Firo maanaaji al-quraan tedduɗo oo - Eggo Kannada ngol - Bashiir Maisoori

Tonngoode hello ngoo:close

external-link copy
17 : 40

اَلْیَوْمَ تُجْزٰی كُلُّ نَفْسٍ بِمَا كَسَبَتْ ؕ— لَا ظُلْمَ الْیَوْمَ ؕ— اِنَّ اللّٰهَ سَرِیْعُ الْحِسَابِ ۟

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಗಳಿಸಿರುವುದರ ಪ್ರತಿಫಲ ನೀಡಲಾಗುವುದು. ಇಂದು ಯಾರ ಮೇಲೂ ಅನ್ಯಾಯ ಮಾಡಲಾಗದು. ನಿಶ್ಚಯವಾಗಿಯು ಅಲ್ಲಾಹನು ಅತೀ ಶೀಘ್ರವಾಗಿ ಲೆಕ್ಕ ವಿಚಾರಣೆಯನ್ನು ನಡೆಸುವವನಾಗಿದ್ದಾನೆ. info
التفاسير:

external-link copy
18 : 40

وَاَنْذِرْهُمْ یَوْمَ الْاٰزِفَةِ اِذِ الْقُلُوْبُ لَدَی الْحَنَاجِرِ كٰظِمِیْنَ ؕ۬— مَا لِلظّٰلِمِیْنَ مِنْ حَمِیْمٍ وَّلَا شَفِیْعٍ یُّطَاعُ ۟ؕ

ಸನ್ನಿಹಿತವಾಗಲಿರುವ (ಪುನರುತ್ಧಾನ) ದಿನದ ಬಗ್ಗೆ ನೀವು ಅವರನ್ನು ಎಚ್ಚರಿಸಿರಿ. ಹೃದಯಗಳು ಗಂಟಲುಗಳಿಗೆ ಏರಿ ಅವರು ಉಸಿರುಗಟ್ಟಿರುವ ಸಂದರ್ಭ ಮತ್ತು ಅಕ್ರಮಿಗಳಿಗೆ ಯಾವೊಬ್ಬ ಆಪ್ತಮಿತ್ರನಾಗಲಿ, ಅನುಸರಿಸಲಾಗುವ ಯಾವ ಶಿಫಾರಸ್ಸುಗಾರನಾಗಲಿ ಇರುವುದಿಲ್ಲ. info
التفاسير:

external-link copy
19 : 40

یَعْلَمُ خَآىِٕنَةَ الْاَعْیُنِ وَمَا تُخْفِی الصُّدُوْرُ ۟

ಅಲ್ಲಾಹನು ದೃಷ್ಟಿಗಳ ವಂಚನೆಯನ್ನೂ, ಹೃದಯಗಳು ಬಚ್ಚಿಡುವುದನ್ನೂ ಚೆನ್ನಾಗಿ ಬಲ್ಲನು. info
التفاسير:

external-link copy
20 : 40

وَاللّٰهُ یَقْضِیْ بِالْحَقِّ ؕ— وَالَّذِیْنَ یَدْعُوْنَ مِنْ دُوْنِهٖ لَا یَقْضُوْنَ بِشَیْءٍ ؕ— اِنَّ اللّٰهَ هُوَ السَّمِیْعُ الْبَصِیْرُ ۟۠

ಅಲ್ಲಾಹನು ಸತ್ಯದೊಂದಿಗೆ ತೀರ್ಮಾನ ಮಾಡುತ್ತಾನೆ. ಮತ್ತು ಅವನನ್ನು ಬಿಟ್ಟು ಅವರು ಕರೆದು ಬೇಡುತ್ತಿರುವವರು ಯಾವ ಸಂಗತಿಯನ್ನೂ ತೀರ್ಮಾನಿಸಲಾರರು ಖಂಡಿತವಾಗಿಯೂ ಅಲ್ಲಾಹನು ಸರ್ವವನ್ನಾಲಿಸುವವನು, ಸೂಕ್ಷö್ಮ ದೃಷ್ಟಿಯುಳ್ಳವನು ಆಗಿದ್ದಾನೆ. info
التفاسير:

external-link copy
21 : 40

اَوَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ كَانُوْا مِنْ قَبْلِهِمْ ؕ— كَانُوْا هُمْ اَشَدَّ مِنْهُمْ قُوَّةً وَّاٰثَارًا فِی الْاَرْضِ فَاَخَذَهُمُ اللّٰهُ بِذُنُوْبِهِمْ ؕ— وَمَا كَانَ لَهُمْ مِّنَ اللّٰهِ مِنْ وَّاقٍ ۟

ಇವರು ಭೂಮಿಯಲ್ಲಿ ಸಂಚರಿಸಿ ಇವರಿಗಿಂತ ಮುಂಚಿನವರ ಪರಿಣಾಮವೇನಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು ಮತ್ತು ಇವರಿಗಿಂತ ಹೆಚ್ಚು ಸ್ಮಾರಕಗಳನ್ನು ಭೂಮಿಯಲ್ಲಿ ಬಿಟ್ಟು ಹೋಗಿದ್ದರು. ಆದರೆ ಅಲ್ಲಾಹನು ಅವರ ಪಾಪಗಳ ನಿಮಿತ್ತ ಹಿಡಿದು ಬಿಟ್ಟನು ಮತ್ತು ಅವರಿಗೆ ಅಲ್ಲಾಹನ ಶಿಕ್ಷೆಯಿಂದ ಕಾಪಾಡುವ ಯಾವೊಬ್ಬನೂ ಇರಲಿಲ್ಲ. info
التفاسير:

external-link copy
22 : 40

ذٰلِكَ بِاَنَّهُمْ كَانَتْ تَّاْتِیْهِمْ رُسُلُهُمْ بِالْبَیِّنٰتِ فَكَفَرُوْا فَاَخَذَهُمُ اللّٰهُ ؕ— اِنَّهٗ قَوِیٌّ شَدِیْدُ الْعِقَابِ ۟

ಇದೇಕೆಂದರೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗ ಳೊಂದಿಗೆ ಬಂದಿದ್ದರು. ಆಗ ಅವರು ನಿಷೇಧಿಸಿದ್ದರು. ಕೊನೆಗೆ ಅಲ್ಲಾಹನು ಅವರನ್ನು ಹಿಡಿದುಬಿಟ್ಟನು. ಖಂಡಿತವಾಗಿಯು ಅವನು ಸರ್ವಶಕ್ತನೂ, ಅತ್ಯುಗ್ರಯಾತನೆಯನ್ನು ನೀಡುವವನೂ ಆಗಿದ್ದಾನೆ. info
التفاسير:

external-link copy
23 : 40

وَلَقَدْ اَرْسَلْنَا مُوْسٰی بِاٰیٰتِنَا وَسُلْطٰنٍ مُّبِیْنٍ ۟ۙ

23&24 info
التفاسير:

external-link copy
24 : 40

اِلٰی فِرْعَوْنَ وَهَامٰنَ وَقَارُوْنَ فَقَالُوْا سٰحِرٌ كَذَّابٌ ۟

ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊAದಿಗೆ ಮತ್ತು ಸುಸ್ಪಷ್ಟ ಪ್ರಮಾಣಗಳೊಂದಿಗೆ ಫಿರ್‌ಔನ್, ಹಾಮಾನ್ ಹಾಗೂ ಕಾರೂನನೆಡೆಗೆ ಕಳುಹಿಸಿದೆವು. ಆದರೆ ಅವನು ಇವನೊಬ್ಬ ಮಾಂತ್ರಿಕ ಮತ್ತು ಸುಳ್ಳುಗಾರನಾಗಿದ್ದಾನೆಂದು ಹೇಳಿದರು. info
التفاسير:

external-link copy
25 : 40

فَلَمَّا جَآءَهُمْ بِالْحَقِّ مِنْ عِنْدِنَا قَالُوا اقْتُلُوْۤا اَبْنَآءَ الَّذِیْنَ اٰمَنُوْا مَعَهٗ وَاسْتَحْیُوْا نِسَآءَهُمْ ؕ— وَمَا كَیْدُ الْكٰفِرِیْنَ اِلَّا فِیْ ضَلٰلٍ ۟

ಅವರ ಬಳಿಗೆ ಮೂಸಾ ನಮ್ಮ ಕಡೆಯಿಂದ ಸತ್ಯವನ್ನು ತಂದಾಗ ಅವರು ಹೇಳಿದರು: ಅವನಲ್ಲಿ ವಿಶ್ವಾಸವಿರಿಸಿದವರ ಗಂಡುಮಕ್ಕಳನ್ನು ಕೊಂದುಬಿಡಿರಿ ಹಾಗೂ ಹೆಣ್ಣು ಸಂತತಿಗಳನ್ನು ಜೀವಂತವಾಗಿಡಿರಿ ಸತ್ಯನಿಷೇಧಿಗಳ ಕುತಂತ್ರವು ಪಥಭ್ರಷ್ಟತೆಯಲ್ಲೇ ಇದೆ. info
التفاسير: