Firo maanaaji al-quraan tedduɗo oo - Eggo Kannada ngol - Bashiir Maisoori

Tonngoode hello ngoo:close

external-link copy
78 : 40

وَلَقَدْ اَرْسَلْنَا رُسُلًا مِّنْ قَبْلِكَ مِنْهُمْ مَّنْ قَصَصْنَا عَلَیْكَ وَمِنْهُمْ مَّنْ لَّمْ نَقْصُصْ عَلَیْكَ ؕ— وَمَا كَانَ لِرَسُوْلٍ اَنْ یَّاْتِیَ بِاٰیَةٍ اِلَّا بِاِذْنِ اللّٰهِ ۚ— فَاِذَا جَآءَ اَمْرُ اللّٰهِ قُضِیَ بِالْحَقِّ وَخَسِرَ هُنَالِكَ الْمُبْطِلُوْنَ ۟۠

ನಿಶ್ಚಯವಾಗಿಯೂ ನಾವು ನಿಮಗಿಂತ ಮೊದಲು ಅನೇಕ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರ ಪೈಕಿ ಕೆಲವರ ವೃತ್ತಾಂತಗಳನ್ನು ನಿಮಗೆ ವಿವರಿಸಿಕೊಟ್ಟಿರು ತ್ತೇವೆ ಇನ್ನು ಕೆಲವರ ವೃತ್ತಾಂತಗಳನ್ನು ನಿಮಗೆ ನಾವು ವಿವರಿಸಿಲ್ಲ. ಅಲ್ಲಾಹನ ಅಪ್ಪಣೆ ಇಲ್ಲದೆ ಯಾವೊಬ್ಬ ಸಂದೇಶವಾಹಕನು ಯಾವ ದೃಷ್ಟಾಂತವನ್ನು ತರಲಾರನು. ಅನಂತರ ಅಲ್ಲಾಹನ ಆದೇಶ ಬಂದರೆ ಸತ್ಯದೊಂದಿಗೆ ತೀರ್ಮಾನ ಮಾಡಲಾಗುವುದು. ಅಲ್ಲಿ ಮಿಥ್ಯವಾದಿಗಳು ನಷ್ಟದಲ್ಲಿರುವರು. info
التفاسير:

external-link copy
79 : 40

اَللّٰهُ الَّذِیْ جَعَلَ لَكُمُ الْاَنْعَامَ لِتَرْكَبُوْا مِنْهَا وَمِنْهَا تَاْكُلُوْنَ ۟ؗ

ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದವನು ಅಲ್ಲಾಹನಾಗಿರುವನು. ಅವುಗಳಲ್ಲಿ ಕೆಲವೊಂದರ ಮೇಲೆ ನೀವು ಸವಾರಿ ಮಾಡುತ್ತೀರಿ ಮತ್ತು ಅವುಗಳಿಂದ ಕೆಲವೊಂದನ್ನು ನೀವು ತಿನ್ನುತ್ತೀರಿ. info
التفاسير:

external-link copy
80 : 40

وَلَكُمْ فِیْهَا مَنَافِعُ وَلِتَبْلُغُوْا عَلَیْهَا حَاجَةً فِیْ صُدُوْرِكُمْ وَعَلَیْهَا وَعَلَی الْفُلْكِ تُحْمَلُوْنَ ۟ؕ

ಮತ್ತು ಅವುಗಳಲ್ಲಿ ನಿಮಗೆ ಇನ್ನೂ ಅನೇಕ ಪ್ರಯೋಜನಗಳಿವೆ ಇದು ನೀವು ನಿಮ್ಮ ಮನಗಳಲ್ಲಿರುವ ಅಗತ್ಯಗಳನ್ನು ಅವುಗಳ ಮೇಲೆ ಸಂಚರಿಸಿ ಪೂರೈಸಲೆಂದಾಗಿದೆ. ಆ ಜಾನುವಾರುಗಳ ಮೇಲೂ ಮತ್ತು ಹಡಗಿನ ಮೇಲೂ ನಿಮ್ಮನ್ನು ಒಯ್ಯಲಾಗುತ್ತದೆ. info
التفاسير:

external-link copy
81 : 40

وَیُرِیْكُمْ اٰیٰتِهٖ ۖۗ— فَاَیَّ اٰیٰتِ اللّٰهِ تُنْكِرُوْنَ ۟

ಅಲ್ಲಾಹನು ನಿಮಗೆ ತನ್ನ ದೃಷ್ಟಾಂತಗಳನ್ನು ತೋರಿಸುತ್ತಾನೆ. ಇನ್ನು ನೀವು ಅಲ್ಲಾಹನ ಯಾವೆಲ್ಲ ದೃಷ್ಟಾಂತಗಳನ್ನು ನಿರಾಕರಿಸುವಿರಿ? info
التفاسير:

external-link copy
82 : 40

اَفَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— كَانُوْۤا اَكْثَرَ مِنْهُمْ وَاَشَدَّ قُوَّةً وَّاٰثَارًا فِی الْاَرْضِ فَمَاۤ اَغْنٰی عَنْهُمْ مَّا كَانُوْا یَكْسِبُوْنَ ۟

ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಸಂಖ್ಯೆಯುಳ್ಳವರು. ಶಕ್ತಿ ಸಾಮರ್ಥ್ಯದಲ್ಲಿ ಬಲಿಷ್ಠರು ಮತ್ತು ಭೂಮಿಯಲ್ಲಿ ಅನೇಕ ಸ್ಮಾರಕಗಳನ್ನು ಬಿಟ್ಟು ಹೋದವರಾಗಿದ್ದರು. ಅವರು ಮಾಡಿದ ಕಾರ್ಯಗಳು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ. info
التفاسير:

external-link copy
83 : 40

فَلَمَّا جَآءَتْهُمْ رُسُلُهُمْ بِالْبَیِّنٰتِ فَرِحُوْا بِمَا عِنْدَهُمْ مِّنَ الْعِلْمِ وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟

ಕೊನೆಗೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಾಗ ತಮ್ಮ ಬಳಿಯಿದ್ದ ಜ್ಞಾನದಲ್ಲೇ ಅವರು ಹೆಮ್ಮೆ ಪಡುತ್ತಿದ್ದರು ಮತ್ತು ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದುವೇ ಅವರನ್ನು ಸುತ್ತುವರಿದು ಬಿಟ್ಟಿತು. info
التفاسير:

external-link copy
84 : 40

فَلَمَّا رَاَوْا بَاْسَنَا قَالُوْۤا اٰمَنَّا بِاللّٰهِ وَحْدَهٗ وَكَفَرْنَا بِمَا كُنَّا بِهٖ مُشْرِكِیْنَ ۟

ಅವರು ನಮ್ಮ ಶಿಕ್ಷೆಯನ್ನು ಕಂಡಾಗ ನಾವು ಏಕೈಕ ಅಲ್ಲಾಹನಲ್ಲಿ ವಿಶ್ವಾಸವಿರಿಸಿದೆವು. ಮತ್ತು ಅವನಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದ ದೇವರುಗಳನ್ನು ನಿರಾಕರಿಸಿಬಿಟ್ಟೆವು ಎಂದು ಹೇಳತೊಡಗಿದರು. info
التفاسير:

external-link copy
85 : 40

فَلَمْ یَكُ یَنْفَعُهُمْ اِیْمَانُهُمْ لَمَّا رَاَوْا بَاْسَنَا ؕ— سُنَّتَ اللّٰهِ الَّتِیْ قَدْ خَلَتْ فِیْ عِبَادِهٖ ۚ— وَخَسِرَ هُنَالِكَ الْكٰفِرُوْنَ ۟۠

ಆದರೆ ಅವರು ನಮ್ಮ ಶಿಕ್ಷೆಯನ್ನು ಕಂಡ ಬಳಿಕ ಅವರ ವಿಶ್ವಾಸವು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ. ಇದು ಅಲ್ಲಾಹನು ತನ್ನ ದಾಸರ ವಿಚಾರದಲ್ಲಿ ಮೊದಲಿನಿಂದಲೇ ಜಾರಿಯಲ್ಲಿರಿಸಿದ್ದ. ಒಂದು ನಿಶ್ಚಿತ ಸಂಪ್ರದಾಯವಾಗಿತ್ತು ಮತ್ತು ಅಲ್ಲಿ ಸತ್ಯನಿಷೇಧಿಗಳು ನಷ್ಟ ಹೊಂದಿದವರಾದರು. info
التفاسير: