ترجمهٔ معانی قرآن کریم - ترجمه‌ى كنادى ـ بشير ميسورى

شماره صفحه:close

external-link copy
58 : 2

وَاِذْ قُلْنَا ادْخُلُوْا هٰذِهِ الْقَرْیَةَ فَكُلُوْا مِنْهَا حَیْثُ شِئْتُمْ رَغَدًا وَّادْخُلُوا الْبَابَ سُجَّدًا وَّقُوْلُوْا حِطَّةٌ نَّغْفِرْ لَكُمْ خَطٰیٰكُمْ ؕ— وَسَنَزِیْدُ الْمُحْسِنِیْنَ ۟

ನೀವು ಈ ಪಟ್ಟಣವನ್ನು (ಜರುಸಲೇಮ್) ಪ್ರವೇಶಿಸಿರಿ. ಮತ್ತು ನೀವು ಇಚ್ಛಿಸುವಲ್ಲಿಂದ ಯತೇಚ್ಛವಾಗಿ ತಿನ್ನಿರಿ, ಹಾಗೂ ತಲೆಬಾಗುತ್ತಾ ದ್ವಾರವನ್ನು ಪ್ರವೇಶಿಸಿರಿ ಮತ್ತು ನಾಲಗೆಯಿಂದ “ಹಿತ್ತತುನ್”(೨) ಎನ್ನುತ್ತಾ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸಜ್ಜನರಿಗೆ ಇನ್ನಷ್ಟು ಹೆಚ್ಚಿಸಿಕೊಡುವೆವು ಎಂದು ನಾವು ನಿಮ್ಮೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. info
التفاسير:

external-link copy
59 : 2

فَبَدَّلَ الَّذِیْنَ ظَلَمُوْا قَوْلًا غَیْرَ الَّذِیْ قِیْلَ لَهُمْ فَاَنْزَلْنَا عَلَی الَّذِیْنَ ظَلَمُوْا رِجْزًا مِّنَ السَّمَآءِ بِمَا كَانُوْا یَفْسُقُوْنَ ۟۠

ಬಳಿಕ ಆ ಅಕ್ರಮಿಗಳು ತಮಗೆ ಹೇಳಲಾದ ಮಾತನ್ನು ಬದಲಿಸಿ ಹೇಳಿದರು. ನಾವು ಆ ಅಕ್ರಮಿಗಳ ಮೇಲೆ ಅವರು ಆಜ್ಞೆಯ ಉಲ್ಲಂಘನೆ ಮಾಡುತ್ತಿದ್ದುದ್ದರ ನಿಮಿತ್ತ ಆಕಾಶದಿಂದ ಯಾತನೆಯನ್ನೆರಗಿಸಿದೆವು. info
التفاسير:

external-link copy
60 : 2

وَاِذِ اسْتَسْقٰی مُوْسٰی لِقَوْمِهٖ فَقُلْنَا اضْرِبْ بِّعَصَاكَ الْحَجَرَ ؕ— فَانْفَجَرَتْ مِنْهُ اثْنَتَا عَشْرَةَ عَیْنًا ؕ— قَدْ عَلِمَ كُلُّ اُنَاسٍ مَّشْرَبَهُمْ ؕ— كُلُوْا وَاشْرَبُوْا مِنْ رِّزْقِ اللّٰهِ وَلَا تَعْثَوْا فِی الْاَرْضِ مُفْسِدِیْنَ ۟

ಮೂಸಾ(ಅ) ತಮ್ಮ ಜನರಿಗೋಸ್ಕರ ನೀರನ್ನು ಬೇಡಿದ ಸಂದರ್ಭವನ್ನು ಸ್ಮರಿಸಿರಿ. ನಾವು ಹೇಳಿದೆವು; ನೀವು ನಿಮ್ಮ ಕೋಲಿನಿಂದ ಆ ಬಂಡೆಯ ಮೇಲೆ ಹೊಡೆಯಿರಿ. ಆಗ ಅದರಿಂದ ಹನ್ನೆರಡು ಚಿಲುಮೆಗಳು ಚಿಮ್ಮಿದವು ಮತ್ತು ಪ್ರತಿಯೊಂದು ಪಂಗಡವು ತಮ್ಮ ತಮ್ಮ ನೀರು ಪಡೆಯುವ ಘಟಕವನ್ನು ಅರಿತುಕೊಂಡಿತು. ನೀವು ಅಲ್ಲಾಹನು ನೀಡಿರುವ ಆಹಾರದಿಂದ ತಿನ್ನಿರಿ ಹಾಗೂ ಕುಡಿಯಿರಿ. ಮತ್ತು ನೀವು ಭೂಮಿಯಲ್ಲಿ ಕ್ಷೋಭೆಯನ್ನು ಹರಡದಿರಿ. info
التفاسير:

external-link copy
61 : 2

وَاِذْ قُلْتُمْ یٰمُوْسٰی لَنْ نَّصْبِرَ عَلٰی طَعَامٍ وَّاحِدٍ فَادْعُ لَنَا رَبَّكَ یُخْرِجْ لَنَا مِمَّا تُنْۢبِتُ الْاَرْضُ مِنْ بَقْلِهَا وَقِثَّآىِٕهَا وَفُوْمِهَا وَعَدَسِهَا وَبَصَلِهَا ؕ— قَالَ اَتَسْتَبْدِلُوْنَ الَّذِیْ هُوَ اَدْنٰی بِالَّذِیْ هُوَ خَیْرٌ ؕ— اِهْبِطُوْا مِصْرًا فَاِنَّ لَكُمْ مَّا سَاَلْتُمْ ؕ— وَضُرِبَتْ عَلَیْهِمُ الذِّلَّةُ وَالْمَسْكَنَةُ وَبَآءُوْ بِغَضَبٍ مِّنَ اللّٰهِ ؕ— ذٰلِكَ بِاَنَّهُمْ كَانُوْا یَكْفُرُوْنَ بِاٰیٰتِ اللّٰهِ وَیَقْتُلُوْنَ النَّبِیّٖنَ بِغَیْرِ الْحَقِّ ؕ— ذٰلِكَ بِمَا عَصَوْا وَّكَانُوْا یَعْتَدُوْنَ ۟۠

ಓ ಮೂಸಾ(ಅ) ನಾವು ಒಂದೇ ಬಗೆಯ ಆಹಾರವನ್ನು ಸಹಿಸಲಾರೆವು ಆದ್ದರಿಂದ ಭೂಮಿಯ ಉತ್ಪಾದನೆಗಳಾದ ಸೊಪ್ಪು, ಸೌತೆ, ಗೋಧಿ, ಚನ್ನಂಗಿ ಬೇಳೆ, ಈರುಳ್ಳಿ ಇತ್ಯಾದಿಗಳನ್ನು ನಮಗೆ ಉತ್ಪಾದಿಸಿ ಕೊಡಲು ತಾವು ತಮ್ಮ ಪ್ರಭುವಿನೊಂದಿಗೆ ಪ್ರಾರ್ಥಿಸಿರಿ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಮೂಸಾ(ಅ) ಹೇಳಿದರು ಉತ್ತಮವಾದುದರ ಬದಲಿಗೆ ನಿಕೃಷ್ಟವಾದುದ್ದನ್ನು ಬೇಡುವಿರಾ? ಸರಿ ಹಾಗಾದರೆ ನೀವು ಯಾವುದೇ ಪಟ್ಟಣದಲ್ಲಿ ಹೋಗಿ ವಾಸಿಸಿರಿ. ಅಲ್ಲಿ ನಿಮಗೆ ನೀವು ಬೇಡಿದ ಎಲ್ಲವು ಸಿಗುವುದು. ಮತ್ತು (ಇಂತಹ ಹಟಮಾರಿತನದಿಂದಾಗಿ) ಅವರ ಮೇಲೆ ನಿಂದ್ಯತೆಯನ್ನು, ದಾರಿದ್ರö್ಯವನ್ನು ಹೇರಲಾಯಿತು ಮತ್ತು ಅವರು ಅಲ್ಲಾಹನ ಕ್ರೋಧವನ್ನು ಹೊತ್ತುಕೊಂಡು ಮರಳಿದರು. ಏಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು, ಮತ್ತು ಅನ್ಯಾಯವಾಗಿ ಪೈಗಂಬರರನ್ನು ವಧಿಸುತಿದ್ದರು. ಇದು ಅವರು ಧಿಕ್ಕಾರ ತೋರಿದುದರ ಹಾಗೂ ಮಿತಿಮೀರಿ ಹೋದುದರ ನಿಮಿತ್ತವಾಗಿತ್ತು. info
التفاسير: