅವರು ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡುವ ತನಕ ಅವರಲ್ಲಿ ಯಾರನ್ನೂ ನೀವು ಮಿತ್ರರನ್ನಾಗಿ ಸ್ವೀಕರಿಸಬೇಡಿ. ಅವರು ವಿಮುಖರಾದರೆ, ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ಕೊಲ್ಲಿರಿ. ಅವರಲ್ಲಿ ಯಾರನ್ನೂ ನೀವು ಮಿತ್ರರನ್ನಾಗಿ ಅಥವಾ ಸಹಾಯಕರನ್ನಾಗಿ ಸ್ವೀಕರಿಸಬೇಡಿ. info
التفاسير:

external-link copy
90 : 4

اِلَّا الَّذِیْنَ یَصِلُوْنَ اِلٰی قَوْمٍ بَیْنَكُمْ وَبَیْنَهُمْ مِّیْثَاقٌ اَوْ جَآءُوْكُمْ حَصِرَتْ صُدُوْرُهُمْ اَنْ یُّقَاتِلُوْكُمْ اَوْ یُقَاتِلُوْا قَوْمَهُمْ ؕ— وَلَوْ شَآءَ اللّٰهُ لَسَلَّطَهُمْ عَلَیْكُمْ فَلَقٰتَلُوْكُمْ ۚ— فَاِنِ اعْتَزَلُوْكُمْ فَلَمْ یُقَاتِلُوْكُمْ وَاَلْقَوْا اِلَیْكُمُ السَّلَمَ ۙ— فَمَا جَعَلَ اللّٰهُ لَكُمْ عَلَیْهِمْ سَبِیْلًا ۟

ಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜನರ ಬಳಿಗೆ ಹೋಗಿ ಆಶ್ರಯ ಪಡೆದವರ ಹೊರತು; ಅಥವಾ, ನಿಮ್ಮ ವಿರುದ್ಧ ಯುದ್ಧ ಮಾಡಲು ಅಥವಾ ತಮ್ಮದೇ ಜನರ ವಿರುದ್ಧ ಯುದ್ಧ ಮಾಡಲು ಹೃದಯದಲ್ಲಿ ಇಕ್ಕಟ್ಟು ಅನುಭವಿಸುತ್ತಾ ನಿಮ್ಮ ಬಳಿಗೆ ಬಂದವರ ಹೊರತು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ಅವರಿಗೆ ನಿಮ್ಮ ಮೇಲೆ ಅಧಿಕಾರ ನೀಡುತ್ತಿದ್ದನು. ಆಗ ಅವರು ನಿಮ್ಮ ವಿರುದ್ಧ ಯುದ್ಧ ಮಾಡುತ್ತಿದ್ದರು. ಆದರೆ ಅವರು ಯುದ್ಧದಿಂದ ದೂರ ಸರಿದು, ನಿಮ್ಮ ವಿರುದ್ಧ ಯುದ್ಧ ಮಾಡದಿದ್ದರೆ ಮತ್ತು ಶಾಂತಿ ಪ್ರಸ್ತಾಪವನ್ನು ಮುಂದಿಟ್ಟರೆ, ಅವರಿಗೆ ವಿರುದ್ಧವಾಗಿ ಯಾವುದೇ ಮಾರ್ಗವನ್ನು ಸ್ವೀಕರಿಸಲು ಅಲ್ಲಾಹು ನಿಮಗೆ ಅನುಮತಿ ನೀಡಿಲ್ಲ. info
التفاسير:

external-link copy
91 : 4

سَتَجِدُوْنَ اٰخَرِیْنَ یُرِیْدُوْنَ اَنْ یَّاْمَنُوْكُمْ وَیَاْمَنُوْا قَوْمَهُمْ ؕ— كُلَّ مَا رُدُّوْۤا اِلَی الْفِتْنَةِ اُرْكِسُوْا فِیْهَا ۚ— فَاِنْ لَّمْ یَعْتَزِلُوْكُمْ وَیُلْقُوْۤا اِلَیْكُمُ السَّلَمَ وَیَكُفُّوْۤا اَیْدِیَهُمْ فَخُذُوْهُمْ وَاقْتُلُوْهُمْ حَیْثُ ثَقِفْتُمُوْهُمْ ؕ— وَاُولٰٓىِٕكُمْ جَعَلْنَا لَكُمْ عَلَیْهِمْ سُلْطٰنًا مُّبِیْنًا ۟۠

ನೀವು ಇನ್ನೊಂದು ರೀತಿಯ ಜನರನ್ನು ಕಾಣುವಿರಿ. ಅವರು ನಿಮ್ಮಿಂದ ಮತ್ತು ತಮ್ಮದೇ ಜನರಿಂದ ಸುರಕ್ಷಿತರಾಗಿರಲು ಬಯಸುತ್ತಾರೆ. ಆದರೆ, ಅವರನ್ನು ಕ್ಷೋಭೆಗೆ (ಯುದ್ಧಕ್ಕೆ) ಮರಳಿಸಿದಾಗಲೆಲ್ಲಾ ಅವರು ಅದರಲ್ಲಿ ತಲೆಕೆಳಗಾಗಿ ಬೀಳುತ್ತಾರೆ.[1] ಅವರು ಯುದ್ಧದಿಂದ ದೂರ ಸರಿಯದಿದ್ದರೆ ಮತ್ತು ಶಾಂತಿ ಪ್ರಸ್ತಾಪವನ್ನು ಮುಂದಿಡದಿದ್ದರೆ, ಹಾಗೂ ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ, ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ಕೊಲ್ಲಿರಿ. ಅವರ ವಿರುದ್ಧ ನಾವು ನಿಮಗೆ ಸ್ಪಷ್ಟ ಅಧಿಕಾರವನ್ನು ನೀಡಿದ್ದೇವೆ. info

[1] ಇವರು ಮುಸಲ್ಮಾನರೊಡನೆ ಶಾಂತಿ ಒಪ್ಪಂದ ಮಾಡಿಕೊಂಡವರಲ್ಲ; ಮುಸಲ್ಮಾನರೊಡನೆ ಸಹಾನುಭೂತಿಯುಳ್ಳವರೂ ಅಲ್ಲ. ಬದಲಾಗಿ, ಯುದ್ಧದ ಸಮಯದಲ್ಲಿ ತಟಸ್ಥರಾಗಿದ್ದು ಯುದ್ಧದ ಗತಿಯನ್ನು ವೀಕ್ಷಿಸುವವರು. ಇವರಿಗೆ ಮುಸಲ್ಮಾನರ ವಿರುದ್ಧ ಯುದ್ಧ ಮಾಡುವ ಉತ್ತಮ ಅವಕಾಶ ಸಿಕ್ಕಿದರೆ ಅವರು ಯುದ್ಧ ಮಾಡಲು ಹಿಂಜರಿಯುವುದಿಲ್ಲ. ಕೆಲವು ವ್ಯಾಖ್ಯಾನಕಾರರು ಕ್ಷೋಭೆ ಎಂದರೆ ದೇವಸಹಭಾಗಿತ್ವ (ಶಿರ್ಕ್) ಎಂದು ಅರ್ಥ ನೀಡಿದ್ದಾರೆ.

التفاسير: