Übersetzung der Bedeutungen von dem heiligen Quran - Die Kannada-Übersetzung - Bashir Maisuri.

Nummer der Seite:close

external-link copy
65 : 19

رَبُّ السَّمٰوٰتِ وَالْاَرْضِ وَمَا بَیْنَهُمَا فَاعْبُدْهُ وَاصْطَبِرْ لِعِبَادَتِهٖ ؕ— هَلْ تَعْلَمُ لَهٗ سَمِیًّا ۟۠

ಅವನೇ ಆಕಾಶಗಳ ಮತ್ತು ಭೂಮಿಯ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳ ಪ್ರಭು. ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ಸ್ಥಿರವಾಗಿರಿ. ಗುಣನಾಮಗಳಲ್ಲಿ ಅವನಿಗೆ ಸರಿಸಾಟಿಯಾದ ಮತ್ತೊಬ್ಬನು ಇರುವುದಾಗಿ ನೀವು ಬಲ್ಲಿರಾ? info
التفاسير:

external-link copy
66 : 19

وَیَقُوْلُ الْاِنْسَانُ ءَاِذَا مَا مِتُّ لَسَوْفَ اُخْرَجُ حَیًّا ۟

ಮರಣ ಹೊಂದಿದ ಬಳಿಕ ನಾನು ಜೀವಂತವಾಗಿ ಹೊರ ತರಲ್ಪಡುವನೇ? ಎಂದು ಮಾನವನು ಕೇಳುತ್ತಾನೆ. info
التفاسير:

external-link copy
67 : 19

اَوَلَا یَذْكُرُ الْاِنْسَانُ اَنَّا خَلَقْنٰهُ مِنْ قَبْلُ وَلَمْ یَكُ شَیْـًٔا ۟

ಮನುಷ್ಯನು ಇದಕ್ಕೆ ಮೊದಲು ಏನೂ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೇವೆಂಬುದನ್ನು ನೆನಪಿಸಿಕೊಳ್ಳುವುದಿಲ್ಲವೇ? info
التفاسير:

external-link copy
68 : 19

فَوَرَبِّكَ لَنَحْشُرَنَّهُمْ وَالشَّیٰطِیْنَ ثُمَّ لَنُحْضِرَنَّهُمْ حَوْلَ جَهَنَّمَ جِثِیًّا ۟ۚ

ನಿಮ್ಮ ಪ್ರಭುವಿನಾಣೆ! ಖಂಡಿತವಾಗಿಯು ನಾವು ಸತ್ಯನಿಷೇಧಿಗಳನ್ನು ಹಾಗೂ ಶೈತಾನರನ್ನು ಒಟ್ಟು ಸೇರಿಸಿ ತದನಂತರ ಅವರೆಲ್ಲರನ್ನೂ ನರಕದ ಸುತ್ತಮುತ್ತಲೂ ಮೊಣಕಾಲೂರಿದ ಸ್ಥಿತಿಯಲ್ಲಿ ಹಾಜರುಗೊಳಿಸಲಿದ್ದೇವೆ. info
التفاسير:

external-link copy
69 : 19

ثُمَّ لَنَنْزِعَنَّ مِنْ كُلِّ شِیْعَةٍ اَیُّهُمْ اَشَدُّ عَلَی الرَّحْمٰنِ عِتِیًّا ۟ۚ

ಅನಂತರ ನಾವು ಎಲ್ಲಾ ಗುಂಪುಗಳಿAದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಅತ್ಯಧಿಕ ಧಿಕ್ಕಾರ ತೋರಿದವರನ್ನು ಖಂಡಿತವಾಗಿ ಎಳೆದು ಬೇರ್ಪಡಿಸುವೆವು. info
التفاسير:

external-link copy
70 : 19

ثُمَّ لَنَحْنُ اَعْلَمُ بِالَّذِیْنَ هُمْ اَوْلٰی بِهَا صِلِیًّا ۟

ತರುವಾಯ ನರಕಾಗ್ನಿಯಲ್ಲಿ ಪ್ರವೇಶಿಸಲು ಅತ್ಯಂತ ಅರ್ಹರು ಯಾರೆಂಬುದನ್ನು ನಾವು ಚೆನ್ನಾಗಿ ಬಲ್ಲೆವು. info
التفاسير:

external-link copy
71 : 19

وَاِنْ مِّنْكُمْ اِلَّا وَارِدُهَا ۚ— كَانَ عَلٰی رَبِّكَ حَتْمًا مَّقْضِیًّا ۟ۚ

ನಿಮ್ಮ ಪೈಕಿ ನರಕವನ್ನು ಹಾದು ಹೋಗದವರು ಯಾರು ಇಲ್ಲ ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ ನಿರ್ಧರಿತ ಸಂಗತಿಯಾಗಿದೆ. info
التفاسير:

external-link copy
72 : 19

ثُمَّ نُنَجِّی الَّذِیْنَ اتَّقَوْا وَّنَذَرُ الظّٰلِمِیْنَ فِیْهَا جِثِیًّا ۟

ನಂತರ ನಾವು ಭಯ ಭಕ್ತಿಯನ್ನಿರಿಸಿಕೊಂಡವರನ್ನು ರಕ್ಷಿಸುವೆವು ಹಾಗೂ ಅಕ್ರಮಿಗಳನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು. info
التفاسير:

external-link copy
73 : 19

وَاِذَا تُتْلٰی عَلَیْهِمْ اٰیٰتُنَا بَیِّنٰتٍ قَالَ الَّذِیْنَ كَفَرُوْا لِلَّذِیْنَ اٰمَنُوْۤا ۙ— اَیُّ الْفَرِیْقَیْنِ خَیْرٌ مَّقَامًا وَّاَحْسَنُ نَدِیًّا ۟

ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಂದಿಗೆ ನಮ್ಮೆರಡು ಗುಂಪುಗಳಲ್ಲಿ ಯಾರ ಸ್ಥಾನವು ಉನ್ನತವಾಗಿದೆ ಹಾಗೂ ಯಾರ ಸಭೆಯು ವೈಭವಪೂರ್ಣವಾಗಿದೆ ಎಂದು ಕೇಳುತ್ತಾರೆ. info
التفاسير:

external-link copy
74 : 19

وَكَمْ اَهْلَكْنَا قَبْلَهُمْ مِّنْ قَرْنٍ هُمْ اَحْسَنُ اَثَاثًا وَّرِﺋْﻴًﺎ ۟

(ವಸ್ತುತಃ) ಇವರಿಗಿಂತ ಮೊದಲು ಸುಖ ಸವಲತ್ತುಗಳಲ್ಲೂ, ಆಡಂಬರಗಳಲ್ಲೂ ಇವರಿಗಿಂತ ಉನ್ನತರಾಗಿದ್ದ ಅದೆಷ್ಟೋ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ. info
التفاسير:

external-link copy
75 : 19

قُلْ مَنْ كَانَ فِی الضَّلٰلَةِ فَلْیَمْدُدْ لَهُ الرَّحْمٰنُ مَدًّا ۚ۬— حَتّٰۤی اِذَا رَاَوْا مَا یُوْعَدُوْنَ اِمَّا الْعَذَابَ وَاِمَّا السَّاعَةَ ؕ۬— فَسَیَعْلَمُوْنَ مَنْ هُوَ شَرٌّ مَّكَانًا وَّاَضْعَفُ جُنْدًا ۟

(ಇವರೊಡನೆ) ಹೇಳಿರಿ: ಯಾರು ಪಥಭ್ರಷ್ಟತೆಯಲ್ಲಿರುತ್ತಾರೋ ಅವರೊಡನೆ ಮಾಡಲಾಗುತ್ತಿರುವ ವಾಗ್ದಾನ ಅವರು ಕಾಣುವ ತನಕ. ಅವರಿಗೆ ಪರಮ ದಯಾಮಯನು ದೀರ್ಘ ಕಾಲಾವಕಾಶವನ್ನು ನೀಡುತ್ತಾನೆ. ಅದು ಯಾತನೆಯಾಗಿರಲಿ ಅಥವಾ ಅಂತ್ಯಕಾಲವಾಗಿರಲಿ ಆಗ ಅವರು ಯಾರು ನಿಕೃಷ್ಟ ಸ್ಥಾನದವರು ಹಾಗೂ ಯಾರ ಸಂಖ್ಯಾ ಬಲವು ಅತ್ಯಂತ ದುರ್ಬಲ ಎಂಬುದನ್ನು ಅರಿತುಕೊಳ್ಳುವರು. info
التفاسير:

external-link copy
76 : 19

وَیَزِیْدُ اللّٰهُ الَّذِیْنَ اهْتَدَوْا هُدًی ؕ— وَالْبٰقِیٰتُ الصّٰلِحٰتُ خَیْرٌ عِنْدَ رَبِّكَ ثَوَابًا وَّخَیْرٌ مَّرَدًّا ۟

ಸನ್ಮಾರ್ಗ ಪಡೆದವರಿಗೆ ಅಲ್ಲಾಹನು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಉತ್ತಮವೂ ಹಾಗೂ ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ. info
التفاسير: