Prijevod značenja časnog Kur'ana - Prijevod na kannada jezik (južno indijski jezik) - Hamza Betur

Broj stranice: 154:151 close

external-link copy
38 : 7

قَالَ ادْخُلُوْا فِیْۤ اُمَمٍ قَدْ خَلَتْ مِنْ قَبْلِكُمْ مِّنَ الْجِنِّ وَالْاِنْسِ فِی النَّارِ ؕ— كُلَّمَا دَخَلَتْ اُمَّةٌ لَّعَنَتْ اُخْتَهَا ؕ— حَتّٰۤی اِذَا ادَّارَكُوْا فِیْهَا جَمِیْعًا ۙ— قَالَتْ اُخْرٰىهُمْ لِاُوْلٰىهُمْ رَبَّنَا هٰۤؤُلَآءِ اَضَلُّوْنَا فَاٰتِهِمْ عَذَابًا ضِعْفًا مِّنَ النَّارِ ؕ۬— قَالَ لِكُلٍّ ضِعْفٌ وَّلٰكِنْ لَّا تَعْلَمُوْنَ ۟

ಅಲ್ಲಾಹು ಹೇಳುವನು: “ನಿಮಗಿಂತ ಮೊದಲು ತೀರಿಹೋದ ಜಿನ್ನ್ ಮತ್ತು ಮನುಷ್ಯರ ಸಮುದಾಯಗಳೊಂದಿಗೆ ನೀವು ಕೂಡ ನರಕವನ್ನು ಪ್ರವೇಶಿಸಿರಿ.” ಒಂದೊಂದು ಸಮುದಾಯದವರು ಅದನ್ನು ಪ್ರವೇಶಿಸುವಾಗಲೆಲ್ಲಾ ಅವರಿಗಿಂತ ಮೊದಲಿನ ಸಮುದಾಯವನ್ನು ಶಪಿಸುವರು. ಎಲ್ಲಿಯವರೆಗೆಂದರೆ, ಅವರೆಲ್ಲರೂ ಅಲ್ಲಿ ಒಟ್ಟು ಸೇರಿದಾಗ ನಂತರ ಬಂದವರು ಮೊದಲು ಬಂದವರ ಬಗ್ಗೆ ಹೇಳುವರು: “ಓ ನಮ್ಮ ಪರಿಪಾಲಕನೇ! ಇವರೇ ನಮ್ಮನ್ನು ದಾರಿ ತಪ್ಪಿಸಿದವರು. ಆದ್ದರಿಂದ ಇವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು.” ಅಲ್ಲಾಹು ಹೇಳುವನು: “ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನೀವು ತಿಳಿಯುವುದಿಲ್ಲ.” info
التفاسير:

external-link copy
39 : 7

وَقَالَتْ اُوْلٰىهُمْ لِاُخْرٰىهُمْ فَمَا كَانَ لَكُمْ عَلَیْنَا مِنْ فَضْلٍ فَذُوْقُوا الْعَذَابَ بِمَا كُنْتُمْ تَكْسِبُوْنَ ۟۠

ಮೊದಲು ಬಂದವರು ನಂತರ ಬಂದವರೊಡನೆ ಹೇಳುವರು: “ನಿಮಗೆ ನಮಗಿಂತಲೂ ದೊಡ್ಡ ಶ್ರೇಷ್ಠತೆಯೇನಿಲ್ಲ (ನಾವೆಲ್ಲರೂ ಸಮಾನರು). ಆದ್ದರಿಂದ ನೀವು ಮಾಡುತ್ತಿದ್ದ ದುಷ್ಕರ್ಮಗಳ ಶಿಕ್ಷೆಯನ್ನು ನೀವೇ ಅನುಭವಿಸಿರಿ.” info
التفاسير:

external-link copy
40 : 7

اِنَّ الَّذِیْنَ كَذَّبُوْا بِاٰیٰتِنَا وَاسْتَكْبَرُوْا عَنْهَا لَا تُفَتَّحُ لَهُمْ اَبْوَابُ السَّمَآءِ وَلَا یَدْخُلُوْنَ الْجَنَّةَ حَتّٰی یَلِجَ الْجَمَلُ فِیْ سَمِّ الْخِیَاطِ ؕ— وَكَذٰلِكَ نَجْزِی الْمُجْرِمِیْنَ ۟

ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಡಲಾಗುವುದಿಲ್ಲ.[1] ಸೂಜಿಯ ರಂಧ್ರದಲ್ಲಿ ಒಂಟೆ ಪ್ರವೇಶ ಮಾಡುವ ತನಕ ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಈ ರೀತಿ ನಾವು ಅಪರಾಧಿಗಳಿಗೆ ಪ್ರತಿಫಲ ನೀಡುವೆವು. info

[1] ಅಂದರೆ ಅವರ ಆತ್ಮಗಳು, ಅಥವಾ ಅವರು ಮಾಡಿದ ಕರ್ಮಗಳು, ಅಥವಾ ಅವರ ಪ್ರಾರ್ಥನೆಗಳಿಗೆ ಆಕಾಶದ ಬಾಗಿಲುಗಳು ತೆರೆಯುವುದಿಲ್ಲ (ಸ್ವೀಕಾರವಾಗುವುದಿಲ್ಲ) ಎಂದರ್ಥ.

التفاسير:

external-link copy
41 : 7

لَهُمْ مِّنْ جَهَنَّمَ مِهَادٌ وَّمِنْ فَوْقِهِمْ غَوَاشٍ ؕ— وَكَذٰلِكَ نَجْزِی الظّٰلِمِیْنَ ۟

ಅವರಿಗೆ ನರಕಾಗ್ನಿಯ ಹಾಸಿಗೆಯಿದೆ ಮತ್ತು ಅವರ ಮೇಲ್ಭಾಗದಲ್ಲಿ (ನರಕದ) ಹೊದಿಕೆಗಳೂ ಇವೆ. ಈ ರೀತಿ ನಾವು ಅಕ್ರಮಿಗಳಿಗೆ ಪ್ರತಿಫಲ ನೀಡುವೆವು. info
التفاسير:

external-link copy
42 : 7

وَالَّذِیْنَ اٰمَنُوْا وَعَمِلُوا الصّٰلِحٰتِ لَا نُكَلِّفُ نَفْسًا اِلَّا وُسْعَهَاۤ ؗ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕೆ ಮಿಗಿಲಾದುದನ್ನು ನಾವು ಹೊರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
43 : 7

وَنَزَعْنَا مَا فِیْ صُدُوْرِهِمْ مِّنْ غِلٍّ تَجْرِیْ مِنْ تَحْتِهِمُ الْاَنْهٰرُ ۚ— وَقَالُوا الْحَمْدُ لِلّٰهِ الَّذِیْ هَدٰىنَا لِهٰذَا ۫— وَمَا كُنَّا لِنَهْتَدِیَ لَوْلَاۤ اَنْ هَدٰىنَا اللّٰهُ ۚ— لَقَدْ جَآءَتْ رُسُلُ رَبِّنَا بِالْحَقِّ ؕ— وَنُوْدُوْۤا اَنْ تِلْكُمُ الْجَنَّةُ اُوْرِثْتُمُوْهَا بِمَا كُنْتُمْ تَعْمَلُوْنَ ۟

ನಾವು ಅವರ ಹೃದಯಗಳಲ್ಲಿರುವ ದ್ವೇಷವನ್ನು ತೆಗೆದು ಬಿಡುವೆವು. ಅವರ ತಳಭಾಗದಿಂದ ನದಿಗಳು ಹರಿಯುವುವು. ಅವರು ಹೇಳುವರು: “ಇದರ ಕಡೆಗೆ ನಮಗೆ ದಾರಿ ತೋರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹು ನಮಗೆ ದಾರಿ ತೋರಿಸದಿದ್ದರೆ ನಾವು ಸನ್ಮಾರ್ಗದಲ್ಲಿರುತ್ತಿರಲಿಲ್ಲ. ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸಂದೇಶವಾಹಕರು ಸತ್ಯದೊಂದಿಗೇ ಬಂದಿದ್ದರು.” ಆಗ ಅವರೊಡನೆ ಹೇಳಲಾಗುವುದು: “ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ.” info
التفاسير: