Qurani Kərimin mənaca tərcüməsi - Kannad dilinə tərcümə - Bəşir Meysuri.

Səhifənin rəqəmi:close

external-link copy
106 : 4

وَّاسْتَغْفِرِ اللّٰهَ ؕ— اِنَّ اللّٰهَ كَانَ غَفُوْرًا رَّحِیْمًا ۟ۚ

ಮತ್ತು ಅಲ್ಲಾಹನಲ್ಲಿ ಪಾಪವಿಮೋಚನೆಯನ್ನು ಬೇಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
107 : 4

وَلَا تُجَادِلْ عَنِ الَّذِیْنَ یَخْتَانُوْنَ اَنْفُسَهُمْ ؕ— اِنَّ اللّٰهَ لَا یُحِبُّ مَنْ كَانَ خَوَّانًا اَثِیْمًا ۟ۚۙ

ಆತ್ಮವಂಚನೆ ಮಾಡುವವರ ಪರವಾಗಿ ನೀವು ವಾದಿಸಬೇಡಿರಿ. ಖಂಡಿತವಾಗಿಯು ಮಹಾ ವಂಚಕ ಮತ್ತು ಪಾಪಿಯಾಗಿರುವ ಯಾರನ್ನೂ ಅಲ್ಲಾಹನು ಮೆಚ್ಚುವುದಿಲ್ಲ. info
التفاسير:

external-link copy
108 : 4

یَّسْتَخْفُوْنَ مِنَ النَّاسِ وَلَا یَسْتَخْفُوْنَ مِنَ اللّٰهِ وَهُوَ مَعَهُمْ اِذْ یُبَیِّتُوْنَ مَا لَا یَرْضٰی مِنَ الْقَوْلِ ؕ— وَكَانَ اللّٰهُ بِمَا یَعْمَلُوْنَ مُحِیْطًا ۟

ಅವರು ಜನರಿಂದ ಮರೆಯಾಗಿಬಿಡುತ್ತಾರೆ. (ಆದರೆ) ಅವರು ಅಲ್ಲಾಹುವಿನಿಂದ ಮರೆಯಾಗಿರಲು ಸಾಧ್ಯವಿಲ್ಲ. ಅಲ್ಲಾಹನು ಇಷ್ಟಪಡದ ಮಾತುಗಳ ಕುರಿತು ಅವರು ರಾತ್ರಿ ವೇಳೆ ಗೂಢಾಲೋಚನೆ ನಡೆಸುತ್ತಿರುವಾಗಲೂ ಅವರೊಂದಿಗೆ ಅಲ್ಲಾಹನಿರುತ್ತಾನೆ. ಅವರು ಮಾಡುತ್ತಿರುವ ಸಕಲ ಕರ್ಮಗಳನ್ನು ಅವನು ಆವರಿಸುವವನಾಗಿದ್ದಾನೆ. info
التفاسير:

external-link copy
109 : 4

هٰۤاَنْتُمْ هٰۤؤُلَآءِ جَدَلْتُمْ عَنْهُمْ فِی الْحَیٰوةِ الدُّنْیَا ۫— فَمَنْ یُّجَادِلُ اللّٰهَ عَنْهُمْ یَوْمَ الْقِیٰمَةِ اَمْ مَّنْ یَّكُوْنُ عَلَیْهِمْ وَكِیْلًا ۟

ಐಹಿಕ ಜೀವನದಲ್ಲಿ ನೀವು ಅವರ ಪರವಾಗಿ ವಾದಿಸಿದಿರಿ. ಆದರೆ ಪುನರುತ್ಥಾನದ ದಿನದಂದು ಅವರ ಪರವಾಗಿ ಅಲ್ಲಾಹನ ಮುಂದೆ ವಾದಿಸುವವನಾರಿದ್ದಾನೆ. ಮತ್ತು ಅವರ ರಕ್ಷಕನಾಗಿ ಯಾರಿದ್ದಾನೆ? info
التفاسير:

external-link copy
110 : 4

وَمَنْ یَّعْمَلْ سُوْٓءًا اَوْ یَظْلِمْ نَفْسَهٗ ثُمَّ یَسْتَغْفِرِ اللّٰهَ یَجِدِ اللّٰهَ غَفُوْرًا رَّحِیْمًا ۟

ಯಾವಾತನು ಕೆಡುಕನ್ನು ಮಾಡಿದರೆ ಅಥವಾ ತನ್ನ ಮೇಲೆಯೇ ಅಕ್ರಮವೆಸಗಿದರೆ ಅನಂತರ ಅಲ್ಲಾಹನೊಂದಿಗೆ ಪಾಪವಿಮೋಚನೆಯನ್ನು ಬೇಡಿದರೆ ಅವನು ಅಲ್ಲಾಹನನ್ನು ಕ್ಷಮಿಸುವವನನ್ನಾಗಿ ಮತ್ತು ಕರುಣಾನಿಧಿಯನ್ನಾಗಿ ಕಾಣುವನು. info
التفاسير:

external-link copy
111 : 4

وَمَنْ یَّكْسِبْ اِثْمًا فَاِنَّمَا یَكْسِبُهٗ عَلٰی نَفْسِهٖ ؕ— وَكَانَ اللّٰهُ عَلِیْمًا حَكِیْمًا ۟

ಯಾವಾತನು ಪಾಪ ಮಾಡುತ್ತಾನೋ ಅದರ ದುಷ್ಪರಿಣಾಮವೂ ಅವನ ಮೆಲೆಯೇ ಇರುವುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير:

external-link copy
112 : 4

وَمَنْ یَّكْسِبْ خَطِیْٓئَةً اَوْ اِثْمًا ثُمَّ یَرْمِ بِهٖ بَرِیْٓـًٔا فَقَدِ احْتَمَلَ بُهْتَانًا وَّاِثْمًا مُّبِیْنًا ۟۠

ಯಾರಾದರೂ ತಪ್ಪು ಅಥವಾ ಪಾಪ ಮಾಡಿ, ಅನಂತರ ಅದನ್ನು ಓರ್ವ ನಿರಪರಾಧಿಯ ಮೇಲೆ ಹೊರಿಸಿದರೆ ಖಂಡಿತವಾಗಿಯು ಅವನು ಒಂದು ಸುಳ್ಳಾರೋಪವನ್ನು ಸ್ಪಷ್ಟವಾದ ಪಾಪವನ್ನು ಹೊತ್ತುಕೊಂಡನು. info
التفاسير:

external-link copy
113 : 4

وَلَوْلَا فَضْلُ اللّٰهِ عَلَیْكَ وَرَحْمَتُهٗ لَهَمَّتْ طَّآىِٕفَةٌ مِّنْهُمْ اَنْ یُّضِلُّوْكَ ؕ— وَمَا یُضِلُّوْنَ اِلَّاۤ اَنْفُسَهُمْ وَمَا یَضُرُّوْنَكَ مِنْ شَیْءٍ ؕ— وَاَنْزَلَ اللّٰهُ عَلَیْكَ الْكِتٰبَ وَالْحِكْمَةَ وَعَلَّمَكَ مَا لَمْ تَكُنْ تَعْلَمُ ؕ— وَكَانَ فَضْلُ اللّٰهِ عَلَیْكَ عَظِیْمًا ۟

ಪೈಗಂಬರರೇ, ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಕಾರುಣ್ಯವು ಇಲ್ಲದಿರುತ್ತಿದ್ದರೆ ಅವರಲ್ಲಿ ಒಂದು ಗುಂಪು ನಿಮ್ಮನ್ನು ದಾರಿಗೆಡಿಸುವ ನಿರ್ಧಾರ ಮಾಡಿಬಿಡುತ್ತಿತ್ತು. ಆದರೆ ವಾಸ್ತವದಲ್ಲಿ ಅವರು ತಮ್ಮನ್ನೇ ದಾರಿಗೆಡಿಸುತ್ತಿದ್ದಾರೆ. ಅವರು ನಿಮಗೆ ಯಾವ ಹಾನಿಯನ್ನುಂಟು ಮಾಡಲಾರರು. ಅಲ್ಲಾಹನು ನಿಮ್ಮ ಮೇಲೆ ಗ್ರಂಥವನ್ನೂ, ಸುಜ್ಞಾನವನ್ನೂ ಅವತೀರ್ಣಗೊಳಿಸಿದ್ದಾನೆ ಮತ್ತು ನಿಮಗೆ ಅರಿವಿಲ್ಲದಿರುವುದನ್ನು ಕಲಿಸಿಕೊಟ್ಟಿದ್ದಾನೆ. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹವು ಅತ್ಯಂತ ಮಹತ್ತರವಾದುದಾಗಿದೆ. info
التفاسير: