Qurani Kərimin mənaca tərcüməsi - Kannad dilinə tərcümə - Bəşir Meysuri.

Səhifənin rəqəmi:close

external-link copy
12 : 25

اِذَا رَاَتْهُمْ مِّنْ مَّكَانٍ بَعِیْدٍ سَمِعُوْا لَهَا تَغَیُّظًا وَّزَفِیْرًا ۟

ಅದು ಅವರನ್ನು ದೂರದಿಂದಲೇ ಕಾಣುವಾಗ ಅವರು ಅದರ ಉಗ್ರ ಕೋಪವನ್ನು, ಅರ್ಭಟವನ್ನು ಕೇಳುವರು. info
التفاسير:

external-link copy
13 : 25

وَاِذَاۤ اُلْقُوْا مِنْهَا مَكَانًا ضَیِّقًا مُّقَرَّنِیْنَ دَعَوْا هُنَالِكَ ثُبُوْرًا ۟ؕ

ಮತು ್ತಅವರು ಬಂಧಿಸಲ್ಪಟ್ಟು ನರಕದ ಇಕ್ಕಟ್ಟಿನ ಸ್ಥಳವೊಂದರಲ್ಲಿ ಎಸೆಯಲ್ಲಪಟ್ಟರೆ ಅಲ್ಲಿ ಅವರು ತಮಗೆ ವಿನಾಶವನ್ನು ಕೂಗಿ ಕರೆಯುವರು. info
التفاسير:

external-link copy
14 : 25

لَا تَدْعُوا الْیَوْمَ ثُبُوْرًا وَّاحِدًا وَّادْعُوْا ثُبُوْرًا كَثِیْرًا ۟

(ಅವರೊಂದಿಗೆ ಹೇಳಲಾಗುವುದು:) ನೀವಿಂದು ಒಂದು ವಿನಾಶವನ್ನಲ್ಲ ಅನೇಕ ವಿನಾಶಗಳನ್ನು ಕೂಗಿ ಕರೆಯಿರಿ. info
التفاسير:

external-link copy
15 : 25

قُلْ اَذٰلِكَ خَیْرٌ اَمْ جَنَّةُ الْخُلْدِ الَّتِیْ وُعِدَ الْمُتَّقُوْنَ ؕ— كَانَتْ لَهُمْ جَزَآءً وَّمَصِیْرًا ۟

ಹೇಳರಿ: ನಿಮಗೆ ಇದು ಉತ್ತಮವೋ ಅಥವಾ ಭಯಭಕ್ತಿವುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ಶಾಶ್ವತ ಸ್ವರ್ಗೋದ್ಯಾನವೋ? ಅದು ಅವರ ಪಾಲಿಗೆ ಪ್ರತಿಫಲವೂ ಮತ್ತು ಅವರು ಮರಳುವ ನೈಜತಾಣವೂ ಆಗಿದೆ. info
التفاسير:

external-link copy
16 : 25

لَهُمْ فِیْهَا مَا یَشَآءُوْنَ خٰلِدِیْنَ ؕ— كَانَ عَلٰی رَبِّكَ وَعْدًا مَّسْـُٔوْلًا ۟

ಅವರಿಗೆ ಅದರಲ್ಲಿ ಅವರಿಚ್ಛಿಸುವುದೆಲ್ಲವೂ ಇರುವುದು. ಅಲ್ಲಿ ಅವರು ಶಾಶ್ವತವಾಗಿರುವರು. ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ, ಒಂದು ವಾಗ್ದಾನವಾಗಿದೆ. info
التفاسير:

external-link copy
17 : 25

وَیَوْمَ یَحْشُرُهُمْ وَمَا یَعْبُدُوْنَ مِنْ دُوْنِ اللّٰهِ فَیَقُوْلُ ءَاَنْتُمْ اَضْلَلْتُمْ عِبَادِیْ هٰۤؤُلَآءِ اَمْ هُمْ ضَلُّوا السَّبِیْلَ ۟ؕ

ಅವನು ಅವರನ್ನು, ಮತ್ತು ಅಲ್ಲಾಹನ ಹೊರತು ಅವರು ಆರಾಧಿಸುತ್ತಿದ್ದ ವಸ್ತುಗಳನ್ನು ಒಟ್ಟು ಸೇರಿಸುವ ದಿನದಂದು ಕೇಳುವನು: ನನ್ನ ಈ ದಾಸರನ್ನು ದಾರಿ ತಪ್ಪಿಸಿದ್ದು ನೀವೋ? info
التفاسير:

external-link copy
18 : 25

قَالُوْا سُبْحٰنَكَ مَا كَانَ یَنْۢبَغِیْ لَنَاۤ اَنْ نَّتَّخِذَ مِنْ دُوْنِكَ مِنْ اَوْلِیَآءَ وَلٰكِنْ مَّتَّعْتَهُمْ وَاٰبَآءَهُمْ حَتّٰی نَسُوا الذِّكْرَ ۚ— وَكَانُوْا قَوْمًا بُوْرًا ۟

ಅವರು ಉತ್ತರಿಸುವರು: ನೀನು ಪರಮ ಪಾವನನಾಗಿರುವೆ. ನಾವು ನಿನ್ನ ಹೊರತು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಳ್ಳುವುದು ನಮಗೆ ಭೂಷಣವಾಗಿರಲಿಲ್ಲ. ವಾಸ್ತವ ವಿಚಾವೇನೆಂದರೆ ನೀನು ಅವರಿಗೂ, ಅವರ ಪೂರ್ವಿಕರಿಗೂ ಸುಖಾನುಕೂಲತೆಯನ್ನು ನೀಡಿದ್ದೆ ಕೊನೆಗೆ ಅವರು ಉದ್ಬೋಧೆಯನ್ನೇ ಮರೆತು ಬಿಟ್ಟರು ಮತ್ತು ಅವರು ನಾಶ ಹೊಂದುವ ಜನರಾಗಿದ್ದರು. info
التفاسير:

external-link copy
19 : 25

فَقَدْ كَذَّبُوْكُمْ بِمَا تَقُوْلُوْنَ ۙ— فَمَا تَسْتَطِیْعُوْنَ صَرْفًا وَّلَا نَصْرًا ۚ— وَمَنْ یَّظْلِمْ مِّنْكُمْ نُذِقْهُ عَذَابًا كَبِیْرًا ۟

ನೀವು ಹೇಳುತ್ತಿರುವುದನ್ನು ಅವರು (ಮಿಥ್ಯಾರಾಧ್ಯರು) ಸುಳ್ಳಾಗಿಸಿ ಬಿಟ್ಟಿದ್ದಾರೆ. ಇನ್ನು ಯಾತನೆಯನ್ನು ಸವಿಸಲಿಕ್ಕಾಗಲೀ, ಮತ್ತು ಸಹಾಯ ಮಾಡಲಿಕ್ಕಾಗಲೀ, ನೀವು ಅಶಕ್ತರು ಮತ್ತು ನಿಮ್ಮ ಪೈಕಿ ಅಕ್ರಮವನ್ನು ಮಾಡಿದವನಿಗೆ ನಾವು ಮಹಾ ಯಾತನೆಯನ್ನು ಸವಿಯುವಂತೆ ಮಾಡುವೆವು. info
التفاسير:

external-link copy
20 : 25

وَمَاۤ اَرْسَلْنَا قَبْلَكَ مِنَ الْمُرْسَلِیْنَ اِلَّاۤ اِنَّهُمْ لَیَاْكُلُوْنَ الطَّعَامَ وَیَمْشُوْنَ فِی الْاَسْوَاقِ ؕ— وَجَعَلْنَا بَعْضَكُمْ لِبَعْضٍ فِتْنَةً ؕ— اَتَصْبِرُوْنَ ۚ— وَكَانَ رَبُّكَ بَصِیْرًا ۟۠

ನಾವು ನಿಮಗಿಂತ ಮೊದಲು ಕಳುಹಿಸಿರುವ ಸಂದೇಶವಾಹಕರೆಲ್ಲರೂ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪೇಟೆಗಳಲ್ಲೂ ನಡೆದಾಡುತ್ತಿದ್ದರು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಇನ್ನೂ ಕೆಲವರ ಪಾಲಿಗೆ ಪರೀಕ್ಷೆಯ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ಸಹನೆ ವಹಿಸುವಿರಾ? ನಿಮ್ಮ ಪ್ರಭುವು ಸರ್ವರನ್ನೂ ವೀಕ್ಷಿಸುವವನಾಗಿದ್ದಾನೆ. info
التفاسير: