ترجمهٔ معانی قرآن کریم - ترجمه‌ى كنادى ـ بشير ميسورى

شماره صفحه:close

external-link copy
106 : 2

مَا نَنْسَخْ مِنْ اٰیَةٍ اَوْ نُنْسِهَا نَاْتِ بِخَیْرٍ مِّنْهَاۤ اَوْ مِثْلِهَا ؕ— اَلَمْ تَعْلَمْ اَنَّ اللّٰهَ عَلٰی كُلِّ شَیْءٍ قَدِیْرٌ ۟

ನಾವು ರದ್ದು ಮಾಡಿದ ಅಥವಾ ಮರೆಸಿಬಿಟ್ಟ ಸೂಕ್ತದ ಬದಲಿಗೆ ನಾವು ಅದಕ್ಕಿಂತಲೂ ಉತ್ತಮವಾದುದನ್ನು ಅಥವಾ ಅದಕ್ಕೆ ಸಮಾನವಾದುದನ್ನು ತರುತ್ತೇವೆ. ನಿಜವಾಗಿಯು ಅಲ್ಲಾಹನು ಸಕಲ ವಿಷಯಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆಂದು ನೀವು ತಿಳಿದಿಲ್ಲವೇ? info
التفاسير:

external-link copy
107 : 2

اَلَمْ تَعْلَمْ اَنَّ اللّٰهَ لَهٗ مُلْكُ السَّمٰوٰتِ وَالْاَرْضِ ؕ— وَمَا لَكُمْ مِّنْ دُوْنِ اللّٰهِ مِنْ وَّلِیٍّ وَّلَا نَصِیْرٍ ۟

ಆಕಾಶಗಳ ಭೂಮಿಯ ಅಧಿಪತ್ಯವು ಅಲ್ಲಾಹನಿಗೆ ಮಾತ್ರವಿದೆಯೆಂದು ಮತ್ತು ನಿಮಗೆ ಅಲ್ಲಾಹನ ಹೊರತು ಇನ್ನಾವ ರಕ್ಷಕ ಮಿತ್ರನಾಗಲೀ, ಸಹಾಯಕನಾಗಲಿ ಇಲ್ಲೆವೆಂದು ನೀವು ಅರಿತಿಲ್ಲವೇ? info
التفاسير:

external-link copy
108 : 2

اَمْ تُرِیْدُوْنَ اَنْ تَسْـَٔلُوْا رَسُوْلَكُمْ كَمَا سُىِٕلَ مُوْسٰی مِنْ قَبْلُ ؕ— وَمَنْ یَّتَبَدَّلِ الْكُفْرَ بِالْاِیْمَانِ فَقَدْ ضَلَّ سَوَآءَ السَّبِیْلِ ۟

ಇದಕ್ಕೆ ಮೊದಲು (ಪೈಗಂಬರ್) ಮೂಸಾರವರೊಂದಿಗೆ ಪ್ರಶ್ನಿಸಲಾದಂತೆ ನೀವು ನಿಮ್ಮ ಸಂದೇಶವಾಹಕರೊAದಿಗೆ ಪ್ರಶ್ನಿಸುತ್ತೀರಾ? ಯಾರು ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಕೈಗೊಳ್ಳುತ್ತಾನೋ ಅವನು ನೇರಮಾರ್ಗದಿಂದ ಭ್ರಷ್ಟನಾಗಿ ಬಿಡುತ್ತಾನೆ. info
التفاسير:

external-link copy
109 : 2

وَدَّ كَثِیْرٌ مِّنْ اَهْلِ الْكِتٰبِ لَوْ یَرُدُّوْنَكُمْ مِّنْ بَعْدِ اِیْمَانِكُمْ كُفَّارًا ۖۚ— حَسَدًا مِّنْ عِنْدِ اَنْفُسِهِمْ مِّنْ بَعْدِ مَا تَبَیَّنَ لَهُمُ الْحَقُّ ۚ— فَاعْفُوْا وَاصْفَحُوْا حَتّٰی یَاْتِیَ اللّٰهُ بِاَمْرِهٖ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟

ಗ್ರಂಥದವರಲ್ಲಿ (ಯಹೂದಿಯರಲ್ಲಿ) ಅಧಿಕ ಮಂದಿ ತಮಗೆ ಸತ್ಯವು ಸ್ಪಷ್ಟವಾದ ಬಳಿಕವೂ ಕೇವಲ ತಮ್ಮ ಅಸೂಯೆಯ ನಿಮಿತ್ತ ನೀವು ವಿಶ್ವಾಸವಿರಿಸಿದ ಬಳಿಕ ನಿಮ್ಮನ್ನು ಅವಿಶ್ವಾಸಿಗಳನ್ನಾಗಿ ಮಾಡಲು ಬಯಸುತ್ತಾರೆ. ಆದ್ದರಿಂದ ಅಲ್ಲಾಹನು ತನ್ನ ಆಜ್ಞೆಯನ್ನು ಜಾರಿಗೊಳಿಸುವವರೆಗೆ ನೀವು ಮನ್ನಿಸಿರಿ ಹಾಗೂ ಬಿಟ್ಟುಬಿಡಿರಿ. ನಿಸ್ಸಂದೇಹವಾಗಿಯು ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
110 : 2

وَاَقِیْمُوا الصَّلٰوةَ وَاٰتُوا الزَّكٰوةَ ؕ— وَمَا تُقَدِّمُوْا لِاَنْفُسِكُمْ مِّنْ خَیْرٍ تَجِدُوْهُ عِنْدَ اللّٰهِ ؕ— اِنَّ اللّٰهَ بِمَا تَعْمَلُوْنَ بَصِیْرٌ ۟

ಮತ್ತು ನೀವು ನಮಾಝ್‌ಗಳನ್ನು ಸಂಸ್ಥಾಪಿಸಿರಿ, ಝಕಾತ್ ಪಾವತಿಸಿರಿ ಮತ್ತು ನೀವು ನಿಮಗೋಸ್ಕರ ಮುಂಗಡವಾಗಿ ಯಾವುದೇ ಒಳಿತನ್ನು ಕಳುಹಿಸಿದರೂ ಅದನ್ನು ಅಲ್ಲಾಹನ ಬಳಿ ಪಡೆಯಲಿದ್ದೀರಿ. ನಿಸ್ಸಂಶಯವಾಗಿಯು ಅಲ್ಲಾಹನು ನಿಮ್ಮ ಕರ್ಮಗಳನ್ನು ಸೂಕ್ಷö್ಮವಾಗಿ ವೀಕ್ಷಿಸುತ್ತಿದ್ದಾನೆ. info
التفاسير:

external-link copy
111 : 2

وَقَالُوْا لَنْ یَّدْخُلَ الْجَنَّةَ اِلَّا مَنْ كَانَ هُوْدًا اَوْ نَصٰرٰی ؕ— تِلْكَ اَمَانِیُّهُمْ ؕ— قُلْ هَاتُوْا بُرْهَانَكُمْ اِنْ كُنْتُمْ صٰدِقِیْنَ ۟

ಅವರು ಹೇಳುತ್ತಾರೆ; ಯಹೂದಿ ಮತ್ತು ಕ್ರೆöÊಸ್ತನಾಗಿರುವವನ ಹೊರತು ಇನ್ನಾರೂ ಸ್ವರ್ಗವನ್ನು ಪ್ರವೇಶಿಸಲಾರನು. ಇದು ಕೇವಲ ಅವರ ಮನದಾಸೆ ಮಾತ್ರವಾಗಿದೆ. ನೀವು ಸತ್ಯವಾದಿಗಳಾಗಿದ್ದರೆ ಯಾವುದಾದದರೂ ಪುರಾವೆಯನ್ನು ತನ್ನಿರಿ ಎಂದು ಅವರೊಡನೆ ಕೇಳಿರಿ. info
التفاسير:

external-link copy
112 : 2

بَلٰی ۗ— مَنْ اَسْلَمَ وَجْهَهٗ لِلّٰهِ وَهُوَ مُحْسِنٌ فَلَهٗۤ اَجْرُهٗ عِنْدَ رَبِّهٖ ۪— وَلَا خَوْفٌ عَلَیْهِمْ وَلَا هُمْ یَحْزَنُوْنَ ۟۠

ಹಾಗಲ್ಲ, ಯಾರು ತನ್ನ ಮುಖವನ್ನು ಪ್ರಾಮಾಣಿಕವಾಗಿ ಅಲ್ಲಾಹನಿಗೆ ಸಮರ್ಪಿಸಿಕೊಳ್ಳುತ್ತಾನೋ ನಿಸ್ಸಂಶಯವಾಗಿಯು ಅವನಿಗೆ ಅವನ ಪ್ರಭುವು ಪರಿಪೂರ್ಣ ಪ್ರತಿಫಲ ನೀಡುವನು. ಅವನ ಮೇಲೆ ಯಾವುದೇ ಭಯ ಮತ್ತು ವ್ಯಥೆ ಇರದು. info
التفاسير: