Qurani Kərimin mənaca tərcüməsi - Kannad dilinə tərcümə - Həmzə Batur.

ಅಲ್- ಕದ್ರ್

external-link copy
1 : 97

اِنَّاۤ اَنْزَلْنٰهُ فِیْ لَیْلَةِ الْقَدْرِ ۟ۚۙ

ನಿಶ್ಚಯವಾಗಿಯೂ ನಾವು ಇದನ್ನು (ಕುರ್‌ಆನನ್ನು) ನಿರ್ಣಯದ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ.[1] info

[1] ನಿರ್ಣಯದ ರಾತ್ರಿ (ಲೈಲತುಲ್ ಕದ್ರ್) ಯಲ್ಲಿ ಪವಿತ್ರ ಕುರ್‌ಆನ್ ಅನ್ನು ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಿಂದ ಆಕಾಶದಲ್ಲಿರುವ ಬೈತುಲ್ ಇಝ್ಝತ್‌ಗೆ ಇಳಿಸಲಾಯಿತು. ಅಲ್ಲಿಂದ ಅದು 23 ವರ್ಷಗಳ ಕಾಲ ಹಂತ ಹಂತವಾಗಿ ಮತ್ತು ಸಾಂದರ್ಭಿಕವಾಗಿ ಭೂಲೋಕಕ್ಕೆ ಅವತೀರ್ಣವಾಯಿತು. ನಿರ್ಣಯದ ರಾತ್ರಿ (ಲೈಲತುಲ್ ಕದ್ರ್) ರಮದಾನ್ ತಿಂಗಳ ಕೊನೆಯ ಹತ್ತರ ಬೆಸ ರಾತ್ರಿಗಳಲ್ಲಿ ಬರುತ್ತದೆ.

التفاسير:

external-link copy
2 : 97

وَمَاۤ اَدْرٰىكَ مَا لَیْلَةُ الْقَدْرِ ۟ؕ

ನಿರ್ಣಯದ ರಾತ್ರಿ ಏನೆಂದು ನಿಮಗೇನು ಗೊತ್ತು? info
التفاسير:

external-link copy
3 : 97

لَیْلَةُ الْقَدْرِ ۙ۬— خَیْرٌ مِّنْ اَلْفِ شَهْرٍ ۟ؕؔ

ನಿರ್ಣಯದ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ. info
التفاسير:

external-link copy
4 : 97

تَنَزَّلُ الْمَلٰٓىِٕكَةُ وَالرُّوْحُ فِیْهَا بِاِذْنِ رَبِّهِمْ ۚ— مِنْ كُلِّ اَمْرٍ ۟ۙۛ

ಆ ರಾತ್ರಿಯಲ್ಲಿ ಎಲ್ಲಾ ಕಾರ್ಯಗಳನ್ನು ಜಾರಿಗೊಳಿಸುವುದಕ್ಕಾಗಿ ದೇವದೂತರು‍ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಪರಿಪಾಲಕನ (ಅಲ್ಲಾಹನ) ಅಪ್ಪಣೆಯೊಂದಿಗೆ ಇಳಿದು ಬರುವರು. info
التفاسير:

external-link copy
5 : 97

سَلٰمٌ ۛ۫— هِیَ حَتّٰی مَطْلَعِ الْفَجْرِ ۟۠

ಆ ರಾತ್ರಿಯು ಪ್ರಭಾತೋದಯದ ತನಕ ಸಂಪೂರ್ಣ ಶಾಂತಿಯುತವಾಗಿರುವುದು. info
التفاسير: