Traducción de los significados del Sagrado Corán - Traducción al Canarés- Hamza Batur

Número de página:close

external-link copy
95 : 4

لَا یَسْتَوِی الْقٰعِدُوْنَ مِنَ الْمُؤْمِنِیْنَ غَیْرُ اُولِی الضَّرَرِ وَالْمُجٰهِدُوْنَ فِیْ سَبِیْلِ اللّٰهِ بِاَمْوَالِهِمْ وَاَنْفُسِهِمْ ؕ— فَضَّلَ اللّٰهُ الْمُجٰهِدِیْنَ بِاَمْوَالِهِمْ وَاَنْفُسِهِمْ عَلَی الْقٰعِدِیْنَ دَرَجَةً ؕ— وَكُلًّا وَّعَدَ اللّٰهُ الْحُسْنٰی ؕ— وَفَضَّلَ اللّٰهُ الْمُجٰهِدِیْنَ عَلَی الْقٰعِدِیْنَ اَجْرًا عَظِیْمًا ۟ۙ

ಯಾವುದೇ ಕಾರಣವಿಲ್ಲದೆ ಕುಳಿತಿರುವ ಸತ್ಯವಿಶ್ವಾಸಿಗಳು ಮತ್ತು ಅಲ್ಲಾಹನ ಮಾರ್ಗದಲ್ಲಿ ತನು-ಧನಗಳಿಂದ ಯುದ್ಧ ಮಾಡುವ ಸತ್ಯವಿಶ್ವಾಸಿಗಳು ಸಮಾನರಲ್ಲ. ತನು-ಧನಗಳಿಂದ ಯುದ್ಧ ಮಾಡುವವರಿಗೆ ಅಲ್ಲಾಹು ಕುಳಿತವರಿಗಿಂತ ಹೆಚ್ಚು ಪದವಿಗಳನ್ನು ನೀಡಿ ಅನುಗ್ರಹಿಸುತ್ತಾನೆ. ಅಲ್ಲಾಹು (ಅವರಿಬ್ಬರಲ್ಲಿ) ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲದ ವಾಗ್ದಾನ ಮಾಡಿದ್ದಾನೆ. ಆದರೆ ಯುದ್ಧ ಮಾಡುವವರಿಗೆ ಅಲ್ಲಾಹು ಕುಳಿತವರಿಗೆ ನೀಡುವುದಕ್ಕಿಂತಲೂ ದೊಡ್ಡ ಪ್ರತಿಫಲವನ್ನು ನೀಡಿ ಅನುಗ್ರಹಿಸುತ್ತಾನೆ. info
التفاسير:

external-link copy
96 : 4

دَرَجٰتٍ مِّنْهُ وَمَغْفِرَةً وَّرَحْمَةً ؕ— وَكَانَ اللّٰهُ غَفُوْرًا رَّحِیْمًا ۟۠

ಅವನ ಕಡೆಯ ಪದವಿಗಳು, ಕ್ಷಮೆ ಮತ್ತು ದಯೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
97 : 4

اِنَّ الَّذِیْنَ تَوَفّٰىهُمُ الْمَلٰٓىِٕكَةُ ظَالِمِیْۤ اَنْفُسِهِمْ قَالُوْا فِیْمَ كُنْتُمْ ؕ— قَالُوْا كُنَّا مُسْتَضْعَفِیْنَ فِی الْاَرْضِ ؕ— قَالُوْۤا اَلَمْ تَكُنْ اَرْضُ اللّٰهِ وَاسِعَةً فَتُهَاجِرُوْا فِیْهَا ؕ— فَاُولٰٓىِٕكَ مَاْوٰىهُمْ جَهَنَّمُ ؕ— وَسَآءَتْ مَصِیْرًا ۟ۙ

ಸ್ವಯಂ ಅಕ್ರಮವೆಸಗಿದವರ ಆತ್ಮಗಳನ್ನು ವಶಪಡಿಸುವಾಗ ದೇವದೂತರುಗಳು ಕೇಳುವರು: “ನೀವು ಯಾವ ಸ್ಥಿತಿಯಲ್ಲಿದ್ದಿರಿ?” ಅವರು ಹೇಳುವರು: “ನಾವು ಊರಿನಲ್ಲಿ ದಬ್ಬಾಳಿಕೆಗೆ ಗುರಿಯಾಗಿ ಬದುಕುತ್ತಿದ್ದೆವು.” ದೇವದೂತರುಗಳು ಕೇಳುವರು: “ಅಲ್ಲಾಹನ ಭೂಮಿ ವಿಶಾಲವಾಗಿತ್ತಲ್ಲವೇ? ನಿಮಗೆ ನಿಮ್ಮ ಊರನ್ನು ತ್ಯಜಿಸಿ ವಲಸೆ ಹೋಗಬಹುದಿತ್ತಲ್ಲವೇ?” ಅಂತಹವರಿಗೆ ನರಕಾಗ್ನಿಯೇ ವಾಸಸ್ಥಳವಾಗಿದೆ. ಅದು ಬಹಳ ಕೆಟ್ಟ ಗಮ್ಯಸ್ಥಾನ! info
التفاسير:

external-link copy
98 : 4

اِلَّا الْمُسْتَضْعَفِیْنَ مِنَ الرِّجَالِ وَالنِّسَآءِ وَالْوِلْدَانِ لَا یَسْتَطِیْعُوْنَ حِیْلَةً وَّلَا یَهْتَدُوْنَ سَبِیْلًا ۟ۙ

ಬೇರೆ ಯಾವ ಉಪಾಯವೂ ಇಲ್ಲದೆ (ದಬ್ಬಾಳಿಕೆಯಿಂದ) ಪಾರಾಗುವ ಮಾರ್ಗವನ್ನೂ ತಿಳಿಯದೆ, ದಬ್ಬಾಳಿಕೆಗೆ ಗುರಿಯಾಗಿ ಬದುಕುತ್ತಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳು ಇದರಿಂದ ಹೊರತಾಗಿದ್ದಾರೆ. info
التفاسير:

external-link copy
99 : 4

فَاُولٰٓىِٕكَ عَسَی اللّٰهُ اَنْ یَّعْفُوَ عَنْهُمْ ؕ— وَكَانَ اللّٰهُ عَفُوًّا غَفُوْرًا ۟

ಅವರನ್ನು ಅಲ್ಲಾಹು ಮನ್ನಿಸಲೂ ಬಹುದು. ಅಲ್ಲಾಹು ಮನ್ನಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
100 : 4

وَمَنْ یُّهَاجِرْ فِیْ سَبِیْلِ اللّٰهِ یَجِدْ فِی الْاَرْضِ مُرٰغَمًا كَثِیْرًا وَّسَعَةً ؕ— وَمَنْ یَّخْرُجْ مِنْ بَیْتِهٖ مُهَاجِرًا اِلَی اللّٰهِ وَرَسُوْلِهٖ ثُمَّ یُدْرِكْهُ الْمَوْتُ فَقَدْ وَقَعَ اَجْرُهٗ عَلَی اللّٰهِ ؕ— وَكَانَ اللّٰهُ غَفُوْرًا رَّحِیْمًا ۟۠

ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡುವವನು ಭೂಮಿಯಲ್ಲಿ ಅನೇಕ ಆಶ್ರಯಗಳನ್ನು ಮತ್ತು ಜೀವನ ವೈಶಾಲ್ಯತೆಗಳನ್ನು ಕಾಣುವನು. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಬಳಿಗೆ ವಲಸೆ (ಹಿಜ್ರ) ಮಾಡಲು ಮನೆಯಿಂದ ಹೊರಡುತ್ತಾನೋ—ನಂತರ (ದಾರಿ ಮಧ್ಯೆ) ಸಾವು ಅವನನ್ನು ಅಪ್ಪಿಕೊಂಡರೂ ಸಹ—ಅವನ ಪ್ರತಿಫಲವು ಅಲ್ಲಾಹನ ಬಳಿ ಖಾತ್ರಿಯಾಗಿ ಬಿಟ್ಟಿತು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
101 : 4

وَاِذَا ضَرَبْتُمْ فِی الْاَرْضِ فَلَیْسَ عَلَیْكُمْ جُنَاحٌ اَنْ تَقْصُرُوْا مِنَ الصَّلٰوةِ ۖۗ— اِنْ خِفْتُمْ اَنْ یَّفْتِنَكُمُ الَّذِیْنَ كَفَرُوْا ؕ— اِنَّ الْكٰفِرِیْنَ كَانُوْا لَكُمْ عَدُوًّا مُّبِیْنًا ۟

ನೀವು ಭೂಮಿಯಲ್ಲಿ ಪ್ರಯಾಣ ಮಾಡುವಾಗ ಸತ್ಯನಿಷೇಧಿಗಳು ನಿಮಗೆ ತೊಂದರೆ ಕೊಡುವರೆಂಬ ಭಯವಿದ್ದರೆ, ನಮಾಝನ್ನು ಕುಗ್ಗಿಸಿ (ಎರಡು ರಕಅತ್‌ಗಳಾಗಿ) ನಿರ್ವಹಿಸುವುದರಲ್ಲಿ ನಿಮಗೆ ದೋಷವಿಲ್ಲ.[1] ನಿಶ್ಚಯವಾಗಿಯೂ ಸತ್ಯನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ. info

[1] ಪ್ರಯಾಣದ ಸಂದರ್ಭದಲ್ಲಿ ನಮಾಝನ್ನು ಕುಗ್ಗಿಸಿ ನಿರ್ವಹಿಸಲು ಅನುಮತಿಯಿದೆ. ಕುಗ್ಗಿಸುವುದು ಎಂದರೆ ಝುಹರ್, ಅಸರ್ ಮತ್ತು ಇಶಾ ನಮಾಝ್‌ಗಳನ್ನು ಎರಡು ರಕಅತ್‌ಗಳಾಗಿ ನಿರ್ವಹಿಸುವುದು. ಮಗ್ರಿಬ್ ನಮಾಝನ್ನು ಕುಗ್ಗಿಸಬಾರದು.

التفاسير: