Traducción de los significados del Sagrado Corán - Traducción al Canarés- Hamza Batur

Número de página:close

external-link copy
34 : 4

اَلرِّجَالُ قَوّٰمُوْنَ عَلَی النِّسَآءِ بِمَا فَضَّلَ اللّٰهُ بَعْضَهُمْ عَلٰی بَعْضٍ وَّبِمَاۤ اَنْفَقُوْا مِنْ اَمْوَالِهِمْ ؕ— فَالصّٰلِحٰتُ قٰنِتٰتٌ حٰفِظٰتٌ لِّلْغَیْبِ بِمَا حَفِظَ اللّٰهُ ؕ— وَالّٰتِیْ تَخَافُوْنَ نُشُوْزَهُنَّ فَعِظُوْهُنَّ وَاهْجُرُوْهُنَّ فِی الْمَضَاجِعِ وَاضْرِبُوْهُنَّ ۚ— فَاِنْ اَطَعْنَكُمْ فَلَا تَبْغُوْا عَلَیْهِنَّ سَبِیْلًا ؕ— اِنَّ اللّٰهَ كَانَ عَلِیًّا كَبِیْرًا ۟

ಪುರುಷರಿಗೆ ಮಹಿಳೆಯರ ಮೇಲೆ ಅಧಿಕಾರವಿದೆ. ಅದೇಕೆಂದರೆ, ಅಲ್ಲಾಹು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರಿಗಿಂತ ಶ್ರೇಷ್ಠಗೊಳಿಸಿದ್ದಾನೆ ಮತ್ತು ಅವರು (ಪುರುಷರು) ತಮ್ಮ ಧನದಿಂದ ಖರ್ಚು ಮಾಡುತ್ತಾರೆ. ವಿಧೇಯತೆ ತೋರುವವರು ಮತ್ತು ಗಂಡಂದಿರ ಅನುಪಸ್ಥಿತಿಯಲ್ಲಿ ಅಲ್ಲಾಹು ಕಾಪಾಡಬೇಕೆಂದು ಹೇಳಿದ್ದನ್ನು ಕಾಪಾಡುವವರು ಯಾರೋ ಅವರೇ ನೀತಿವಂತ ಮಹಿಳೆಯರು. ಅವರು ವಿಧೇಯತೆ ತೋರುವುದಿಲ್ಲವೆಂದು ನಿಮಗೆ ಭಯವಾದರೆ, ಅವರಿಗೆ ಹಿತೋಪದೇಶ ಮಾಡಿ, ಹಾಸಿಗೆಯಿಂದ ದೂರವಿಡಿ ಮತ್ತು ಥಳಿಸಿ. ಅವರು ನಿಮ್ಮ ಮಾತನ್ನು ಕೇಳಿದರೆ, ಅವರ ವಿರುದ್ಧ ಬೇರೆ ಮಾರ್ಗವನ್ನು ಹುಡುಕಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಅತ್ಯುನ್ನತನು ಮತ್ತು ಸರ್ವಶ್ರೇಷ್ಠನಾಗಿದ್ದಾನೆ. info
التفاسير:

external-link copy
35 : 4

وَاِنْ خِفْتُمْ شِقَاقَ بَیْنِهِمَا فَابْعَثُوْا حَكَمًا مِّنْ اَهْلِهٖ وَحَكَمًا مِّنْ اَهْلِهَا ۚ— اِنْ یُّرِیْدَاۤ اِصْلَاحًا یُّوَفِّقِ اللّٰهُ بَیْنَهُمَا ؕ— اِنَّ اللّٰهَ كَانَ عَلِیْمًا خَبِیْرًا ۟

ಅವರಿಬ್ಬರ (ಗಂಡ-ಹೆಂಡತಿಯ) ನಡುವೆ ಒಡಕು ಮೂಡಬಹುದೆಂದು ನೀವು ಭಯಪಟ್ಟರೆ, ಅವನ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಮತ್ತು ಅವಳ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಕಳುಹಿಸಿರಿ. ಅವರಿಬ್ಬರು ರಾಜಿ ಮಾಡಿಕೊಳ್ಳಲು ಬಯಸುವುದಾದರೆ ಅಲ್ಲಾಹು ಅವರ ನಡುವೆ ಹೊಂದಾಣಿಕೆ ಮಾಡುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ. info
التفاسير:

external-link copy
36 : 4

وَاعْبُدُوا اللّٰهَ وَلَا تُشْرِكُوْا بِهٖ شَیْـًٔا وَّبِالْوَالِدَیْنِ اِحْسَانًا وَّبِذِی الْقُرْبٰی وَالْیَتٰمٰی وَالْمَسٰكِیْنِ وَالْجَارِ ذِی الْقُرْبٰی وَالْجَارِ الْجُنُبِ وَالصَّاحِبِ بِالْجَنْۢبِ وَابْنِ السَّبِیْلِ ۙ— وَمَا مَلَكَتْ اَیْمَانُكُمْ ؕ— اِنَّ اللّٰهَ لَا یُحِبُّ مَنْ كَانَ مُخْتَالًا فَخُوْرَا ۟ۙ

ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ. ಮಾತಾಪಿತರಿಗೆ ಒಳಿತು ಮಾಡಿರಿ. ಸಂಬಂಧಿಕರು, ಅನಾಥರು, ಬಡವರು, ಕುಟುಂಬ ಸಂಬಂಧವಿರುವ ನೆರೆಹೊರೆಯವರು, ಇತರ ನೆರೆಹೊರೆಯವರು, ಸಂಗಡಿಗರು, ಪ್ರಯಾಣಿಕರು ಮತ್ತು ನಿಮ್ಮ ಅಧೀನದಲ್ಲಿರುವ ಗುಲಾಮರು ಮುಂತಾದವರೊಡನೆ ಉತ್ತಮವಾಗಿ ವರ್ತಿಸಿರಿ. ಅಹಂಕಾರ ಮತ್ತು ದರ್ಪವಿರುವ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ. info
التفاسير:

external-link copy
37 : 4

١لَّذِیْنَ یَبْخَلُوْنَ وَیَاْمُرُوْنَ النَّاسَ بِالْبُخْلِ وَیَكْتُمُوْنَ مَاۤ اٰتٰىهُمُ اللّٰهُ مِنْ فَضْلِهٖ ؕ— وَاَعْتَدْنَا لِلْكٰفِرِیْنَ عَذَابًا مُّهِیْنًا ۟ۚ

ಜಿಪುಣರು, ಜನರನ್ನು ಜಿಪುಣರಾಗಲು ಪ್ರೋತ್ಸಾಹಿಸುವವರು ಮತ್ತು ಅಲ್ಲಾಹು ಉದಾರವಾಗಿ ನೀಡಿದ ಧನವನ್ನು ಬಚ್ಚಿಡುವವರು ಯಾರೋ—ಆ ಸತ್ಯನಿಷೇಧಿಗಳಿಗೆ ನಾವು ಅಪಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. info
التفاسير: