Translation of the Meanings of the Noble Qur'an - Kannada translation - Hamza Butur

Page Number:close

external-link copy
3 : 5

حُرِّمَتْ عَلَیْكُمُ الْمَیْتَةُ وَالدَّمُ وَلَحْمُ الْخِنْزِیْرِ وَمَاۤ اُهِلَّ لِغَیْرِ اللّٰهِ بِهٖ وَالْمُنْخَنِقَةُ وَالْمَوْقُوْذَةُ وَالْمُتَرَدِّیَةُ وَالنَّطِیْحَةُ وَمَاۤ اَكَلَ السَّبُعُ اِلَّا مَا ذَكَّیْتُمْ ۫— وَمَا ذُبِحَ عَلَی النُّصُبِ وَاَنْ تَسْتَقْسِمُوْا بِالْاَزْلَامِ ؕ— ذٰلِكُمْ فِسْقٌ ؕ— اَلْیَوْمَ یَىِٕسَ الَّذِیْنَ كَفَرُوْا مِنْ دِیْنِكُمْ فَلَا تَخْشَوْهُمْ وَاخْشَوْنِ ؕ— اَلْیَوْمَ اَكْمَلْتُ لَكُمْ دِیْنَكُمْ وَاَتْمَمْتُ عَلَیْكُمْ نِعْمَتِیْ وَرَضِیْتُ لَكُمُ الْاِسْلَامَ دِیْنًا ؕ— فَمَنِ اضْطُرَّ فِیْ مَخْمَصَةٍ غَیْرَ مُتَجَانِفٍ لِّاِثْمٍ ۙ— فَاِنَّ اللّٰهَ غَفُوْرٌ رَّحِیْمٌ ۟

ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರಿಗೆ ಕೊಯ್ಯಲಾದವುಗಳನ್ನು ನಿಮಗೆ ನಿಷೇಧಿಸಲಾಗಿದೆ. ಹಾಗೆಯೇ, ಕತ್ತು ಹಿಸುಕಿ ಸಾಯಿಸಲಾದ, ಬಲವಾದ ಪ್ರಹಾರದಿಂದ ಸತ್ತ, ಎತ್ತರದಿಂದ ಬಿದ್ದು ಸತ್ತ, ಕೊಂಬಿನಿಂದ ತಿವಿತಕ್ಕೊಳಗಾಗಿ ಸತ್ತ, ಕಾಡುಪ್ರಾಣಿಗಳು ಹರಿದು ತಿಂದ ಪ್ರಾಣಿಗಳನ್ನು ನಿಮಗೆ ನಿಷೇಧಿಸಲಾಗಿದೆ. ಆದರೆ (ಸಾಯುವ ಮೊದಲೇ) ನೀವು ಕತ್ತು ಕೊಯ್ದ (ದಿಬ್ಹ ಮಾಡಿದ) ಪ್ರಾಣಿಗಳನ್ನು ಇದರಿಂದ ಹೊರತುಪಡಿಸಲಾಗಿದೆ. ಅದೇ ರೀತಿ, ವಿಗ್ರಹಗಳ ಮುಂದೆ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು (ನಿಮಗೆ ನಿಷೇಧಿಸಲಾಗಿದೆ). ಇವೆಲ್ಲವೂ ಕೆಟ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧರ್ಮದ ಬಗ್ಗೆ ಹತಾಶರಾಗಿದ್ದಾರೆ. ಆದ್ದರಿಂದ ನೀವು ಅವರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. ಹಸಿವು ತಡೆಯಲಾಗದೆ, ನಿಷೇಧಿತ ವಸ್ತುಗಳನ್ನು ತಿನ್ನಲು ನಿರ್ಬಂಧಿತನಾದವನು ಯಾರೋ—ಅವನು ಪಾಪಕ್ಕೆ ವಾಲುವವನಲ್ಲದಿದ್ದರೆ (ಪಾಪ ಮಾಡುವ ಉದ್ದೇಶವನ್ನು ಹೊಂದಿಲ್ಲದಿದ್ದರೆ) ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
4 : 5

یَسْـَٔلُوْنَكَ مَاذَاۤ اُحِلَّ لَهُمْ ؕ— قُلْ اُحِلَّ لَكُمُ الطَّیِّبٰتُ ۙ— وَمَا عَلَّمْتُمْ مِّنَ الْجَوَارِحِ مُكَلِّبِیْنَ تُعَلِّمُوْنَهُنَّ مِمَّا عَلَّمَكُمُ اللّٰهُ ؗ— فَكُلُوْا مِمَّاۤ اَمْسَكْنَ عَلَیْكُمْ وَاذْكُرُوا اسْمَ اللّٰهِ عَلَیْهِ ۪— وَاتَّقُوا اللّٰهَ ؕ— اِنَّ اللّٰهَ سَرِیْعُ الْحِسَابِ ۟

ಅವರಿಗೆ ಏನೆಲ್ಲಾ ಅನುಮತಿಸಲಾಗಿವೆಯೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ಎಲ್ಲಾ ಉತ್ತಮ ವಸ್ತುಗಳನ್ನು ನಿಮಗೆ ಅನುಮತಿಸಲಾಗಿದೆ. ಅಲ್ಲಾಹು ನಿಮಗೆ ಕಲಿಸಿಕೊಟ್ಟ ರೀತಿಯಲ್ಲಿ ನೀವು ತರಬೇತಿ ನೀಡಿದ ಬೇಟೆ ಪ್ರಾಣಿಗಳು, ನೀವು ತರಬೇತಿ ನೀಡಿದಂತೆ ಬೇಟೆಯನ್ನು ಹಿಡಿದು ತಂದರೆ ಅವುಗಳನ್ನು ತಿನ್ನಿರಿ. (ಅವುಗಳನ್ನು ಬೇಟೆಗೆ ಕಳುಹಿಸುವಾಗ) ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ. info
التفاسير:

external-link copy
5 : 5

اَلْیَوْمَ اُحِلَّ لَكُمُ الطَّیِّبٰتُ ؕ— وَطَعَامُ الَّذِیْنَ اُوْتُوا الْكِتٰبَ حِلٌّ لَّكُمْ ۪— وَطَعَامُكُمْ حِلٌّ لَّهُمْ ؗ— وَالْمُحْصَنٰتُ مِنَ الْمُؤْمِنٰتِ وَالْمُحْصَنٰتُ مِنَ الَّذِیْنَ اُوْتُوا الْكِتٰبَ مِنْ قَبْلِكُمْ اِذَاۤ اٰتَیْتُمُوْهُنَّ اُجُوْرَهُنَّ مُحْصِنِیْنَ غَیْرَ مُسٰفِحِیْنَ وَلَا مُتَّخِذِیْۤ اَخْدَانٍ ؕ— وَمَنْ یَّكْفُرْ بِالْاِیْمَانِ فَقَدْ حَبِطَ عَمَلُهٗ ؗ— وَهُوَ فِی الْاٰخِرَةِ مِنَ الْخٰسِرِیْنَ ۟۠

ಇಂದು ನಿಮಗೆ ಎಲ್ಲಾ ಉತ್ತಮ ವಸ್ತುಗಳನ್ನು ಅನುಮತಿಸಲಾಗಿದೆ. ಗ್ರಂಥದವರು ತಯಾರಿಸಿದ ಆಹಾರವು ನಿಮಗೆ ಧರ್ಮಸಮ್ಮತವಾಗಿದೆ ಮತ್ತು ನೀವು ತಯಾರಿಸಿದ ಆಹಾರವು ಅವರಿಗೆ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿಗಳಲ್ಲಿ ಸೇರಿದ ಪರಿಶುದ್ಧ ಮಹಿಳೆಯರು ನಿಮಗೆ ಧರ್ಮಸಮ್ಮತವಾಗಿದ್ದಾರೆ. ಅದೇ ರೀತಿ ನಿಮಗಿಂತ ಮೊದಲು ಗ್ರಂಥ ನೀಡಲಾದವರಲ್ಲಿ ಸೇರಿದ ಪರಿಶುದ್ಧ ಮಹಿಳೆಯರು—ನೀವು ಅವರಿಗೆ ಅವರ ವಧುದಕ್ಷಿಣೆಯನ್ನು (ಮಹರ್) ನೀಡಿದರೆ—ನಿಮಗೆ ಧರ್ಮಸಮ್ಮತವಾಗಿದ್ದಾರೆ. ಆದರೆ ನೀವು ಅವರನ್ನು ವಿವಾಹವಾಗಲು ಬಯಸುವವರಾಗಿರಬೇಕು. ಅವರೊಡನೆ ವ್ಯಭಿಚಾರ ಮಾಡಲು ಅಥವಾ ರಹಸ್ಯವಾಗಿ ಪ್ರೇಮಿಸಲು ಬಯಸುವವರಾಗಿರಬಾರದು. ಯಾರು ಸತ್ಯವಿಶ್ವಾಸವನ್ನು ತಿರಸ್ಕರಿಸುತ್ತಾನೋ ಅವನ ಕರ್ಮವು ನಿಷ್ಫಲವಾಗುವುದು. ಪರಲೋಕದಲ್ಲಿ ಅವನು ನಷ್ಟಹೊಂದಿದವರಲ್ಲಿ ಸೇರಿಕೊಳ್ಳುವನು. info
التفاسير: