Übersetzung der Bedeutungen von dem heiligen Quran - Die Kannada-Übersetzung - Bashir Maisuri.

Nummer der Seite:close

external-link copy
52 : 19

وَنَادَیْنٰهُ مِنْ جَانِبِ الطُّوْرِ الْاَیْمَنِ وَقَرَّبْنٰهُ نَجِیًّا ۟

ನಾವು ಅವರನ್ನು ತೂರ್ ಪರ್ವತದ ಬಲಗಡೆಯಿಂದ ಕೂಗಿ ಕರೆದೆವು ಹಾಗೂ ರಹಸ್ಯ ಸಂಭಾಷಣೆಯ ಮೂಲಕ ನಾವು ಅವರಿಗೆ ಸಾಮೀಪ್ಯ ನೀಡಿದೆವು. info
التفاسير:

external-link copy
53 : 19

وَوَهَبْنَا لَهٗ مِنْ رَّحْمَتِنَاۤ اَخَاهُ هٰرُوْنَ نَبِیًّا ۟

ಮತ್ತು ನಮ್ಮ ಕೃಪೆಯಿಂದ ಅವರ ಸಹೋದರ ಹಾರೂನರನ್ನು ಪೈಗಂಬರರನ್ನಾಗಿ ಮಾಡಿ ಅವರಿಗೆ ನೆರವು ನೀಡಿದೆವು. info
التفاسير:

external-link copy
54 : 19

وَاذْكُرْ فِی الْكِتٰبِ اِسْمٰعِیْلَ ؗ— اِنَّهٗ كَانَ صَادِقَ الْوَعْدِ وَكَانَ رَسُوْلًا نَّبِیًّا ۟ۚ

ನೀವು ಈ ಗ್ರಂಥದಲ್ಲಿ ಇಸ್ಮಾಯೀಲ್‌ರವರ ವೃತ್ತಾಂತವನ್ನು ಪ್ರಸ್ತಾಪಿಸಿರಿ. ಅವರು ವಚನ ಪಾಲಕರಾಗಿದ್ದರು ಮತ್ತು ಪೈಗಂಬರರು ಹಾಗೂ ರಸೂಲರು ಆಗಿದ್ದರು. info
التفاسير:

external-link copy
55 : 19

وَكَانَ یَاْمُرُ اَهْلَهٗ بِالصَّلٰوةِ وَالزَّكٰوةِ ۪— وَكَانَ عِنْدَ رَبِّهٖ مَرْضِیًّا ۟

ಅವರು ತಮ್ಮ ಮನೆಯವರಿಗೆ ನಮಾಝ್ ಹಗೂ ಝಕಾತ್‌ನ ಆದೇಶ ನೀಡುತ್ತಿದ್ದರು ಮತ್ತು ಅವರು ತಮ್ಮ ಪ್ರಭುವಿನ ಸಂತೃಪ್ತಿಗೆ ಪಾತ್ರರಾಗಿದ್ದರು. info
التفاسير:

external-link copy
56 : 19

وَاذْكُرْ فِی الْكِتٰبِ اِدْرِیْسَ ؗ— اِنَّهٗ كَانَ صِدِّیْقًا نَّبِیًّا ۟ۗۙ

ನೀವು ಈ ಗ್ರಂಥದಲ್ಲಿ ಇದ್‌ರೀಸ್‌ರವರ ಕುರಿತು ಪ್ರಸ್ತಾಪಿಸಿರಿ, ಅವರು ಮಹಾ ಸತ್ಯಸಂಧ ಪೈಗಂಬರರಾಗಿದ್ದರು. info
التفاسير:

external-link copy
57 : 19

وَّرَفَعْنٰهُ مَكَانًا عَلِیًّا ۟

ಮತ್ತು ನಾವು ಅವರನ್ನು ಉನ್ನತ ಸ್ಥಾನಕ್ಕೇರಿಸಿದೆವು. info
التفاسير:

external-link copy
58 : 19

اُولٰٓىِٕكَ الَّذِیْنَ اَنْعَمَ اللّٰهُ عَلَیْهِمْ مِّنَ النَّبِیّٖنَ مِنْ ذُرِّیَّةِ اٰدَمَ ۗ— وَمِمَّنْ حَمَلْنَا مَعَ نُوْحٍ ؗ— وَّمِنْ ذُرِّیَّةِ اِبْرٰهِیْمَ وَاِسْرَآءِیْلَ ؗ— وَمِمَّنْ هَدَیْنَا وَاجْتَبَیْنَا ؕ— اِذَا تُتْلٰی عَلَیْهِمْ اٰیٰتُ الرَّحْمٰنِ خَرُّوْا سُجَّدًا وَّبُكِیًّا ۟

ಅವರೆಲ್ಲರೂ ಅಲ್ಲಾಹನು ಅನುಗ್ರಹಿಸಿದ ಪೈಗಂಬರರÀ ಪೈಕಿಯಾಗಿದ್ದಾರೆ. ಆದಮರ ಸಂತಾನದಿAದಲೂ ನಾವು ನೂಹರ ಜೊತೆ ಹಡಗಿನಲ್ಲಿ ಸಾಗಿಸಿದವರ ಸಂತಾನದಿAದಲೂ ಇಬ್ರಾಹೀಮರ ಮತ್ತು ಯಾಕೂಬರ ಸಂತಾನದಿAದಲೂ ನಾವು ಸನ್ಮಾರ್ಗ ದರ್ಶನ ಮಾಡಿ ಆಯ್ಕೆ ಮಾಡಿದವರಲ್ಲಾಗಿದ್ದಾರೆ. ಅವರ ಮುಂದೆ ಪರಮ ದಯಾಮಯನಾದ ಅಲ್ಲಾಹನ ಸೂಕ್ತಿಗಳನ್ನು ಓದಿ ಹೇಳಲಾದಾಗ ಅವರು ಅಳುತ್ತಾ ಸಾಷ್ಟಾಂಗವೆರಗುತ್ತಾ ನೆಲದ ಮೇಲೆ ಬೀಳುವರು. info
التفاسير:

external-link copy
59 : 19

فَخَلَفَ مِنْ بَعْدِهِمْ خَلْفٌ اَضَاعُوا الصَّلٰوةَ وَاتَّبَعُوا الشَّهَوٰتِ فَسَوْفَ یَلْقَوْنَ غَیًّا ۟ۙ

ತರುವಾಯ ಅವರ ನಂತರ ಅಯೋಗ್ಯರು ಉತ್ತರಾಧಿಕಾರಿಗಳಾದರು. ಅವರು ನಮಾಝ್ ವ್ಯರ್ಥಗೊಳಿಸಿದರು ಮತ್ತು ಸ್ವೇಚ್ಛೆಗಳನ್ನು ಅನುಸರಿಸಿದರು.ಸದ್ಯದಲ್ಲೇ ಅವರು ತಮ್ಮ ಪಥಭ್ರಷ್ಟತೆಯ ದುಷ್ಪರಿಣಾಮವನ್ನು ಕಾಣಲಿರುವರು. info
التفاسير:

external-link copy
60 : 19

اِلَّا مَنْ تَابَ وَاٰمَنَ وَعَمِلَ صَالِحًا فَاُولٰٓىِٕكَ یَدْخُلُوْنَ الْجَنَّةَ وَلَا یُظْلَمُوْنَ شَیْـًٔا ۟ۙ

. ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರು ಸ್ವರ್ಗದಲ್ಲಿ ಪ್ರವೇಶಿಸುವರು.ಮತ್ತು ಅವರು ಒಂದಿಷ್ಟೂ ಅನ್ಯಾಯಕ್ಕೊಳಗಾಗಲಾರರು. info
التفاسير:

external-link copy
61 : 19

جَنّٰتِ عَدْنِ ١لَّتِیْ وَعَدَ الرَّحْمٰنُ عِبَادَهٗ بِالْغَیْبِ ؕ— اِنَّهٗ كَانَ وَعْدُهٗ مَاْتِیًّا ۟

ಪರಮ ದಯಾಮಯನು ತನ್ನ ದಾಸರಿಗೆ ಪರೋಕ್ಷವಾಗಿ ಮಾಡಿರುವ ಶಾಶ್ವತ ಸ್ವರ್ಗೋದ್ಯಾನಗಳಿವೆ ಎಂಬ ವಾಗ್ದಾನವಾಗಿದೆ. ನಿಸ್ಸಂಶಯವಾಗಿಯೂ ಅವನ ವಾಗ್ದಾನವು ಪೂರ್ಣಗೊಂಡೇ ತೀರುವುದು. info
التفاسير:

external-link copy
62 : 19

لَا یَسْمَعُوْنَ فِیْهَا لَغْوًا اِلَّا سَلٰمًا ؕ— وَلَهُمْ رِزْقُهُمْ فِیْهَا بُكْرَةً وَّعَشِیًّا ۟

ಅವರು ಅದರಲ್ಲಿ ಶಾಂತಿಯ ಹೊರತು ಇನ್ನಾವುದೇ ವ್ಯರ್ಥ ಮಾತುಗಳನ್ನು ಕೇಳಲಾರರು. ಮತ್ತು ಅವರಿಗೆ ಅಲ್ಲಿ ಅವರ ಆಹಾರವು ಸಂಜೆ-ಮುAಜಾನೆಯಲ್ಲಿ ಸಿಗುತ್ತಲಿರುವುದು. info
التفاسير:

external-link copy
63 : 19

تِلْكَ الْجَنَّةُ الَّتِیْ نُوْرِثُ مِنْ عِبَادِنَا مَنْ كَانَ تَقِیًّا ۟

ಇದುವೇ ಆ ಸ್ವರ್ಗೋದ್ಯಾನ. ನಾವು ನಮ್ಮ ದಾಸರ ಪೈಕಿ ಭಯಭಕ್ತಿಯುಳ್ಳವರನ್ನು ಇದರ ವಾರಿಸುದಾರರನ್ನಾಗಿ ಮಾಡುವೆವು. info
التفاسير:

external-link copy
64 : 19

وَمَا نَتَنَزَّلُ اِلَّا بِاَمْرِ رَبِّكَ ۚ— لَهٗ مَا بَیْنَ اَیْدِیْنَا وَمَا خَلْفَنَا وَمَا بَیْنَ ذٰلِكَ ۚ— وَمَا كَانَ رَبُّكَ نَسِیًّا ۟ۚ

(ಓ ಪೈಗಂಬರರೇ) ನಾವು (ಮಲಕ್‌ಗಳು) ನಿಮ್ಮ ಪ್ರಭುವಿನ ಅಪ್ಪಣೆಯಿಲ್ಲದೆ ಇಳಿದು (ಭೂಮಿಗೆ) ಬರಲಾರೆವು. ನಮ್ಮ ಮುಂದಿರುವ ಮತ್ತು ನಮ್ಮ ಹಿಂದಿರುವ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳು ಅವನ (ಅಲ್ಲಾಹನ) ಒಡೆತನದಲ್ಲಿದೆ. ನಿಮ್ಮ ಪ್ರಭು ಮರೆಯುವವನಲ್ಲ. info
التفاسير: