আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
80 : 9

اِسْتَغْفِرْ لَهُمْ اَوْ لَا تَسْتَغْفِرْ لَهُمْ ؕ— اِنْ تَسْتَغْفِرْ لَهُمْ سَبْعِیْنَ مَرَّةً فَلَنْ یَّغْفِرَ اللّٰهُ لَهُمْ ؕ— ذٰلِكَ بِاَنَّهُمْ كَفَرُوْا بِاللّٰهِ وَرَسُوْلِهٖ ؕ— وَاللّٰهُ لَا یَهْدِی الْقَوْمَ الْفٰسِقِیْنَ ۟۠

ಓ ಪೈಗಂಬರರೇ ನೀವು ಅವರಿಗೋಸ್ಕರ ಪಾಪವಿಮೋಚನೆಯನ್ನು ಬೇಡಿದರೂ ಅಥವಾ ಬೇಡದಿದ್ದರೂ, ಮತ್ತು ಅವರಿಗೋಸ್ಕರ ಎಪ್ಪತ್ತು ಬಾರಿ ಪಾಪವಿಮೋಚನೆಯನ್ನು ಬೇಡಿದರೂ ಖಂಡಿತ 'ಅಲ್ಲಾಹನು ಅವರನ್ನು ಕ್ಷಮಿಸುವುದಿಲ್ಲ. ಇದೇಕೆಂದರೆ ಅವರು ಅಲ್ಲಾಹನನ್ನು ಅವನ ಸಂದೇಶವಾಹಕರನ್ನು ನಿರಾಕರಿಸಿದ್ದಾರೆ. ಇಂತಹ ಧಿಕ್ಕಾರಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗನ್ನು ನೀಡುವುದಿಲ್ಲ. info
التفاسير:

external-link copy
81 : 9

فَرِحَ الْمُخَلَّفُوْنَ بِمَقْعَدِهِمْ خِلٰفَ رَسُوْلِ اللّٰهِ وَكَرِهُوْۤا اَنْ یُّجَاهِدُوْا بِاَمْوَالِهِمْ وَاَنْفُسِهِمْ فِیْ سَبِیْلِ اللّٰهِ وَقَالُوْا لَا تَنْفِرُوْا فِی الْحَرِّ ؕ— قُلْ نَارُ جَهَنَّمَ اَشَدُّ حَرًّا ؕ— لَوْ كَانُوْا یَفْقَهُوْنَ ۟

ಯುದ್ದಕ್ಕೆ ಹೊರಡದೆ ಹಿಂದುಳಿದು ಬಿಟ್ಟವರು ಅಲ್ಲಾಹನ ಮತ್ತು ಸಂದೇಶವಾಹಕರ ಆದೇಶದ ವಿರುದ್ಧ ತಮ್ಮ ಮನೆಗಳಲ್ಲಿ ಕುಳಿತುಕೊಳ್ಳುವುದರಲ್ಲಿ ಸಂತೃಪ್ತರಾಗಿರುವರು. ಅವರು ಅಲ್ಲಾಹನ ಮಾರ್ಗದಲ್ಲಿ ತಮ್ಮ ತನು, ಮನ, ಧನಗಳಿಂದ ಯುದ್ಧ ಮಾಡುವುದನ್ನು ಅನಿಷ್ಟಪಟ್ಟರು ಮತ್ತು ಅವರು ಹೇಳಿದರು: 'ನೀವು ಈ ಉರಿಬಿಸಿಲಿನಲ್ಲಿ ಹೊರಡಬೇಡಿರಿ'. ಹೇಳಿರಿ: 'ನರಕಾಗ್ನಿಯು ಕಠಿಣ ಉರಿಯನ್ನು ಹೊಂದಿದೆ. ಅವರದನ್ನು ಗ್ರಹಿಸುವವರಾಗಿದ್ದರೆ! info
التفاسير:

external-link copy
82 : 9

فَلْیَضْحَكُوْا قَلِیْلًا وَّلْیَبْكُوْا كَثِیْرًا ۚ— جَزَآءً بِمَا كَانُوْا یَكْسِبُوْنَ ۟

ಆದ್ದರಿಂದ ಅವರು ಮಾಡುತ್ತಿದ್ದುದರ ಫಲವಾಗಿ ಅವರು ಸ್ವಲ್ಪವೇ ನಗಲಿ ಮತ್ತು ಹೆಚ್ಚು ಅಳಲಿ. info
التفاسير:

external-link copy
83 : 9

فَاِنْ رَّجَعَكَ اللّٰهُ اِلٰی طَآىِٕفَةٍ مِّنْهُمْ فَاسْتَاْذَنُوْكَ لِلْخُرُوْجِ فَقُلْ لَّنْ تَخْرُجُوْا مَعِیَ اَبَدًا وَّلَنْ تُقَاتِلُوْا مَعِیَ عَدُوًّا ؕ— اِنَّكُمْ رَضِیْتُمْ بِالْقُعُوْدِ اَوَّلَ مَرَّةٍ فَاقْعُدُوْا مَعَ الْخٰلِفِیْنَ ۟

ಇನ್ನು ಅಲ್ಲಾಹು ನಿಮ್ಮನ್ನು ಅವರ ಪೈಕಿ ಒಂದು ಗುಂಪಿನೆಡೆಗೆ ಮರಳಿಸಿದರೆ ಬಳಿಕ ಅವರು ನಿಮ್ಮೊಂದಿಗೆ ಯುದ್ದರಂಗಕ್ಕೆ ಹೊರಡಲು ಅನುಮತಿ ಕೇಳಿದರೆ ನೀವು ಹೇಳಿ ಬಿಡಿರಿ: 'ನೀವು ನನ್ನೊಂದಿಗೆ ಎಂದಿಗೂ ಹೊರಡಲಾರಿರಿ ಮತ್ತು ನೀವು ನನ್ನ ಜೊತೆ ಒಬ್ಬ ಶತ್ರುವಿನೊಂದಿಗೂ ಯುದ್ಧ ಮಾಡಲಾರಿರಿ. ನೀವು ಮೊದಲ ಬಾರಿಯೇ ಹಿಂದುಳಿದು ಬಿಡುವುದನ್ನು ಇಷ್ಟಪಟ್ಟಿದ್ದಿರಿ. ಆದ್ದರಿಂದ ನೀವು ಹಿಂದುಳಿದು ಬಿಟ್ಟವರೊಂದಿಗೇ ಕುಳಿತುಕೊಂಡಿರಿ. info
التفاسير:

external-link copy
84 : 9

وَلَا تُصَلِّ عَلٰۤی اَحَدٍ مِّنْهُمْ مَّاتَ اَبَدًا وَّلَا تَقُمْ عَلٰی قَبْرِهٖ ؕ— اِنَّهُمْ كَفَرُوْا بِاللّٰهِ وَرَسُوْلِهٖ وَمَاتُوْا وَهُمْ فٰسِقُوْنَ ۟

ಅವರ ಪೈಕಿ ಯಾರಾದರೂ ಮೃತಪಟ್ಟರೆ ನೀವು ಅವನ ಜನಾಝಾ ನಮಾಝ್ ಮಾಡಬೇಡಿರಿ. ಅವನ ಗೋರಿಯ ಬಳಿ ನಿಲ್ಲಲೂ ಬೇಡಿರಿ. ಅವರು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಧಿಕ್ಕಾರಿಗಳಾಗಿಯೇ ಮೃತಪಟ್ಟರು. info
التفاسير:

external-link copy
85 : 9

وَلَا تُعْجِبْكَ اَمْوَالُهُمْ وَاَوْلَادُهُمْ ؕ— اِنَّمَا یُرِیْدُ اللّٰهُ اَنْ یُّعَذِّبَهُمْ بِهَا فِی الدُّنْیَا وَتَزْهَقَ اَنْفُسُهُمْ وَهُمْ كٰفِرُوْنَ ۟

ನಿಮಗೆ ಅವರ ಸಂಪತ್ತುಗಳು ಮತ್ತು ಸಂತಾನಗಳು ಚಕಿತಗೊಳಿಸದಿರಲಿ. ನಿಶ್ಚಯವಾಗಿಯು ಅಲ್ಲಾಹನು ಅವರನ್ನು ಅವುಗಳ ಮೂಲಕ ಐಹಿಕ ಶಿಕ್ಷೆಯನ್ನು ನೀಡಲು ಮತ್ತು ಸತ್ಯನಿಷೇಧಿಗಳಿಗಿರುವಂತೆಯೇ ಅವರ ಪ್ರಾಣಹರಣ ಮಾಡಲು ಇಚ್ಛಿಸುತ್ತಾನೆ. info
التفاسير:

external-link copy
86 : 9

وَاِذَاۤ اُنْزِلَتْ سُوْرَةٌ اَنْ اٰمِنُوْا بِاللّٰهِ وَجَاهِدُوْا مَعَ رَسُوْلِهِ اسْتَاْذَنَكَ اُولُوا الطَّوْلِ مِنْهُمْ وَقَالُوْا ذَرْنَا نَكُنْ مَّعَ الْقٰعِدِیْنَ ۟

ಅಲ್ಲಾಹನಲ್ಲಿ ವಿಶ್ವಾಸವಿಡಿರಿ ಮತ್ತು ಅವನ ಸಂದೇಶವಾಹಕರೊAದಿಗೆ ಸೇರಿ ಯುದ್ಧ ಮಾಡಿರೆನ್ನುತ್ತಾ ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದರೆ ಅವರ ಪೈಕಿ ಐಶ್ವರ್ಯವಂತರ ವರ್ಗವು ನಿಮ್ಮ ಬಳಿಗೆ ಬಂದು ಹೀಗೆ ಅನುಮತಿಯನ್ನು ಕೇಳುತ್ತಾರೆ; ನಮ್ಮನ್ನು ಬಿಟ್ಟು ಬಿಡಿರಿ. ಯುದ್ಧಕ್ಕೆ ಹೊರಡದೆ ಕುಳಿತುಬಿಟ್ಟವರಲ್ಲೇ ನಾವು ಕುಳಿತುಬಿಡುವೆವು. info
التفاسير: