Prijevod značenja časnog Kur'ana - Prijevod na kannada jezik (južno indijski jezik) - Hamza Betur

ಅಲ್ -ಜಾಸಿಯ

external-link copy
1 : 45

حٰمٓ ۟ۚ

ಹಾ-ಮೀಮ್. info
التفاسير:

external-link copy
2 : 45

تَنْزِیْلُ الْكِتٰبِ مِنَ اللّٰهِ الْعَزِیْزِ الْحَكِیْمِ ۟

ಈ ಗ್ರಂಥವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದ ಅವತೀರ್ಣವಾಗಿದೆ. info
التفاسير:

external-link copy
3 : 45

اِنَّ فِی السَّمٰوٰتِ وَالْاَرْضِ لَاٰیٰتٍ لِّلْمُؤْمِنِیْنَ ۟ؕ

ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿ ಸತ್ಯವಿಶ್ವಾಸಿಗಳಿಗೆ ಅನೇಕ ದೃಷ್ಟಾಂತಗಳಿವೆ. info
التفاسير:

external-link copy
4 : 45

وَفِیْ خَلْقِكُمْ وَمَا یَبُثُّ مِنْ دَآبَّةٍ اٰیٰتٌ لِّقَوْمٍ یُّوْقِنُوْنَ ۟ۙ

ನಿಮ್ಮ ಸೃಷ್ಟಿಯಲ್ಲೂ ಮತ್ತು ಅವನು ಜೀವಿಗಳನ್ನು ಹಬ್ಬಿಸಿರುವುದರಲ್ಲೂ ದೃಢವಿಶ್ವಾಸವಿಡುವ ಜನರಿಗೆ ಅನೇಕ ದೃಷ್ಟಾಂತಗಳಿವೆ. info
التفاسير:

external-link copy
5 : 45

وَاخْتِلَافِ الَّیْلِ وَالنَّهَارِ وَمَاۤ اَنْزَلَ اللّٰهُ مِنَ السَّمَآءِ مِنْ رِّزْقٍ فَاَحْیَا بِهِ الْاَرْضَ بَعْدَ مَوْتِهَا وَتَصْرِیْفِ الرِّیٰحِ اٰیٰتٌ لِّقَوْمٍ یَّعْقِلُوْنَ ۟

ರಾತ್ರಿ-ಹಗಲುಗಳ ಬದಲಾವಣೆಯಲ್ಲಿ, ಅಲ್ಲಾಹು ಆಕಾಶದಿಂದ ಆಹಾರವನ್ನು (ಮಳೆಯನ್ನು) ಇಳಿಸಿ ತನ್ಮೂಲಕ ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವ ನೀಡುವುದರಲ್ಲಿ ಮತ್ತು ಗಾಳಿಯ ನಿಯಂತ್ರಣದಲ್ಲಿ ಆಲೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ. info
التفاسير:

external-link copy
6 : 45

تِلْكَ اٰیٰتُ اللّٰهِ نَتْلُوْهَا عَلَیْكَ بِالْحَقِّ ۚ— فَبِاَیِّ حَدِیْثٍ بَعْدَ اللّٰهِ وَاٰیٰتِهٖ یُؤْمِنُوْنَ ۟

ಇವು ಅಲ್ಲಾಹನ ವಚನಗಳಾಗಿದ್ದು, ನಾವು ಅವುಗಳನ್ನು ನಿಮಗೆ ಸತ್ಯ ಸಮೇತವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಮತ್ತು ಅವನ ವಚನಗಳ ನಂತರ ಇನ್ನು ಯಾವ ಮಾತಿನಲ್ಲಿ ಅವರು ವಿಶ್ವಾಸವಿಡುವರು? info
التفاسير:

external-link copy
7 : 45

وَیْلٌ لِّكُلِّ اَفَّاكٍ اَثِیْمٍ ۟ۙ

ಪ್ರತಿಯೊಬ್ಬ ಸುಳ್ಳುಗಾರ ಮತ್ತು ಪಾಪಿಗೆ ವಿನಾಶ ಕಾದಿದೆ. info
التفاسير:

external-link copy
8 : 45

یَّسْمَعُ اٰیٰتِ اللّٰهِ تُتْلٰی عَلَیْهِ ثُمَّ یُصِرُّ مُسْتَكْبِرًا كَاَنْ لَّمْ یَسْمَعْهَا ۚ— فَبَشِّرْهُ بِعَذَابٍ اَلِیْمٍ ۟

ತನಗೆ ಓದಿಕೊಡಲಾಗುವ ಅಲ್ಲಾಹನ ವಚನಗಳಿಗೆ ಅವನು ಕಿವಿಗೊಡುತ್ತಾನೆ. ನಂತರ ಅದನ್ನು ಕೇಳಿಯೇ ಇಲ್ಲ ಎಂಬಂತೆ ಅಹಂಕಾರದಿಂದ ಹಟತೊಟ್ಟು ನಿಲ್ಲುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ. info
التفاسير:

external-link copy
9 : 45

وَاِذَا عَلِمَ مِنْ اٰیٰتِنَا شَیْـَٔا ١تَّخَذَهَا هُزُوًا ؕ— اُولٰٓىِٕكَ لَهُمْ عَذَابٌ مُّهِیْنٌ ۟ؕ

ಅವನು ನಮ್ಮ ವಚನಗಳಿಂದ ಏನಾದರೂ ತಿಳಿದುಕೊಂಡರೆ ಅದನ್ನು ತಮಾಷೆಯಾಗಿ ಸ್ವೀಕರಿಸುತ್ತಾನೆ. ಅಂತಹ ಜನರಿಗೆ ಅವಮಾನಕರ ಶಿಕ್ಷೆಯಿದೆ. info
التفاسير:

external-link copy
10 : 45

مِنْ وَّرَآىِٕهِمْ جَهَنَّمُ ۚ— وَلَا یُغْنِیْ عَنْهُمْ مَّا كَسَبُوْا شَیْـًٔا وَّلَا مَا اتَّخَذُوْا مِنْ دُوْنِ اللّٰهِ اَوْلِیَآءَ ۚ— وَلَهُمْ عَذَابٌ عَظِیْمٌ ۟ؕ

ನರಕಾಗ್ನಿ ಅವರ ಮುಂಭಾಗದಲ್ಲೇ ಇದೆ! ಅವರು ಏನು ಸಂಪಾದಿಸಿದರೋ ಮತ್ತು ಅವರು ಅಲ್ಲಾಹನನ್ನು ಬಿಟ್ಟು ಯಾರನ್ನು ರಕ್ಷಕರನ್ನಾಗಿ ಸ್ವೀಕರಿಸಿದರೋ ಯಾವುದೂ ಅವರಿಗೆ ಪ್ರಯೋಜನ ನೀಡುವುದಿಲ್ಲ. ಅವರಿಗೆ ಕಠೋರ ಶಿಕ್ಷೆಯಿದೆ. info
التفاسير:

external-link copy
11 : 45

هٰذَا هُدًی ۚ— وَالَّذِیْنَ كَفَرُوْا بِاٰیٰتِ رَبِّهِمْ لَهُمْ عَذَابٌ مِّنْ رِّجْزٍ اَلِیْمٌ ۟۠

ಇದು ಸನ್ಮಾರ್ಗವಾಗಿದೆ. ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ನಿಷೇಧಿಸಿದವರು ಯಾರೋ ಅವರಿಗೆ ಬಹಳ ಕಠೋರವಾದ ಯಾತನಾಮಯ ಶಿಕ್ಷೆಯಿದೆ. info
التفاسير:

external-link copy
12 : 45

اَللّٰهُ الَّذِیْ سَخَّرَ لَكُمُ الْبَحْرَ لِتَجْرِیَ الْفُلْكُ فِیْهِ بِاَمْرِهٖ وَلِتَبْتَغُوْا مِنْ فَضْلِهٖ وَلَعَلَّكُمْ تَشْكُرُوْنَ ۟ۚ

ಅಲ್ಲಾಹನೇ ನಿಮಗೆ ಸಮುದ್ರವನ್ನು ಅಧೀನಗೊಳಿಸಿದವನು. ಅವನ ಅಪ್ಪಣೆಯಂತೆ ನಾವೆಗಳು ಅದರಲ್ಲಿ ಸಂಚರಿಸುವುದಕ್ಕಾಗಿ, ನೀವು ಅವನ ಔದಾರ್ಯದಿಂದ ಬೇಡಿಕೊಳ್ಳುವುದಕ್ಕಾಗಿ ಮತ್ತು ನೀವು ಕೃತಜ್ಞರಾಗುವುದಕ್ಕಾಗಿ. info
التفاسير:

external-link copy
13 : 45

وَسَخَّرَ لَكُمْ مَّا فِی السَّمٰوٰتِ وَمَا فِی الْاَرْضِ جَمِیْعًا مِّنْهُ ؕ— اِنَّ فِیْ ذٰلِكَ لَاٰیٰتٍ لِّقَوْمٍ یَّتَفَكَّرُوْنَ ۟

ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳನ್ನು ಅವನು ತನ್ನ ವತಿಯಿಂದ ನಿಮಗೆ ಅಧೀನಗೊಳಿಸಿದ್ದಾನೆ. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ. info
التفاسير: