Übersetzung der Bedeutungen von dem heiligen Quran - Die Kannada-Übersetzung - Hamza Batur.

Nummer der Seite:close

external-link copy
6 : 11

وَمَا مِنْ دَآبَّةٍ فِی الْاَرْضِ اِلَّا عَلَی اللّٰهِ رِزْقُهَا وَیَعْلَمُ مُسْتَقَرَّهَا وَمُسْتَوْدَعَهَا ؕ— كُلٌّ فِیْ كِتٰبٍ مُّبِیْنٍ ۟

ಭೂಮಿಯಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಆಹಾರ ನೀಡುವ ಹೊಣೆ ಅಲ್ಲಾಹನದ್ದು. ಅವನು ಅವುಗಳ ವಾಸ್ತವ್ಯ ಸ್ಥಳವನ್ನು ಮತ್ತು ಅವುಗಳ ನಿಕ್ಷೇಪ ಸ್ಥಳವನ್ನು[1] ತಿಳಿಯುತ್ತಾನೆ. ಎಲ್ಲವೂ ಒಂದು ಸ್ಪಷ್ಟ ದಾಖಲೆಯಲ್ಲಿದೆ. info

[1] ವಾಸ್ತವ್ಯ ಸ್ಥಳವೆಂದರೆ ತಾಯಿಯ ಗರ್ಭ ಮತ್ತು ನಿಕ್ಷೇಪಸ್ಥಳವೆಂದರೆ ತಂದೆಯ ಬೆನ್ನುಹುರಿ ಎಂದು ಹೇಳಲಾಗಿದೆ. ಇತರ ಕೆಲವು ವ್ಯಾಖ್ಯಾನಕಾರರ ಪ್ರಕಾರ ವಾಸ್ತವ್ಯ ಸ್ಥಳವೆಂದರೆ ಪ್ರಾಣಿಗಳು ಮತ್ತು ಮನುಷ್ಯರು ವಾಸಿಸುವ ಸ್ಥಳ ಮತ್ತು ನಿಕ್ಷೇಪಸ್ಥಳವೆಂದರೆ ಅವರು ಕೊನೆಯದಾಗಿ ಸೇರುವ ಸಮಾಧಿ ಇತ್ಯಾದಿ.

التفاسير:

external-link copy
7 : 11

وَهُوَ الَّذِیْ خَلَقَ السَّمٰوٰتِ وَالْاَرْضَ فِیْ سِتَّةِ اَیَّامٍ وَّكَانَ عَرْشُهٗ عَلَی الْمَآءِ لِیَبْلُوَكُمْ اَیُّكُمْ اَحْسَنُ عَمَلًا ؕ— وَلَىِٕنْ قُلْتَ اِنَّكُمْ مَّبْعُوْثُوْنَ مِنْ بَعْدِ الْمَوْتِ لَیَقُوْلَنَّ الَّذِیْنَ كَفَرُوْۤا اِنْ هٰذَاۤ اِلَّا سِحْرٌ مُّبِیْنٌ ۟

ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅವನ ಸಿಂಹಾಸನವು ನೀರಿನ ಮೇಲಿತ್ತು. ನಿಮ್ಮಲ್ಲಿ ಯಾರು ಅತ್ಯುತ್ತಮವಾಗಿ ಕರ್ಮವೆಸಗುತ್ತಾರೆಂದು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ. ನಿಶ್ಚಯವಾಗಿಯೂ ಮರಣಾನಂತರ ನಿಮ್ಮನ್ನು ಜೀವ ನೀಡಿ ಎಬ್ಬಿಸಲಾಗುವುದು ಎಂದು ನೀವು ಹೇಳಿದರೆ ಆ ಸತ್ಯನಿಷೇಧಿಗಳು ಹೇಳುತ್ತಾರೆ: “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ.” info
التفاسير:

external-link copy
8 : 11

وَلَىِٕنْ اَخَّرْنَا عَنْهُمُ الْعَذَابَ اِلٰۤی اُمَّةٍ مَّعْدُوْدَةٍ لَّیَقُوْلُنَّ مَا یَحْبِسُهٗ ؕ— اَلَا یَوْمَ یَاْتِیْهِمْ لَیْسَ مَصْرُوْفًا عَنْهُمْ وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟۠

ನಾವು ಅವರ ಶಿಕ್ಷೆಯನ್ನು ಒಂದು ನಿಶ್ಚಿತ ಅವಧಿಯ ತನಕ ಮುಂದೂಡಿದರೆ, ಅವರು ಕೇಳುವರು: “ಅದಕ್ಕೆ ತಡೆಯಾದದ್ದು ಏನು?” ತಿಳಿಯಿರಿ! ಆ ಶಿಕ್ಷೆಯು ಅವರ ಬಳಿಗೆ ಬರುವ ದಿನ ಅದು ಅವರಿಗೆ ತಟ್ಟದಂತೆ ಅವರಿಂದ ತಿರುಗಿಸಿ ಬಿಡಲಾಗುವುದಿಲ್ಲ. ಯಾವುದನ್ನು ಅವರು ತಮಾಷೆ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿ ಬಿಡುವುದು. info
التفاسير:

external-link copy
9 : 11

وَلَىِٕنْ اَذَقْنَا الْاِنْسَانَ مِنَّا رَحْمَةً ثُمَّ نَزَعْنٰهَا مِنْهُ ۚ— اِنَّهٗ لَیَـُٔوْسٌ كَفُوْرٌ ۟

ನಾವು ಮನುಷ್ಯನಿಗೆ ನಮ್ಮ ದಯೆಯ ರುಚಿಯನ್ನು ತೋರಿಸಿ, ನಂತರ ಅದನ್ನು ಅವನಿಂದ ಹಿಂದಕ್ಕೆ ಪಡೆದರೆ, ನಿಶ್ಚಯವಾಗಿಯೂ ಅವನು ಹತಾಶನು ಮತ್ತು ಕೃತಘ್ನನಾಗುತ್ತಾನೆ. info
التفاسير:

external-link copy
10 : 11

وَلَىِٕنْ اَذَقْنٰهُ نَعْمَآءَ بَعْدَ ضَرَّآءَ مَسَّتْهُ لَیَقُوْلَنَّ ذَهَبَ السَّیِّاٰتُ عَنِّیْ ؕ— اِنَّهٗ لَفَرِحٌ فَخُوْرٌ ۟ۙ

ಅವನಿಗೆ ಕಷ್ಟ ಬಂದ ನಂತರ ನಾವು ಅವನಿಗೆ ಸುಖದ ರುಚಿಯನ್ನು ತೋರಿಸಿದರೆ, ನಿಶ್ಚಯವಾಗಿಯೂ ಅವನು ಹೇಳುತ್ತಾನೆ: “ನನ್ನ ಕಷ್ಟಗಳೆಲ್ಲವೂ ಮುಗಿದವು.” ಅವನು ಹರ್ಷೋನ್ಮಾದಿತನು ಮತ್ತು ಬಡಾಯಿಕೋರನಾಗುವನು. info
التفاسير:

external-link copy
11 : 11

اِلَّا الَّذِیْنَ صَبَرُوْا وَعَمِلُوا الصّٰلِحٰتِ ؕ— اُولٰٓىِٕكَ لَهُمْ مَّغْفِرَةٌ وَّاَجْرٌ كَبِیْرٌ ۟

ಆದರೆ ತಾಳ್ಮೆಯಿಂದಿರುವವರು ಮತ್ತು ಸತ್ಕರ್ಮವೆಸಗುವವರು ಇದಕ್ಕೆ ಹೊರತಾಗಿದ್ದಾರೆ. ಅವರಿಗೆ ಕ್ಷಮೆ ಮತ್ತು ಮಹಾ ಪ್ರತಿಫಲವಿದೆ. info
التفاسير:

external-link copy
12 : 11

فَلَعَلَّكَ تَارِكٌ بَعْضَ مَا یُوْحٰۤی اِلَیْكَ وَضَآىِٕقٌ بِهٖ صَدْرُكَ اَنْ یَّقُوْلُوْا لَوْلَاۤ اُنْزِلَ عَلَیْهِ كَنْزٌ اَوْ جَآءَ مَعَهٗ مَلَكٌ ؕ— اِنَّمَاۤ اَنْتَ نَذِیْرٌ ؕ— وَاللّٰهُ عَلٰی كُلِّ شَیْءٍ وَّكِیْلٌ ۟ؕ

“ಇವನ ಮೇಲೆ ಒಂದು ನಿಧಿಯನ್ನೇಕೆ ಇಳಿಸಲಾಗಿಲ್ಲ? ಅಥವಾ ಇವನೊಡನೆ ಒಬ್ಬ ದೇವದೂತರೇಕೆ ಬರಲಿಲ್ಲ” ಎಂಬ ಅವರ ಮಾತುಗಳನ್ನು ಕೇಳಿ ನೀವು ನಿಮಗೆ ನೀಡಲಾದ ದೇವವಾಣಿಗಳಲ್ಲಿ ಕೆಲವನ್ನು ತ್ಯಜಿಸಲೂಬಹುದು ಮತ್ತು ಅದರಿಂದ ನಿಮ್ಮ ಹೃದಯದಲ್ಲಿ ಇಕ್ಕಟ್ಟು ಅನುಭವವಾಗಲೂಬಹುದು. ಆದರೆ ನೆನಪಿಡಿ! ನೀವು ಒಬ್ಬ ಮುನ್ನೆಚ್ಚರಿಕೆಗಾರ ಮಾತ್ರ. ಅಲ್ಲಾಹು ಎಲ್ಲಾ ವಿಷಯಗಳಿಗೂ ಹೊಣೆಗಾರನಾಗಿದ್ದಾನೆ. info
التفاسير: