আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
123 : 9

یٰۤاَیُّهَا الَّذِیْنَ اٰمَنُوْا قَاتِلُوا الَّذِیْنَ یَلُوْنَكُمْ مِّنَ الْكُفَّارِ وَلْیَجِدُوْا فِیْكُمْ غِلْظَةً ؕ— وَاعْلَمُوْۤا اَنَّ اللّٰهَ مَعَ الْمُتَّقِیْنَ ۟

ಓ ಸತ್ಯವಿಶ್ವಾಸಿಗಳೇ, ನಿಮ್ಮ ಸುತ್ತಮುತ್ತಲಲ್ಲಿರುವ ಸತ್ಯನಿಷೇಧಿಗಳೊಂದಿಗೆ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ದಾರ್ಢ್ಯವನ್ನು ಕಾಣಬೇಕು ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರೊಂದಿಗಿದ್ದಾನೆAಬ ವಿಶ್ವಾಸ ನಿಮಗಿರಲಿ. info
التفاسير:

external-link copy
124 : 9

وَاِذَا مَاۤ اُنْزِلَتْ سُوْرَةٌ فَمِنْهُمْ مَّنْ یَّقُوْلُ اَیُّكُمْ زَادَتْهُ هٰذِهٖۤ اِیْمَانًا ۚ— فَاَمَّا الَّذِیْنَ اٰمَنُوْا فَزَادَتْهُمْ اِیْمَانًا وَّهُمْ یَسْتَبْشِرُوْنَ ۟

ಮತ್ತು ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದಾಗ ಕೆಲವು ಕಪಟಿಗಳು ಹೇಳುವರು; ಈ ಅಧ್ಯಾಯವು ನಿಮ್ಮಲ್ಲಿನ ಯಾರ ವಿಶ್ವಾಸವನ್ನು ಅಧಿಕಗೊಳಿಸಿದೆ ? ಆದರೆ ಸತ್ಯವಿಶ್ವಾಸಿಗಳಿಗಂತು ಪ್ರಸ್ತುತ ಅಧ್ಯಾಯವು ಅವರ ವಿಶ್ವಾಸವನ್ನು ಅಧಿಕಗೊಳಿಸಿಬಿಟ್ಟಿದೆ ಮತ್ತು ಅವರು ಹರ್ಷಪಟ್ಟುಕೊಳ್ಳುತ್ತಾರೆ. info
التفاسير:

external-link copy
125 : 9

وَاَمَّا الَّذِیْنَ فِیْ قُلُوْبِهِمْ مَّرَضٌ فَزَادَتْهُمْ رِجْسًا اِلٰی رِجْسِهِمْ وَمَاتُوْا وَهُمْ كٰفِرُوْنَ ۟

ಆದರೆ ಹೃದಯಗಳಲ್ಲಿ ರೋಗವಿರುವವರಿಗೆ ಈ ಅಧ್ಯಾಯವು ಅವರ ಮಾಲಿನ್ಯತೆಯ ಜೊತೆಗೆ ಇನ್ನಷ್ಟು ಮಾಲಿನ್ಯತೆಯನ್ನು ಹೆಚ್ಚಿಸಿಬಿಟ್ಟಿತು ಮತ್ತು ಅವರು ಸತ್ಯನಿಷೇಧದ ಸ್ಥಿತಿಯಲ್ಲೇ ಮರಣಹೊಂದಿದರು. info
التفاسير:

external-link copy
126 : 9

اَوَلَا یَرَوْنَ اَنَّهُمْ یُفْتَنُوْنَ فِیْ كُلِّ عَامٍ مَّرَّةً اَوْ مَرَّتَیْنِ ثُمَّ لَا یَتُوْبُوْنَ وَلَا هُمْ یَذَّكَّرُوْنَ ۟

ಮತ್ತು ಅವರು ಪ್ರತಿಯೊಂದು ವರ್ಷವೂ ಒಂದೆರಡು ಬಾರಿ ಒಂದಲ್ಲ ಒಂದು ವಿಪತ್ತಿನಲ್ಲಿ ಸಿಲುಕಿಸಿಬಿಡುತ್ತಿದ್ದಾರೆಂಬುದು ಅವರಿಗೆ ಕಾಣುವುದಿಲ್ಲವೇ? ಹಾಗಿದ್ದೂ ಅವರು ಪಶ್ಚಾತ್ತಾಪಪಟ್ಟು ಮರಳುವುದಾಗಲಿ ಮತ್ತು ಉಪದೇಶವನ್ನು ಸ್ವೀಕರಿಸುದಾಗಲಿ ಮಾಡುವುದಿಲ್ಲ. info
التفاسير:

external-link copy
127 : 9

وَاِذَا مَاۤ اُنْزِلَتْ سُوْرَةٌ نَّظَرَ بَعْضُهُمْ اِلٰی بَعْضٍ ؕ— هَلْ یَرٰىكُمْ مِّنْ اَحَدٍ ثُمَّ انْصَرَفُوْا ؕ— صَرَفَ اللّٰهُ قُلُوْبَهُمْ بِاَنَّهُمْ قَوْمٌ لَّا یَفْقَهُوْنَ ۟

ಮತ್ತು ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದಾಗ ಅವರು (ಕಪಟಿಗಳು) ಪರಸ್ಪರರನ್ನು ನೋಡಿ (ಹೇಳುವರು) 'ನಿಮ್ಮನ್ನು ಯಾರೂ ನೋಡುತ್ತಿಲ್ಲವಲ್ಲ?' ಎಂದು. ಅನಂತರ ಅವರು ಹೊರಟು ಬಿಡುವರು. ಅಲ್ಲಾಹನು ಅವರ ಹೃದಯವನ್ನು ತಿರುಗಿಸಿಬಿಟ್ಟಿರುವನು, ಏಕೆಂದರೆ ಅವರು ತಿಳುವಳಿಕೆಯಿಲ್ಲದವರಾಗಿದ್ದಾರೆ. info
التفاسير:

external-link copy
128 : 9

لَقَدْ جَآءَكُمْ رَسُوْلٌ مِّنْ اَنْفُسِكُمْ عَزِیْزٌ عَلَیْهِ مَا عَنِتُّمْ حَرِیْصٌ عَلَیْكُمْ بِالْمُؤْمِنِیْنَ رَءُوْفٌ رَّحِیْمٌ ۟

ನಿಮ್ಮ ಬಳಿ ನಿಮ್ಮಿಂದಲೇ ಆದ ಓರ್ವ ಸಂದೇಶವಾಹಕರು ಆಗಮಿಸಿದ್ದಾರೆ. ನೀವು ಕಷ್ಟಪಡುವುದು ಅವರಿಂದ ಸಹಿಸಲಾಗುವುದಿಲ್ಲ. ಅವರು ನಿಮ್ಮ ಒಳಿತನ್ನು ಹಂಬಲಿಸುವವರು ಸತ್ಯವಿಶ್ವಾಸಿಗಳೊಂದಿಗೆ ಅತ್ಯಂತ ದಯೆಯುಳ್ಳವರು, ಕರುಣಾಮಯಿಯೂ ಆಗಿರುವರು. info
التفاسير:

external-link copy
129 : 9

فَاِنْ تَوَلَّوْا فَقُلْ حَسْبِیَ اللّٰهُ ۖؗ— لَاۤ اِلٰهَ اِلَّا هُوَ ؕ— عَلَیْهِ تَوَكَّلْتُ وَهُوَ رَبُّ الْعَرْشِ الْعَظِیْمِ ۟۠

ಅನಂತರ ಅವರು ವಿಮುಖರಾಗುವುದಾದರೆ ತಾವು ಹೇಳಿಬಿಡಿರಿ; ನನಗೆ ಅಲ್ಲಾಹನೇ ಸಾಕು, ಅವನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ, ನಾನು ಅವನ ಮೇಲೆಯೇ ಭರವಸೆಯಿಟ್ಟಿದ್ದೇನೆ. ಅವನು ಮಹಾ ಅರ್ಶ್ನ (ಸಿಂಹಾಸನದ) ಒಡೆಯನಾಗಿದ್ದಾನೆ. info
التفاسير: