Übersetzung der Bedeutungen von dem heiligen Quran - Die Kannada-Übersetzung - Bashir Maisuri.

Nummer der Seite:close

external-link copy
30 : 3

یَوْمَ تَجِدُ كُلُّ نَفْسٍ مَّا عَمِلَتْ مِنْ خَیْرٍ مُّحْضَرًا ۖۚۛ— وَّمَا عَمِلَتْ مِنْ سُوْٓءٍ ۛۚ— تَوَدُّ لَوْ اَنَّ بَیْنَهَا وَبَیْنَهٗۤ اَمَدًاۢ بَعِیْدًا ؕ— وَیُحَذِّرُكُمُ اللّٰهُ نَفْسَهٗ ؕ— وَاللّٰهُ رَءُوْفٌۢ بِالْعِبَادِ ۟۠

ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡಿದ ಒಳಿತು ಮತ್ತು ಕೆಡುಕನ್ನು ತನ್ನ ಮುಂದೆ ಪ್ರತ್ಯಕ್ಷವಾಗಿ ಕಾಣಲಿರುವನು. ಆಗ ಅವನು ಆ ದಿನ ಮತ್ತು ಅವನ ದುಷ್ಕರ್ಮಗಳ ನಡುವೆ ಬಹಳಷ್ಟು ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಆಶಿಸುವನು. ಅಲ್ಲಾಹನು ತನ್ನ ಆಕ್ರೋಶದ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ಅಲ್ಲಾಹನು ತನ್ನ ದಾಸರ ಮೇಲೆ ಅಪಾರ ದಯೆಯುಳ್ಳವನಾಗಿದ್ದಾನೆ. info
التفاسير:

external-link copy
31 : 3

قُلْ اِنْ كُنْتُمْ تُحِبُّوْنَ اللّٰهَ فَاتَّبِعُوْنِیْ یُحْبِبْكُمُ اللّٰهُ وَیَغْفِرْ لَكُمْ ذُنُوْبَكُمْ ؕ— وَاللّٰهُ غَفُوْرٌ رَّحِیْمٌ ۟

ಓ ಪೈಗಂಬರರೇ ಹೇಳಿರಿ: ವಾಸ್ತವದಲ್ಲಿ ನೀವು ಅಲ್ಲಾಹನನ್ನು ಪ್ರೀತಿಸುತ್ತೀರಿ ಎಂದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹನು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
32 : 3

قُلْ اَطِیْعُوا اللّٰهَ وَالرَّسُوْلَ ۚ— فَاِنْ تَوَلَّوْا فَاِنَّ اللّٰهَ لَا یُحِبُّ الْكٰفِرِیْنَ ۟

ಹೇಳಿರಿ: 'ನೀವು ಅಲ್ಲಾಹ್ ಹಾಗೂ ಅವನ ಸಂದೇಶವಾಹಕರನ್ನು ಅನುಸರಿಸಿರಿ' ಇನ್ನು ಅವರು ವಿಮುಖರಾಗುವುದಾದರೆ ಖಂಡಿತವಾಗಿಯು ಅಲ್ಲಾಹನು ಸತ್ಯನಿಷೇಧಿಗಳನ್ನು ಪ್ರೀತಿಸುವುದಿಲ್ಲ. info
التفاسير:

external-link copy
33 : 3

اِنَّ اللّٰهَ اصْطَفٰۤی اٰدَمَ وَنُوْحًا وَّاٰلَ اِبْرٰهِیْمَ وَاٰلَ عِمْرٰنَ عَلَی الْعٰلَمِیْنَ ۟ۙ

ನಿಶ್ಚಯವಾಗಿಯು ಅಲ್ಲಾಹನು ಆದಮ್(ಅ), ನೂಹ್(ಅ), ಇಬ್ರಾಹೀಮ್(ಅ)ರ ಕುಟುಂಬ ಮತ್ತು ಇಮ್ರಾನರ ಕುಟುಂಬವನ್ನು ಸರ್ವಲೋಕದವರಿಂದ (ದೌತ್ಯಕ್ಕಾಗಿ) ಆಯ್ಕೆ ಮಾಡಿರುತ್ತಾನೆ. info
التفاسير:

external-link copy
34 : 3

ذُرِّیَّةً بَعْضُهَا مِنْ بَعْضٍ ؕ— وَاللّٰهُ سَمِیْعٌ عَلِیْمٌ ۟ۚ

ಇವರೆಲ್ಲ ಪರಸ್ಪರ ಕೆಲವರು ಇನ್ನು ಕೆಲವರ ಸಂತತಿಗಳಿಗೆ ಸೇರಿದವರಾಗಿರುವರು ಮತ್ತು ಅಲ್ಲಾಹನು ಆಲಿಸುವವನೂ, ಅರಿಯುವವನೂ ಆಗಿದ್ದಾನೆ. info
التفاسير:

external-link copy
35 : 3

اِذْ قَالَتِ امْرَاَتُ عِمْرٰنَ رَبِّ اِنِّیْ نَذَرْتُ لَكَ مَا فِیْ بَطْنِیْ مُحَرَّرًا فَتَقَبَّلْ مِنِّیْ ۚ— اِنَّكَ اَنْتَ السَّمِیْعُ الْعَلِیْمُ ۟

ಇಮ್ರಾನರ ಪತ್ನಿ ಹೀಗೆ ಪ್ರಾರ್ಥಿಸಿದ ಸಂಧರ್ಭ: ಓ ನನ್ನ ಪ್ರಭೂ, ನನ್ನ ಹೊಟ್ಟೆಯಲ್ಲಿರುವ ಶಿಶುವನ್ನು ನಿನಗಾಗಿಯೇ ಮೀಸಲಿಟ್ಟು ನಾನು ಹರಕೆ ಹೊತ್ತಿರುತ್ತೇನೆ. ನೀನದನ್ನು ನನ್ನಿಂದ ಸ್ವೀಕರಿಸು. ಖಂಡಿತವಾಗಿಯು ನೀನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿರುವೆ. info
التفاسير:

external-link copy
36 : 3

فَلَمَّا وَضَعَتْهَا قَالَتْ رَبِّ اِنِّیْ وَضَعْتُهَاۤ اُ ؕ— وَاللّٰهُ اَعْلَمُ بِمَا وَضَعَتْ ؕ— وَلَیْسَ الذَّكَرُ كَالْاُ ۚ— وَاِنِّیْ سَمَّیْتُهَا مَرْیَمَ وَاِنِّیْۤ اُعِیْذُهَا بِكَ وَذُرِّیَّتَهَا مِنَ الشَّیْطٰنِ الرَّجِیْمِ ۟

ಆಕೆ ಹೆಣ್ಣು ಮಗುವನ್ನು ಜನ್ಮ ನೀಡಿದಾಗ ಹೇಳಿದಳು: 'ನನ್ನ ಪ್ರಭು ನನಗೆ ಹೆಣ್ಣು ಮಗುವಾಗಿದೆ-ವಾಸ್ತವದಲ್ಲಿ ಅವಳು ಜನ್ಮವಿತ್ತಿರುವುದೇನೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ ಮತ್ತು ಗಂಡು ಮಗು (ಹರಕೆಗೆ ತಕ್ಕದ್ದಾಗಿತ್ತು ಏಕೆಂದರೆ ಅದು) ಹೆಣ್ಣಿನಂತೆ ದುರ್ಬಲವಾಗಿರುವುದಿಲ್ಲ. ನಿಸ್ಸಂಶಯವಾಗಿ ನಾನು ಅದರ ಹೆಸರು ಮರ್ಯಮ್ ಎಂದು ಇಟ್ಟಿರುವೆನು. ಆಕೆಯನ್ನು ಮತ್ತು ಆಕೆಯ ಸಂತತಿಗಳನ್ನೂ ಬಹಿಷ್ಕೃತ ಶೈತಾನನಿಂದ ನಿನ್ನ ಅಭಯ ಬೇಡುತ್ತೇನೆ. info
التفاسير:

external-link copy
37 : 3

فَتَقَبَّلَهَا رَبُّهَا بِقَبُوْلٍ حَسَنٍ وَّاَنْۢبَتَهَا نَبَاتًا حَسَنًا ۙ— وَّكَفَّلَهَا زَكَرِیَّا ؕ— كُلَّمَا دَخَلَ عَلَیْهَا زَكَرِیَّا الْمِحْرَابَ ۙ— وَجَدَ عِنْدَهَا رِزْقًا ۚ— قَالَ یٰمَرْیَمُ اَنّٰی لَكِ هٰذَا ؕ— قَالَتْ هُوَ مِنْ عِنْدِ اللّٰهِ ؕ— اِنَّ اللّٰهَ یَرْزُقُ مَنْ یَّشَآءُ بِغَیْرِ حِسَابٍ ۟

ಹಾಗೆಯೇ ಅವಳ ಪ್ರಭು ಆಕೆಯನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದನು ಮತ್ತು ಉತ್ತಮ ರೀತಿಯಲ್ಲಿ ಆಕೆಯ ಪೋಷಣೆಯನ್ನು ಮಾಡಿದನು ಮತ್ತು ಆಕೆಯ ಪರಿಪಾಲನೆಯ ಹೊಣೆಗಾರಿಕೆ ಝಕರಿಯ್ಯಾ(ಅ)ರಿಗೆ ವಹಿಸಿದನು. ಝಕರಿಯ್ಯಾ(ಅ) ಆಕೆಯ ಆರಾಧನೆ ಕೋಣೆಗೆ ಹೋದಾಗಲೆಲ್ಲಾ ಆಕೆಯ ಬಳಿ ಯಾವುದಾದರೂ ಆಹಾರ ಇಡಲಾಗಿರುವುದನ್ನು ಕಾಣುತ್ತಿದ್ದರು. ಒಮ್ಮೆ ಅವರು ಕೇಳಿದರು. ಓ ಮರ್ಯಮ್, ಈ ಆಹಾರವು ನಿನ್ನಲ್ಲಿಗೆ ಎಲ್ಲಿಂದ ಬಂತು? ಆಕೆ ಉತ್ತರಿಸಿದಳು 'ಇದು ಅಲ್ಲಾಹನ ಬಳಿಯಿಂದಾಗಿದೆ'. ನಿಸ್ಸಂದೇಹವಾಗಿಯು ಅಲ್ಲಾಹನು ತಾನಿಚ್ಛಿಸುವವರಿಗೆ ಲೆಕ್ಕವಿಲ್ಲದ್ದಷ್ಟು ನೀಡುತ್ತಾನೆ. info
التفاسير: