ترجمهٔ معانی قرآن کریم - ترجمه‌ى كنادى ـ بشير ميسورى

شماره صفحه:close

external-link copy
187 : 2

اُحِلَّ لَكُمْ لَیْلَةَ الصِّیَامِ الرَّفَثُ اِلٰی نِسَآىِٕكُمْ ؕ— هُنَّ لِبَاسٌ لَّكُمْ وَاَنْتُمْ لِبَاسٌ لَّهُنَّ ؕ— عَلِمَ اللّٰهُ اَنَّكُمْ كُنْتُمْ تَخْتَانُوْنَ اَنْفُسَكُمْ فَتَابَ عَلَیْكُمْ وَعَفَا عَنْكُمْ ۚ— فَالْـٰٔنَ بَاشِرُوْهُنَّ وَابْتَغُوْا مَا كَتَبَ اللّٰهُ لَكُمْ ۪— وَكُلُوْا وَاشْرَبُوْا حَتّٰی یَتَبَیَّنَ لَكُمُ الْخَیْطُ الْاَبْیَضُ مِنَ الْخَیْطِ الْاَسْوَدِ مِنَ الْفَجْرِ ۪— ثُمَّ اَتِمُّوا الصِّیَامَ اِلَی الَّیْلِ ۚ— وَلَا تُبَاشِرُوْهُنَّ وَاَنْتُمْ عٰكِفُوْنَ فِی الْمَسٰجِدِ ؕ— تِلْكَ حُدُوْدُ اللّٰهِ فَلَا تَقْرَبُوْهَا ؕ— كَذٰلِكَ یُبَیِّنُ اللّٰهُ اٰیٰتِهٖ لِلنَّاسِ لَعَلَّهُمْ یَتَّقُوْنَ ۟

ಉಪವಾಸದ ರಾತ್ರಿಯಲ್ಲಿ ನಿಮಗೆ ಸತಿ ಸಂಪರ್ಕ ಧರ್ಮ ಸಮ್ಮತಗೊಳಿಸಲಾಗಿದೆ. ಅವರು ನಿಮ್ಮ ಉಡುಪಾಗಿದ್ದಾರೆ ಹಾಗೂ ನೀವು ಅವರ ಉಡುಪಾಗಿದ್ದೀರಿ. ನಿಮ್ಮ ರಹಸ್ಯವಾದ ವಂಚನೆಗಳನ್ನು ಅಲ್ಲಾಹನು ಅರಿತಿದ್ದಾನೆ ಅವನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿ ನಿಮ್ಮನ್ನು ಮನ್ನಿಸಿಬಿಟ್ಟಿರುವನು. ಇನ್ನು ನೀವು ಅವರನ್ನು ಸಂಭೋಗಿಸಲು ಹಾಗೂ ಅಲ್ಲಾಹನು ನಿಮ್ಮ ಪಾಲಿಗೆ ನಿಶ್ಚಯಿಸಿರುವುದನ್ನು ಅರಸಿರಿ ಮತ್ತು ನಿಮಗೆ ಪ್ರಭಾತದ ಬಿಳಿ ನೂಲು ಕಪ್ಪು ನೂಲಿನಿಂದ ಸ್ಪಷ್ಟವಾಗುವವರೆಗೆ ತಿನ್ನಿರಿ ಹಾಗೂ ಕುಡಿಯಿರಿ. ನಂತರ ಇರುಳಿನವರಗೆ ನೀವು ಉಪವಾಸವನ್ನು ಪೂರ್ತಿಗೊಳಿಸಿರಿ ಮತ್ತು ನೀವು ಮಸೀದಿಗಳಲ್ಲಿ `ಈತಿಕಾಫ್' (ಧ್ಯಾನಸಕ್ತರಾಗಿ) ನಲ್ಲಿರುವಾಗ ಪತ್ನಿಯರನ್ನು ಸಂಭೋಗಿಸಬೇಡಿರಿ ಇವು ಅಲ್ಲಾಹನ ಮೇರೆಗಳಾಗಿವೆ. ನೀವು ಇವುಗಳನ್ನು ಹತ್ತಿರಕ್ಕೂ ಸುಳಿಯಬೇಡಿರಿ ಇದೇ ಪ್ರಕಾರ ಅಲ್ಲಾಹನು ಜನರಿಗೆ ತನ್ನ ಸೂಕ್ತಿಗಳನ್ನು ಅವರು ಭಯಭಕ್ತಿ ಪಾಲಿಸಲೆಂದು ವಿವರಿಸಿಕೊಡುತ್ತಾನೆ. info
التفاسير:

external-link copy
188 : 2

وَلَا تَاْكُلُوْۤا اَمْوَالَكُمْ بَیْنَكُمْ بِالْبَاطِلِ وَتُدْلُوْا بِهَاۤ اِلَی الْحُكَّامِ لِتَاْكُلُوْا فَرِیْقًا مِّنْ اَمْوَالِ النَّاسِ بِالْاِثْمِ وَاَنْتُمْ تَعْلَمُوْنَ ۟۠

ನೀವು ಪರಸ್ಪರರ ಸಂಪತ್ತುಗಳನ್ನು ಧರ್ಮಬಾಹಿರವಾಗಿ ತಿನ್ನಬೇಡಿರಿ ಹಾಗೂ ತಿಳಿದೂ ತಿಳಿದೂ ಜನರ ಸಂಪತ್ತುಗಳಿAದ ಒಂದAಶವನ್ನು ತಿನ್ನಲು (ಅದರ ವ್ಯಾಜ್ಯವನ್ನು) ಅಧಿಕಾರಿಗಳ ಬಳಿಗೆ ಒಯ್ಯಬೇಡಿ. info
التفاسير:

external-link copy
189 : 2

یَسْـَٔلُوْنَكَ عَنِ الْاَهِلَّةِ ؕ— قُلْ هِیَ مَوَاقِیْتُ لِلنَّاسِ وَالْحَجِّ ؕ— وَلَیْسَ الْبِرُّ بِاَنْ تَاْتُوا الْبُیُوْتَ مِنْ ظُهُوْرِهَا وَلٰكِنَّ الْبِرَّ مَنِ اتَّقٰی ۚ— وَاْتُوا الْبُیُوْتَ مِنْ اَبْوَابِهَا ۪— وَاتَّقُوا اللّٰهَ لَعَلَّكُمْ تُفْلِحُوْنَ ۟

ಓ ಪೈಗಂಬರರೇ ಜನರು ಚಂದ್ರ (ವೃದ್ಧಿಷಯಗಳ) ಒಂದರ ಕುರಿತು ವಿಚಾರಿಸುತ್ತಾರೆ, ಹೇಳಿರಿ; ಅದು ಜನರ ವೇಳೆಗಳ ನಿರ್ಣಯ ಮತ್ತು ಹಜ್ಜ್ನ ಕಾಲದ ಸೂಚಕವಾಗಿದೆ. ಮತ್ತು ನೀವು ಇಹ್ರಾಮ್ ಸ್ಥಿತಿಯಲ್ಲಿ ಮನೆಗಳಿಗೆ ಹಿಂಭಾಗದಿAದ ಬರುವುದು ಪುಣ್ಯವೇನಲ್ಲ. ಆದರೆ ಪುಣ್ಯವಂತನೆAದರೆ ಭಯಭಕ್ತಿ ಹೊಂದಿರುವವನಾಗಿದ್ದಾನೆ. ಮತ್ತು ನೀವು ಮನೆಗಳಿಗೆ ಅವುಗಳ ಬಾಗಿಲುಗಳಿಂದಲೇ ಬನ್ನಿರಿ ಮತ್ತು ಅಲ್ಲಾಹನನ್ನು ಭಯಪಡಿರಿ ಪ್ರಾಯಶಃ ನೀವು ಯಶಸ್ಸು ಹೊಂದಬಹುದು. info
التفاسير:

external-link copy
190 : 2

وَقَاتِلُوْا فِیْ سَبِیْلِ اللّٰهِ الَّذِیْنَ یُقَاتِلُوْنَكُمْ وَلَا تَعْتَدُوْا ؕ— اِنَّ اللّٰهَ لَا یُحِبُّ الْمُعْتَدِیْنَ ۟

ಮತ್ತು ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಮತ್ತು ಹದ್ದು ಮೀರಬೇಡಿರಿ ಖಂಡಿತವಾಗಿಯು ಅಲ್ಲಾಹನು ಹದ್ದು ಮೀರುವವರನ್ನು ಇಷ್ಟಪಡುವುದಿಲ್ಲ. info
التفاسير: